More

    ಹೆದ್ದಾರಿ ಮಣ್ಣಿನಿಂದ ಕೃಷಿ ನಾಶದ ಭೀತಿ: ಕೃತಕ ನೆರೆ ಆತಂಕ, ಕಂಗಾಲಾದ ಕೃಷಿಕರು

    ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

    ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನ ಸೇತುವೆ ನಿರ್ಮಾಣ, ಹೆದ್ದಾರಿ ಕಾಮಗಾರಿಯ ವೇಳೆ ಪಕ್ಕದ ತೋಡಿನ ಬದಿಗೆ ಮಣ್ಣು ಸುರಿದಿದ್ದು, ಮಳೆನೀರು ಪಕ್ಕದ ತೋಟಕ್ಕೆ ನುಗ್ಗಿ ಕೃಷಿ ಹಾನಿಯಾಗುವ ಆತಂಕ ಎದುರಾಗಿದೆ.

    ಶೇಖಮಲೆಯಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ಆ ಭಾಗದಲ್ಲಿ ಹೆದ್ದಾರಿಯನ್ನು ನೇರಗೊಳಿಸುವ ಕಾಮಗಾರಿ ನಡೆದಿದ್ದು, ಕಾಮಗಾರಿಯ ವೇಳೆ ಹೆದ್ದಾರಿಯ ಬದಿಯಲ್ಲಿರುವ ತೋಡಿನ ಬದಿಗೆ ಮಣ್ಣು ಹಾಕಲಾಗಿದೆ. ಈ ಮಣ್ಣು ಮಳೆಯ ವೇಳೆ ಕೊಚ್ಚಿಕೊಂಡು ತೋಡನ್ನೇ ಆವರಿಸಿಕೊಂಡಿದೆ. ಇದರಿಂದ ತೋಡಿನ ಅಗಲ ಹಾಗೂ ಗಾತ್ರ ಕಿರಿದಾಗಿದೆ. ಮಳೆ ಜೋರಾಗಿ ಸುರಿದ ಸಂದರ್ಭ ತುಂಬಿ ಹರಿಯುತ್ತಿದ್ದು, ಇದು ತೋಟ ಹಾಗೂ ಕೃಷಿಯನ್ನೇ ನಾಶ ಮಾಡುತ್ತದೆ ಎಂದು ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ತೋಡು ಹಾಗೂ ಹೆದ್ದಾರಿಗೆ ಸೂಕ್ತ ತಡೆಗೋಡೆ ನಿರ್ಮಾಣವೂ ನಡೆದಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳು ನಡೆಯುವ ಸಾಧ್ಯತೆಗಳು ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts