More

    ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಭಾರತದ ವನಿತೆಯರು; 147 ವರ್ಷಗಳಲ್ಲಿ ಇದೇ ಮೊದಲು

    ಚೆನ್ನೈ: ಇಲ್ಲಿನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್​ ಇಂಡಿಯಾದ ವನಿತೆಯರು ಬೃಹತ್​ ಮೊತ್ತವನ್ನು ಪೇರಿಸುವ ಮೂಲಕ ವಿಶ್ವದಾಖಲೆ ಒಂದನ್ನು ಬರೆದಿದ್ದಾರೆ. ಅದು ಕೂಡ ಆಸ್ಟ್ರೇಲಿಯಾ ಹೆಸರಿನಲ್ಲಿದ್ದ ದಾಖಲೆ ಎಂಬುದು ಮತ್ತಷ್ಟು ವಿಶೇಷವಾಗಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ನಿರ್ಧಾರವನ್ನು ಸಮರ್ಥಿಸಿಕೊಂಡ ಆರಂಭಿಕರಾದ ಶೇಫಾಲಿ ವರ್ಮಾ (205 ರನ್, 197 ಎಸೆತ, 23 ಬೌಂಡರಿ, 8 ಸಿಕ್ಸರ್), ಸ್ಮೃತಿ ಮಂಧಾನ (149 ರನ್, 161 ಎಸೆತ, 27 ಬೌಂಡರಿ, 1 ಸಿಕ್ಸರ್) 292 ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿ ಬೇರ್ಪಟ್ಟರು.

    ಆರಂಭಿಕರಿಬ್ಬರು ಔಟಾದ ಬಳಿಕ ಬ್ಯಾಟಿಂಗ್​ ಮಾಡಿದ ಜೆಮಿಮಾ ರೊಡ್ರಿಗೋಸ್ (55 ರನ್, 94 ಎಸೆತ, 8 ಬೌಂಡರಿ), ರಿಚಾ ಗೋಷ್​ (86 ರನ್, 90 ಎಸೆತ, 16 ಬೌಂಡರಿ), ನಾಯಕಿ ಹರ್ಮಾನ್​ಪ್ರೀತ್​ ಕೌರ್​ (69 ರನ್, 115 ಎಸೆತ, 4 ಬೌಂಡರಿ) ಅರ್ಧಶತಕದ ಫಲವಾಗಿ ತಂಡವು ಎರಡನೇ ದಿನದಾಟದ ಮೊದಲ ಸೆಷನ್​ ಮುಕ್ತಾಯಕ್ಕೂ ಮುನ್ನವೇ 115.1 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 603 ರನ್ ಕಲೆಹಾಕಿ ಮೊದಲ ಇನಿಂಗ್ಸ್​ ಅನ್ನು ಡಿಕ್ಲೇರ್ ಮಾಡಿಕೊಂಡಿತ್ತು.

    Smriti Shefali

    ಇದನ್ನೂ ಓದಿ: ರಾಂಗ್​ವೇನಲ್ಲಿ ಕಾರು ಚಾಲನೆ; 7 ಮಂದಿ ಮೃತ್ಯು, ನಾಲ್ವರು ಗಂಭೀರ

    ದಕ್ಷಿಣ ಆಫ್ರಿಕಾದ ವಿರುದ್ಧ 603 ರನ್​ಗಳನ್ನು ಕಲೆ ಹಾಕುವ ಮೂಲಕ ಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಟೀಮ್​ ಇಂಡಿಯಾ ತನ್ನದಾಗಿಸಿಕೊಂಡಿದೆ. ಇದಲ್ಲದೆ ಟೆಸ್ಟ್ ಪಂದ್ಯದ ಮೊದಲ ದಿನವೇ 500ಕ್ಕೂ ಅಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 147 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವನಿತೆಯರು ಈ ಸಾಧನೆ ಮಾಡಿದ್ದಾರೆ.

    ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2024 ರಲ್ಲಿ ಪರ್ತ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್​ಗಳಿಸಿ ಈ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಮಹಿಳಾ ಟೆಸ್ಟ್​ನಲ್ಲಿ 600+ ರನ್ ಕಲೆಹಾಕಿದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts