More

    ಇಂದಿನಿಂದ ಹೊಸ ಅಪರಾಧ ಕಾಯ್ದೆ ಜಾರಿಗೆ; ನಾಗರಿಕ ಸುರಕ್ಷೆ, ನ್ಯಾಯ ಸಂಹಿತೆ, ಸಾಕ್ಷ್ಯ ಅಧಿನಿಯಮ ಅನುಷ್ಠಾನ

    ನವದೆಹಲಿ: ಬ್ರಿಟಿಷರ ಪಳೆಯುಳಿಕೆಗಳಲ್ಲಿ ಒಂದಾದ ಇಂಡಿಯನ್ ಪೀನಲ್ ಕೋಡ್ (ಐಪಿಸಿ), ಕ್ರಿಮಿನಲ್ ಪೀನಲ್ ಕೋಡ್ (ಸಿಆರ್​ಪಿಸಿ) ಸೋಮವಾರದಿಂದ ಇತಿಹಾಸದ ಪುಟ ಸೇರಲಿವೆ. ಬದಲಿಗೆ, ಕೇಂದ್ರದ ಎನ್​ಡಿಎ ಸರ್ಕಾರ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜಾರಿಗೆ ಬರಲಿವೆ.

    ಇದನ್ನೂ ಓದಿ: ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಡಿಕೆ! 2025ಕ್ಕೆ ಕಪ್ ನಮ್ದೆ ಎಂದ ಆರ್​ಸಿಬಿ ಫ್ಯಾನ್ಸ್

    ಸರ್ಕಾರ ಸಂಸತ್ತಿನಲ್ಲಿ ಈ ಸಂಬಂಧದ ವಿಧೇಯಕಗಳಿಗೆ 2023ರ ಡಿ. 21ರಂದು ಅನುಮೋದನೆ ಪಡೆದಿದೆ. ಡಿ. 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಪಶ್ಚಿಮ ಬಂಗಾಳವೂ ಸೇರಿದಂತೆ ಕೆಲವು ರಾಜ್ಯಗಳು ಹೊಸ ಅಪರಾಧ ಕಾನೂನು ಜಾರಿ ಮುಂದೂಡುವಂತೆ ಆಗ್ರಹಿಸಿದ್ದರೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಸೋಮವಾರದಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಸೆಕ್ಷನ್​ಗಳನ್ನು ಬರೆಯಲು ಪೊಲೀಸರು ಸಿದ್ಧರಾಗಿದ್ದಾರೆ.

    ಚಾರ್ಜ್​ಶೀಟ್ ಸಲ್ಲಿಕೆ ಅವಧಿ 90 ದಿನಗಳಿಂದ 60 ದಿನಕ್ಕೆ ಇಳಿಕೆ, ತೀರ್ಪು ನೀಡುವ ಅವಧಿ 60 ದಿನಗಳಿಂದ 45 ದಿನಗಳಿಗೆ ಇಳಿಕೆ ಮಾಡಲಾಗಿದ್ದು, ಇದರಿಂದ ತ್ವರಿತ ನ್ಯಾಯನೀಡಿಕೆ ಸಾಧ್ಯವಾಗಲಿದೆ. ಆರೋಪಿ ಬಿಡುಗಡೆ, ಪೋಕ್ಸೋ ಸಂಬಂಧಿತ ವರದಿ ಸಲ್ಲಿಕೆ, ಎಲೆಕ್ಟ್ರಾನಿಕ್ ಉಪಕರಣ ಮೂಲಕ ಸಮನ್ಸ್ ತಲುಪಿಸುವುದು ಸೇರಿದಂತೆ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ.

    ಇದನ್ನೂ ಓದಿ: ಮುಡಾದಲ್ಲಿ ಬ್ರಹ್ಮಾಂಡ ಗೋಲ್ಮಾಲ್! ಸಿಎಂ ತವರಿನಲ್ಲೇ 4 ಸಾವಿರ ಕೋಟಿ ರೂ. ಭ್ರಷ್ಟಾಚಾರ

    46ಕ್ಕೂ ಅಧಿಕ ಸೆಕ್ಷನ್​ಗಳನ್ನು ಬದಲಿಸಲಾಗಿದೆ. ಇನ್ನು ಮುಂದೆ ಆತ್ಮಹತ್ಯೆ ವರದಿಯನ್ನು 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್​ಗೆ ಸಲ್ಲಿಸಬೇಕು. ವರದಿ, ಸಮನ್ಸ್​ಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಲ್ಲಿಸಬಹುದು. 60 ವರ್ಷ ಮೇಲ್ಪಟ್ಟ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಪೊಲೀಸರು ಠಾಣೆಗೆ ಕರೆಸುವಂತಿಲ್ಲ. ಆರೋಪಿ ತಾನು ಇದ್ದಲ್ಲಿಂದಲೇ ಆಡಿಯೋ/ವಿಡಿಯೋ ಮೂಲಕ ವಿಚಾರಣೆಗೆ ಹಾಜರಾಗಬಹುದು.

    ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಡಿಕೆ! 2025ಕ್ಕೆ ಕಪ್ ನಮ್ದೆ ಎಂದ ಆರ್​ಸಿಬಿ ಫ್ಯಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts