More

    ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿ

    ಅಫಜಲಪುರ: ರಾಜ್ಯ ಸರ್ಕಾರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಸೂಚನೆ ನೀಡಿದರು.

    ಬಿದನೂರಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿ ಮುಂಗಾರು ಚುರುಕಾಗಿದ್ದು, ಬಿತ್ತನೆಗೆ ಅನುಕೂಲರ ವಾತಾವರಣವಿದೆ. ಸಣ್ಣ ಹಿಡುವಳಿದಾರರಿಗೆ ಬೀಜ, ರಸ ಗೊಬ್ಬರ ಖರೀದಿಸುವುದು ಕಷ್ಟವಾಗುತ್ತಿದ್ದು, ಅರ್ಹರನ್ನು ಗುರುತಿಸಿ ಉಚಿತವಾಗಿ ಬೀಜ ನೀಡಲಾಗುತ್ತಿದೆ ಎಂದು ಹೇಳಿದರು.

    ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಗಡಗಿಮನಿ ಮಾತನಾಡಿ, ರೈತರು ಹತ್ತಿ, ಸೂರ್ಯಕಾಂತಿ ಬೀಜಗಳನ್ನು ಖಾಸಗಿ ಆಗ್ರೋ ಕೇಂದ್ರಗಳಲ್ಲಿ ಖರೀದಿಸುತ್ತಿದ್ದಾರೆ. ಖಾಸಗಿ ಅವರು ಹೆಚ್ಚಿನ ದುಡ್ಡು ಪಡೆದು ಬೀಜ ಮಾರಾಟ ಮಾಡುವುದು ಗಮನಕ್ಕೆ ಬಂದಿದ್ದು, ಈಗಾಗಲೇ ಕೆಲ ಆಗ್ರೋಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ರೈತರು ಡಿಎಪಿ ಜತೆಗೆ ಪರ್ಯಾಯ ರಸಗೊಬ್ಬರಗಳನ್ನು ಬಳಸಬೇಕು. ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಆ್ಯಪ್ ರಚಿಸಿದ್ದು, ನಿಮ್ಮ ಮೊಬೈಲ್ ಮೂಲಕ ಜಮೀನಿನಲ್ಲಿನ ಬೆಳೆಗಳನ್ನು ಸಮೀಕ್ಷೆ ಮಾಡಬಹುದಾಗಿದೆ ಎಂದರು.

    ಪ್ರಮುಖರಾದ ಸಿದ್ದು ಸಿರಸಗಿ, ಪ್ರವೀಣ ದೇವತ್ಕಲ್, ವಿಶ್ವನಾಥ ಕಾರ್ನಾಡ್​, ಮಹಾಂತ ನಡಗಟ್ಟಿ, ಅಂಬರೀಶ ತಳವಾರ, ಸಿದ್ದಣ್ಣ ಮೇಳಕುಂದಿ, ಬುದ್ದಿವಂತ ಚಿಕ್ಕಲಗಿ, ಸೈಪನ್‌ಸಾಬ್, ಧರ್ಮಣ್ಣ ಮಲ್ಲಾಬಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts