More

    ಹೆಜ್ಜೆ ಗುರುತು ಉಳಿಯುವಂತೆ ಕಾಯಕವಿರಬೇಕು: ಡಾ.ಸಿದ್ನೇಕೊಪ್ಪ

    ಗದಗ: ಸರ್ಕಾರಿ ಕಾಲೇಜುಗಳಲ್ಲಿ ಓದುವವರಲ್ಲಿ ಶೇ.90 ರಷ್ಟು ಜನ ಬಡವರ, ರೈತರ ಮಕ್ಕಳು. ಅದರಲ್ಲೂ ಗ್ರಾಮೀಣ ಪ್ರದೇಶ ಹಿನ್ನಲೆಯುಳ್ಳವರು. ಅವರಿಗೂ ಖಾಸಗಿ ಕಾಲೇಜುಗಳಲ್ಲಿ ಸಿಗುವ ಸೌಲಭ್ಯಗಳು ಸಿಗುವಂತಾಗಲು ತಾವು ಪ್ರಮಾಣಿಕ ಪ್ರಯತ್ನ ಮಾಡಿದ್ದಾಗಿ ಡಾ.ಎಸ್.ಎಫ್. ಸಿದ್ನೇಕೊಪ್ಪ ಹೇಳಿದರು.
    ಬೆಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾಗಿರುವ ಡಾ.ಎಸ್.ಎಫ್. ಸಿದ್ನೇಕೊಪ್ಪ ಅವರು ಜೂ.30 ರಂದು ನಿವೃತ್ತಿ ಗೊಳ್ಳಲಿರುವ ನಿಮಿತ್ತ ಶನಿವಾರ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಹೃದಯಸ್ಪರ್ಶಿ’ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
    ಹಿಂದೆಲ್ಲ ಇಂದಿನAತೆ ಸಂಪರ್ಕಕ್ಕೆ 2ಜಿ, 3ಜಿ, 4ಜಿ, 5ಜಿ ಅಂತೆಲ್ಲ ಇರಲಿಲ್ಲ. ಅಂದು ವಿದ್ಯಾರ್ಥಿಗಳ ಹಿಂದೆ ‘ಗುರೂ’ಜಿ ಇದ್ದರು. ಆ ಕಾರಣಕ್ಕೆ ‘ಶಿಕ್ಷಕರು’ ನಮಗೆ ಕರ್ಣನ ಕವಚ ಇದ್ದಂತೆ. ಅವರಿಗೆ ಸದಾ ಗೌರವಿಸಬೇಕು ಎಂದು ಹೇಳಿದ ಅವರು, ನಿವೃತ್ತಿ ಸರ್ಕಾರದ ನಿಯಮ. ಆದರೆ, ನಮ್ಮ ಬಳಿಕವೂ ನಮ್ಮ ಹೆಜೆ ಗುರುತುಗಳು ಉಳಿಯುವಂತೆ ನಮ್ಮ ಕಾಯಕ ಇರಬೇಕು. ಆ ಸಂತೃಪ್ತಿ ನನ್ನದಾಗಿದೆ ಎಂದು ಹೇಳಿ, ನನಗೆ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಸಹಕಾರ ಮರೆಯುವುದಿಲ್ಲ ಎಂದರು.
    ಸ್ನೇಹಿತರು, ಶಿಷ್ಯರು ಭಾವುಕ: ಡಾ.ಎಸ್.ಎಫ್. ಸಿದ್ನೇಕೊಪ್ಪ ಅವರ ನಿವೃತ್ತಿ ನಿಮಿತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರೇಗಲ್ಲ ಸಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಲ್. ಗುಳೇದಗುಡ್ಡ, ಪ್ರೊ.ಶೇಷಾದ್ರಿ, ಪ್ರೊ. ಮಹಾಂತೇಶ ಸೇರಿ ಹಲವರು ಮಾತನಾಡುತ್ತಿದ್ದಾಗ ಕೆಲ ಹೊತ್ತು ಭಾವುಕರಾದ ಘಟನೆಯೂ ನಡೆಯಿತು. ಕೆಲ ವಿದ್ಯಾರ್ಥಿಗಳು ಡಾ.ಸಿದ್ನೇಕೊಪ್ಪ ಅವರ ಕುರಿತು ಕವನ ರಚಿಸಿ ವಾಚನ ಮಾಡಿದರೆ, ಮತ್ತೆ ಕೆಲವರು ಅನಿಸಿಕೆಗಳನ್ನು ಹಂಚಿಕೊAಡರು.
    ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶಿವಪ್ಪ ಕುರಿ, ಡಾ.ಆರ್.ಎಂ. ಕಲ್ಲನಗೌಡ್ರ, ಪ್ರೊ.ಕಾಶಪ್ಪನವರ, ಸರ್ಕಾರಿ ಪದವಿ ಕಾಲೇಜು ಗಳ ಅತಿಥಿ ಉಪ ನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನಂತಗೌಡ ಆರ್. ಕಲ್ಮನಿ ಸೇರಿ ಹಲವರು ಮಾತನಾಡಿದರು.
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ, ಪತ್ರಕರ್ತ ಜಗದೀಶ ಕುಲಕರ್ಣಿ ಸೇರಿ ಹಲವರು ವೇದಿಕೆಯಲ್ಲಿದ್ದರು.
    ಬಳಿಕ ಡಾ.ಎಸ್.ಎಫ್. ಸಿದ್ನೇಕೊಪ್ಪ ಅವರಿಗೆ ಕಾಲೇಜಿನ ವಿದ್ಯಾರ್ಥಿಗಳು ಗುರುವಂದನೆ ಮೂಲಕ ಸನ್ಮಾನಿಸಿ, ಗೌರವಿಸಿದರು.
    ಇದೇ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಖಲೀಲ್ ಅಹ್ಮದ್ ಚಿಕ್ಕೇರೂರ ಅವರಿಗೆ ಡಾ.ಎಸ್.ಎಫ್. ಸಿದ್ನೇಕೊಪ್ಪ ಅವರು ಪ್ರಾಚಾರ್ಯ ಹುದ್ದೆಯನ್ನು ಹಸ್ತಾಂತರ ಮಾಡಿದರು.
    ಡಾ.ಕಸ್ತೂರಿ ದಳವಾಯಿ ನಿರೂಪಿಸಿದರು. ಪ್ರೊ.ಉಮಾ ಕಣವಿ ಅವರು ಸ್ವಾಗತಿಸಿದರು. ಸರ್ಕಾರಿ ಪದವಿ ಕಾಲೇಜು ಗಳ ಅತಿಥಿ ಉಪ ನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನಂತಗೌಡ ಆರ್. ಕಲ್ಮನಿ ಅವರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts