More

    ಗದಗ: ಸಂಗೀತ ಮಹಾವಿದ್ಯಾಲಯದಲ್ಲಿ ಕಲಿತು ಪಿ ಎಚ್ ಡಿ ಪದವಿಯನ್ನು ಅಲಂಕರಿಸಿದ 17 ಜನ ವಿದ್ಯಾರ್ಥಿಗಳಿಗೆ ಸನ್ಮಾನ

    ಗದಗ: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಸ್ಥಾಪಿಸಿದ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಕಲಿತು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿಯನ್ನು ಪಡೆಯಲು ಉಭಯಶ್ರೀಗಳ ಆಶೀರ್ವಾದವೇ ಕಾರಣವಾಗಿದೆ ಎಂದು ಡಾ. ವೆಂಕಟೇಶ್ ಪೂಜಾರ್    ಅವರು ಹೇಳಿದರು.

    ಡಾ ಪಿ ಜಿ ಎ ಎಸ ಸಮಿತಿಯ  ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 17 ಜನ ಪಿ ಎಚ್ ಡಿ  ಪದವಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಮಹಾವಿದ್ಯಾಲಯದ ಉಪನ್ಯಾಸಕ ವರ್ಗದವರ ಮಾರ್ಗದರ್ಶನ ಸಲಹೆ ಹೆಚ್ಚಿನ ವ್ಯಾಸಂಗ ಮಾಡಲು ಸಹಾಯವಾಯಿತು ಎಂದ ಅವರು ಎಲ್ಲ ಪಿ ಎಚ್ ಡಿ ಪದವೀಧರರು ಕೂಡಿ ಮಹಾವಿದ್ಯಾಲಯಕ್ಕೆ ಗುರುತರವಾದ ಕಾಣಿಕೆಯನ್ನು ನೀಡುವದಾಗಿ ಅವರು ಎಲ್ಲರ ಪರವಾಗಿ ಹೇಳಿದರು.

    ಪಂಡಿತ್ ಪಂಚಾಕ್ಷರ್ ಗವಾಯಿಗಳವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್ ಎಸ್ ದಾನರಡ್ಡಿ ಅವರು ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಪಿಎಚ್ ಡಿ ಪದವಿಯನ್ನು ಪಡೆದಿರುವುದು ಮಹಾವಿದ್ಯಾಲಯಕ್ಕೆ ಕೀರ್ತಿಪ್ರಾಯವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಸಂಪನ್ಮೂಲ ವ್ಯಕ್ತಿಯಾಗಿದ್ದು ಎಲ್ಲ ವಿದ್ಯಾರ್ಥಿಗಳ ಸಾಧನೆ ಮಹಾವಿದ್ಯಾಲಯದ ನ್ಯಾಕ್ ತಪಾಸಣೆ ವೇಳೆಯಲ್ಲಿ ಮಹಾವಿದ್ಯಾಲಯಕ್ಕೆ ಹೆಚ್ಚಿನ ಅಂಕ ತರಲು  ಸಹಾಯವಾಗುತ್ತದೆ ಎಂದು ಅವರು ಹೇಳಿದರು.

    ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ ಅವರು ಮಾತನಾಡಿ ವಿದ್ಯಾರ್ಥಿಗಳ ಶ್ರಮ ವಿನಯ ಗುರುವಿನ ಆಶೀರ್ವಾದ ಫಲದಿಂದ ವಿದ್ಯಾರ್ಥಿಗಳು ತಮ್ಮ ಕಾಲು ಮೇಲೆ ತಾವು ನಿಂತು ಸಂಗೀತ ಶಿಕ್ಷಕರಾಗಿ ನಾಡಿನ ಉದ್ದಗಲಕ್ಕೂ ಸೇವೆ ಸಲ್ಲಿಸುತ್ತಿರುವರು ಮಹಾವಿದ್ಯಾಲಯದ ವತಿಯಿಂದ ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸುವ ದಾಗಿ ಅವರು ಹೇಳಿದರು.

    ವೇದಿಕೆ ಮೇಲೆ ನಿವೃತ್ತ ಉಪನ್ಯಾಸಕ ಬಸವರಾಜಪ್ಪ, ಎಸ್ ಎಂ ಗೌಡರ, ಎಸ್ ಆರ್ ಇಟ್ಟಿಗಿ ಹಾಗೂ ಪ್ರಾಚಾರ್ಯ ಶ್ರೀಮತಿ ಡಾ ಸುಮಿತ್ರ ಹಿರೇಮಠ್ ಅವರು ಗಳು ಪಿ ಎಚ್ ಡಿ ಪದವಿ ಪಡೆದ ಡಾ, ವೆಂಕಟೇಶ್ ಪೂಜಾರಿ,ಡಾ. ಅರಣ್ಯ ಕುಮಾರ್ ಮುನೇನಿ,ಡಾ .ನಾಗರಾಜ್ ಮುರ್ಗಿ, ಡಾ. ಭವ್ಯರಾಣಿ, ಡಾ. ಚೇತನಾ ಪತ್ತಾರ್, ಡಾ ಅಯ್ಯಪ್ಪ ಹಲಗಲಿಮಠ,ಡಾ. ರೇವಣಸಿದ್ದಪ್ಪ ಬೆನ್ನೂರ್, ಡಾ. ಗುರುಬಸವ ಮಹಾಮನಿ, ಡಾ. ಎ ಎಲ್ ದೇಸಾಯಿ, ಡಾ ಪರಶುರಾಮ್ ಕಟ್ಟಿಸಂಗಾವಿ, ಡಾ ಕಲ್ಮೇಶ ಬಡಿಗೇರ್, ಡಾ ಶಿವರಾಂ ವೀರಾಪುರ್, ಡಾ. ಅರ್ಜುನ್ ವಠಾರ, ಡಾ. ಕಾಸಿ ಲಿಂಗ ಮಠದ, ಡಾ. ಪುಟ್ಟರಾಜ ಭಜಂತ್ರಿ, ಡಾ. ತಿಮ್ಮಣ್ಣ ಭಜಂತ್ರಿ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವ  ಸಮರ್ಪಿಸಿದರು.

    ಪ್ರಾರಂಭದಲ್ಲಿ ವಿದ್ಯಾರ್ಥಿ ವೃಂದದವರಿಂದ ಪ್ರಾರ್ಥನಾ ಗೀತೆ ಜರುಗಿತು ಇವರಿಗೆ ತಬಲಾ ಸಾಥ್ ಶರಣಪ್ಪ ಕಲ್ಬುರ್ಗಿ ಹಾರ್ಮೋನಿಯಂ ಸಾಥ್ ವಿ ಎಂ ಪಟ್ಟದಕಲ್
    ಉಪನ್ಯಾಸಕ ಗಂಗಾಧರ ಹಿಡಿಕಿಮಠ ಅವರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಿದರು. ಡಾ. ಎಸ್ ಎಸ್ ಗಡ್ಡದಮಠ ಕಾರ್ಯಕ್ರಮ ನಿರೂಪಣೆ ಮಾಡಿದರು,ಡಾ. ನಾರಾಯಣ ಹಿರೇಕೂಳಚ್ಚಿ ಸರ್ವರನ್ನು ಸ್ವಾಗತಿಸಿದರು,
    ಹಿಂದಿ ಉಪನ್ಯಾಸಕ ಎನ್ ಎಂ ಶೇಖ್ , ಕುಮಾರಿ ರಂಜಿತಾ ಬಡಿಗೇರ್, ನಿಖಿತಾ, ವಿಜಯಲಕ್ಷ್ಮಿ ಹಿರೇಮಠ, ಶೃತಿ ಪವನ್, ಅನಗ ಕುಲಕರ್ಣಿ, ಪ್ರತಾಪ್ ರೆಡ್ಡಿ , ರಾಹುಲ್ ರಾಠೋಡ್, ಯಶೋಧ ಮಾದರ್, ಸುಮತಿ ಮುರುಗೋಡ್, ಸುರೇಶ್ ಮಡಿವಾಳರ್, ಸಂಗೀತಾ ಡಿ ಎಂ, ವಾಣಿಶ್ರೀ, ವಿಜಯಕುಮಾರ್ ಬೊಶೆಟ್ಟಿ, ಶ್ರೇಯಸ್ ಕೃಷ್ಣಾಪುರ್, ಶ್ರೀ ಶಾಮ್ ರಾವ್ ಫುಲಾರೆ , ಡಾ. ವಿಶ್ವನಾಥ್ ಹಿರೇಮಠ್,   ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ. ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts