More

    ಗದಗ: ಜಿಲ್ಲೆಯಲ್ಲಿ ಉತ್ತಮ ಮುಂಗಾರು, 203 ಮಿಮಿ ಮಳೆ

    ವಿಜಯವಾಣಿ ಸುದ್ದಿಜಾಲ ಗದಗ
    ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಆಗಾಗ ಮಳೆರಾಯನ ಆಗಮನವಾಗುತ್ತಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಭರದಿಂದ ಸಾಗಿದೆ. ಕೃಷಿ ಚಟುವಟಿಕೆತಲ್ಲಿ ರೈತರು ಮಗ್ನರಾಗಿದ್ದಾರೆ. ಭೂಮಿ ಉಳಿಮೆಗೆ ರೈತರು ಸಿದ್ಧಗೊಂಡಿದ್ದರೆ, ಸಮರ್ಪಕ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಸಲು ಕೃಷಿ ಇಲಾಖೆ ಬಿತ್ತನೆ ಬೀಜಗಳ ಸಂಗ್ರಹ ಮಾಡಿಕೊಂಡಿದೆ ಮತ್ತು ವಿತರಿಸುತ್ತಿದೆ. ಜತೆಗೆ ರೈತರಿಗೆ ಹಲವು ಸಲಹೆಗಳನ್ನು ನೀಡುತ್ತಿದೆ.
    ಮುಂಗಾರು ಹಂಗಾಮಿಗೆ 3,10,000 ಹೆಕ್ಟೇರ್​ ಭೂ ಪ್ರದೇಶದಲ್ಲಿ ಬಿತ್ತನೆ ಗುರಿ ಇಲಾಖೆ ಹೊಂದಿದ್ದು, ಜಿಲ್ಲೆಯ ಸಣ್ಣ ಅತೀಸಣ್ಣ ರೈತರಿಗೆ ಅವರ ಹಿಡುವಳಿ ಅನ್ವಯ ಹಾಗೂ ಗರಿಷ್ಠ 5ಎಕರಿಗೆ ಸೀಮಿತವಾಗಿ ರಿಯಾಯತಿ ದರದಲ್ಲಿ ರೈತ ಸಂಪರ್ಕ ಕೇಂದ್ರ ಮುಖಾಂತರ ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ. ಈಗಾಗಲೇ 13,500 ಮೆಟ್ರಿಕ್​ ಟನ್​ ರಸಗೊಬ್ಬರ ದಾಸ್ತಾನು ಜಿಲ್ಲೆಯಲ್ಲಿ ಸಂಗ್ರಹವಿದೆ.
    ಜಿಲ್ಲೆಯಲ್ಲಿ 1.64 ಲಕ್ಷ ರೈತರಿದ್ದಾರೆ. ಸರ್ಕಾರದ ನಿಯಮದಂತೆ ಪ್ರತಿ ಎಕರೆಗೆ ಬೀಜ ಮತ್ತು ಗೊಬ್ಬರ ವಿತರಣೆ ಮಿತಿ ಹೊಂದಲಾಗಿದೆ. ಪ್ರತಿ ಎಕರೆಗೆ ತಲಾ 4 ಕೆಜಿ ಜೋಳ, ಮೆಕ್ಕೆಜೋಳ ಮತ್ತು 5 ಕೆಜಿ ಹೆಸರುಕಾಳು ವಿತರಣೆ ನಡೆದಿದೆ. ಬೀಜ ಖರೀದಿಸಲು ಸರ್ಕಾರದಿಂದ ಬಾರ್​ ಕೋಡ್​ ವ್ಯವಸ್ಥೆ ಜಾರಿಗೊಳಿಸಿದ್ದು ಈ ಬಾರಿಯ ವಿಶೇಷ. ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿದ ರೈತರು ಬೀಜ ಖರೀದಿ ಸಂದರ್ಭದಲ್ಲಿ ಅವರ ಎ್​ಐಡಿ ನಂಬರ್​ ಬಳಸಿ ಬೀಜ ವಿತರಣೆ ಮಾಡಲಾಗುತ್ತಿದೆ.

    ರೈತರಿಗೆ ಎಚ್ಚರಿಕೆ:
    ಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿರುವ ಕಾಳಸಂತೆಯಲ್ಲಿ ಪ್ರಮಾಣಿಕೃತವಲ್ಲದ ಗೊಬ್ಬರ ಮಾರುತ್ತಿರು ಪ್ರಕರಣ ಬೆಳಕಿಗೆ ಬರುತ್ತಿವರ. ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಮೇಲ್ಗೊಬ್ಬರವಾಗಿ ಯೂರಿಯಾ ಅಧಿಕವಾಗಿ ಬಳಸಲಾಗುತ್ತದೆ. ಪ್ರಮುಖವಾಗಿ ಈರುಳ್ಳಿ ಬೆಳೆಯಲ್ಲಿ ಕಳೆನಾಶಕದೊಂದಿಗೆ ಮಿಶ್ರಣವಾಗಿ ಅತಿಯಾಗಿ ಯುರಿಯಾ ಬಳಸಲಾಗುತ್ತದೆ. ಈ ರೀತಿಯಾದಾಗ ಯುರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚಾಗಿ, ಈ ರೀತಿಯ ಅತಿಯಾದ ಬೇಡಿಕೆ ಅನುಗುಣವಾಗಿ ಕಾಳಸಂತೆಕೋರರ ಹಾವಳಿ ಹಾಗೂ ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆ ಇದ್ದು, ಕೃಷಿ ಇಲಾಖೆ ಶಿಾರಸ್ಸು ಮಾಡಿದ, ಪ್ರಮಾಣೀಕರಿಸಿದ ರಸಗೊಬ್ಬರಗಳನ್ನು ಬಳಸಲು ಕೃಷಿ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದೆ.

    ರೈತರಿಗೆ ಸಲಹೆ ನೀಡಿದ ಕೃಷಿ ಇಲಾಖೆ:

    • ಪೋಷಕಾಂಶಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯೊಂದಿಗೆ ಬೆರೆತು ಬೆಳೆಗಳಿಗೆ ಲಭ್ಯವಾಗಲು ದ್ರವರೂಪದ ನ್ಯಾನೋ ಯುರಿಯಾ ಹಾಗೂ ನ್ಯಾನೋ ಡಿಎಪಿಯನ್ನು ಮೇಲ್ಗೊಬ್ಬರವಾಗಿ ಬಳಸುವುದು ಉತ್ತಮ.
    • ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ತ್ಯಾಜ್ಯಗಳ ಮರುಬಳಕೆ ಅನುಕೂಲಕರ. ಇದರಿಂದ ಮಣ್ಣಿನಲ್ಲಿರುವ ಸೂಕ್ಷ$್ಮ ಪೋಷಕಾಂಶಗಳು ಬೆಳೆಗಳಿಗೆ ಸಿಗುವಂತಾಗಿ ಮಣ್ಣಿನ ಲವತ್ತತೆ ಹೆಚ್ಚಾಗುತ್ತದೆ.
    • ಬೀಜೋಪಚಾರ ಮಾಡಿದ ಬೀಜಗಳ ಬಿತ್ತನೆಯಿಂದ ಶಿಲೀಂದ್ರಗಳಿಂದ ಬರುವ ರೋಗಗಳನ್ನು ಹತೋಟಿಗೆ ತರಬಹುದು.
    • ಖಾಸಗಿ ವಿತರಕರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸುವ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಸಂಪಕಿರ್ಸಿ ಮಾಹಿತಿ ಪಡೆಯುವುದು ಸೂಕ್ತ.
    • ಪರವಾನಿಗೆ ಪಡೆದ ಮಾರಾಟಗಾರರಿಂದ ಮಾತ್ರ ಪ್ರಮಾಣೀಕರಿಸಿದ ಬೀಜ ಹಾಗೂ ರಸಗೊಬ್ಬರ ಖರೀದಿಸಿಸಲು ಸಲಹೆ.

    ಬಿತ್ತನೆ ಗುರಿ:
    ಬಿತ್ತನೆ ಬೀಜ – ಹೆಕ್ಟೇರ್​ – ಸಾಧನೆ
    ಹೆಸರು – 1,25,000 – 1,29,000
    ಮೆಕ್ಕೆಜೋಳ – 1,10,000 – 96000
    ಶೇಂಗಾ – 29000 – 23000
    ಸೂರ್ಯಕಾಂತಿ – 11500 – 6000
    ಹತ್ತಿ – 12000 – 6000

    ಜಿಲ್ಲೆಯಲ್ಲಿ ಸಾಗುವಳಿ ಭೂಮಿ – 3.92 ಲಕ್ಷ ಹೆಕ್ಟೇರ್​
    ಮುಂಗಾರು ಹಂಗಾಮಿನ ಬಿತ್ತನೆ ಗುರಿ – 3.10 ಲಕ್ಷ ಹೆಕ್ಟೇರ್​
    ಜಿಲ್ಲೆಯ ರೈತರ ಸಂಖ್ಯೆ – 1.60 ಲಕ್ಷ

    ಗೊಬ್ಬರ ದಾಸ್ತಾನು:
    ಯೂರಿಯಾ – 7646 ಟನ್​
    ಡಿಎಪಿ – 2096 ಟನ್​
    ಎನ್​ಪಿಕೆ – 7106 ಟನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts