More

    ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ: ಗಾಜು ಒಡೆದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು..

    ಕನೌಜ್​: ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಯಾಣಿಕರು ಗಾಜು ಒಡೆದು ತಮ್ಮ ಪ್ರಾಣ ಉಳಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಕನೌಜ್​ ಬಳಿ ನಡೆದಿದೆ.

    ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಸ್​ಗೆ ಬೆಂಕಿ ಹೊತ್ತಿಕೊಂಡಾಗ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಬಸ್ಸಿನ ಒಳಗಿನಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರಲ್ಲಿ ಸಂಚಲನ ಉಂಟಾಗಿದೆ. ಪ್ರಾಣ ಉಳಿಸಲು ಪ್ರಯಾಣಿಕರು ಬಸ್ಸಿನ ಹಿಂಬದಿಯ ಗಾಜು ಒಡೆದು, ಪ್ರಯಾಣಿಕರು ಬಸ್‌ನಿಂದ ಜಿಗಿದಿದ್ದಾರೆ.

    ಇದನ್ನೂ ಓದಿ: ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್​ಫಾರ್ಮ್‌ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ..

    ಸುಮಾರು ಅರ್ಧಗಂಟೆವರೆಗೆ ಬಸ್ಸಿನಿಂದ ಕಪ್ಪು ಹೊಗೆ ಬಂದಿದ್ದು, ಸುದ್ದಿ ತಿಳಿದ ರಸ್ತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಪರಿಶೀಲನೆಯನ್ನು ನಡೆಸಿ ಪ್ರಯಾಣಿಕರಿಗೆ ತೆರಳಲು ಬೇರೆ ಬಸ್‌ನ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಬಸ್ ಸೌರಿಖ್‌ನ ಚಾಪುನ್ನಾದಿಂದ ಕಾನ್ಪುರಕ್ಕೆ ಹೋಗುತ್ತಿತ್ತು ಎಂದು ಹೇಳಲಾಗಿದ್ದು, ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನು ತಿಳಿದು ಬಂದಿಲ್ಲ.

    ಬೆಂಕಿ ಅವಘಡದ ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಭಯವು ಸ್ಪಷ್ಟವಾಗಿ ಗೋಚರಿಸಿದ್ದು, ಪ್ರಯಾಣಿಕರ ವಿವೇಕ ಹಾಗು ಸಮಯ ಪ್ರಜ್ಞೆ ಅವರ ಪ್ರಾಣ ಉಳಿಸಿದೆ. ಒಂದು ವೇಳೆ ತಾವು ಗಾಜು ಒಡೆದು ಪಾರಾಗಿದಿದ್ದರೆ ಹೊಗೆಯಿಂದಾಗಿ ಉಸಿರುಗಟ್ಟಿ ಪ್ರಾಣ ಬಿಡಬೇಕಾಗಿತ್ತು ಎಂದು ಪ್ರಯಾಣಿಕರು ಹೇಳಿದ್ದಾರೆ.(ಏಜೆನ್ಸೀಸ್)

    ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts