More

    ಗೂಗಲ್​ ಮ್ಯಾಪ್​ ಅವಾಂತರ; ರಸ್ತೆ ಬಿಟ್ಟು ನದಿಗೆ ಇಳಿದ ಕಾರು, ಮುಂದಾಗಿದ್ದೇನು?

    ತಿರುವನಂತಪುರಂ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗುತ್ತೇವೆ. ಅದರಲ್ಲೂ ಗೂಗಲ್​ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್​ ಮ್ಯಾಪ್​ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ಕಾಸರಗೋಡು ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಟ್ಟಿಕೋಲ್ ಬಳಿಯ ಪಲ್ಲಂಚಿಯಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಕಾಞಂಗಾಡ್ ಮೂಲದ ಅಬ್ದುಲ್ ರಹಸೀದ್ ಮತ್ತು ತಸ್ರೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಬ್ಬರು ಪ್ರಾಣಪಾಯದಿಂದ ಫಾರಾಗಿದ್ದು. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

    ಇದನ್ನೂ ಓದಿ: ಆಡುವುದಕ್ಕೆ ಪಿಚ್​ ಸೂಕ್ತವಾಗಿರಲಿಲ್ಲ; ಸೆಮಿಫೈನಲ್​ ಸೋಲಿನ ಬಳಿಕ​ ಹೊಸ ಆರೋಪ ಮಾಡಿದ ಅಫ್ಘಾನಿಸ್ತಾನ​ ಕೋಚ್

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಗಾಯಾಳುಗಳಿಬ್ಬರು ಕೆಲಸದ ನಿಮಿತ್ತ ದಕ್ಷಿಣ ಕನ್ನಡ ಉಪ್ಪಿನಂಗಡಿಗೆ ತೆರಳುತ್ತಿದ್ದರು. ನದಿಗೆ ಅಡ್ಡಲಾಗಿ ಬ್ರಿಡ್ಜ್​ ಒಂದನ್ನು ಕಟ್ಟಲಾಗಿದ್ದು, ಅದರ ಬೇರೆ ಮಾರ್ಗದಲ್ಲಿ ಹೋಗುವ ಬಗ್ಗೆ ಇವರಿಬ್ಬರು ಮಾತನಾಡಿಕೊಂಡಿದ್ದು, ಗೂಗಲ್​ನಲ್ಲಿ ಬದಲಿ ಮಾರ್ಗವನ್ನು ಹುಡುಕಿದ್ದಾರೆ. ಗೂಗಲ್​ ತೋರಿಸಿದ ಮಾರ್ಗದ ಪ್ರಕಾರ ಇವರು ತೆರಳಿದ್ದು, ಕಾರು ರಸ್ತೆ ಬಿಟ್ಟು ನದಿಗೆ ಇಳಿದಿದೆ.

    ನದಿಯಲ್ಲಿ ಕಾರು ಕೊಚ್ಚಿಕೊಂಡು ಹೋದರು ಗಾಯಾಳುಗಳಿಬ್ಬರು ಮರದ ಕೊಂಬೆಯ ಸಹಾಯ ಮೂಲಕ ಹೊರಬಂದಿದ್ದು, ಬಳಿಕ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣ ತಂಡ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts