More

    ಪ್ಲಾಸ್ಟಿಕ್​ನಲ್ಲಿ ಸುತ್ತಿ ಮಗನ ಮೃತದೇಹವನ್ನು ಬೈಕ್​ನಲ್ಲೇ ಕೊಂಡೊಯ್ದ ತಂದೆ..!

    ಕೊರ್ಬಾ: ಮೃತ ಮಗನನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿಕೊಂಡು ಸುಮಾರು 55 ಕಿ.ಮೀ. ದೂರ ಬೈಕ್​ನ ಕೊಂಡೊಯ್ದಿರುವ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: ಈ ಹಣ್ಣನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಹೃದಯಕ್ಕೂ ಒಳ್ಳೆಯದು..!

    ಘಟನೆಯು ಅರ್ಸೇನಾ ಗ್ರಾಮಕ್ಕೆ ಸಂಬಂಧಿಸಿದಾಗಿದ್ದು, ದರ್ಸಾರಾಮ್ ಯಾದವ್ ಎಂಬಾತ ಕೂಲಿ ಕೆಲಸ ಮಾಡುತ್ತಾ ತನ್ನ ಹೆಂಡತಿ ಉಕಾಸೋ ಬಾಯಿ ಮತ್ತು ಮೂವರು ಮಕ್ಕಳ ಜತೆಗೆ ವಾಸಿಸುತ್ತಿದ್ದಾನೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಕಾಸೋ ಬಾಯಿ ತನ್ನ ಒಂದೂವರೆ ವರ್ಷದ ಮಗ ಅಶ್ವನಿ ಕುಮಾರ್‌ನೊಂದಿಗೆ ಗ್ರಾಮದ ಬಳಿಯ ಧೋಧಿ ನುಮಾ ಹೊಂಡಕ್ಕೆ ಸ್ನಾನಕ್ಕೆ ತೆರಳಿದ್ದಳು.

    chattisgadh son body

    ಈ ವೇಳೆ ಮಹಿಳೆಯು ಸ್ನಾನದಲ್ಲಿ ನಿರತಳಾಗಿದ್ದು, ಮತ್ತೊಂದೆಡೆ ಆಟವಾಡುತ್ತಿದ್ದ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನಾನ ಮುಗಿಸಿ ಮನೆಗೆ ಹೋಗಲು ತಯಾರಾದ ಆಕೆಗೆ ಮಗು ಕಾಣದಿದ್ದಾಗ ಗಾಬರಿಯಾಗಿದ್ದು, ಹುಡುಕಾಟ ನಡೆಸಿದ್ದಾಳೆ. ಬಳಿಕ ಆಕೆ ಕೂಡಲೇ ಮನೆಗೆ ತೆರಳಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಸುಮಾರು ಅರ್ಧ ಗಂಟೆಯ ಪ್ರಯತ್ನದ ನಂತರ ಸಂಬಂಧಿಕರು ನೀರಿಗಿಳಿದು ಹುಡುಕಾಟ ನಡೆಸಿದ್ದು, ಬಾಲಕನ ಮೃತದೇಹ ಪತ್ತೆಯಾಗಿದೆ.

    ಇದನ್ನೂ ಓದಿ: ಸಹೋದರನಿಗಾಗಿ ತಂದೆಯ ವಿರುದ್ಧವೇ ದೂರು ನೀಡಿದ ಸಹೋದರಿ: ಅಷ್ಟಕ್ಕೂ ನಡೆದಿದ್ದೇನು..?

    ತಡರಾತ್ರಿ ಲೆಮೂರು ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಮೀಪದಲ್ಲಿ ಎಲ್ಲಿಯೂ ಶವಾಗಾರ ಇಲ್ಲದ ಕಾರಣ ಮೃತದೇಹವನ್ನು ಮನೆಯಲ್ಲೇ ಇಡಲಾಗಿತ್ತು. ಕುಟುಂಬದವರು ರಾತ್ರಿಯಿಡೀ ಮಗುವಿನ ಮೃತದೇಹವನ್ನು ಇಟ್ಟುಕೊಂಡಿದ್ದು, ಸೋಮವಾರ ಬೆಳಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕೊನೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯುವಂತೆ ಹೇಳಿದ್ದಾರೆ.

    ಮೊದಲೇ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಆಕಾಶವೇ ಕಳಚಿ ಬಿದ್ದ ಅನುಭವಾಗಿದೆ. ಪೊಲೀಸರು ಹೇಳಿದ ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ಸೌಲಭ್ಯವಾಗಲೀ, ಪೊಲೀಸ್ ಇಲಾಖೆಯ ವಾಹನವಾಗಲೀ ಸಿಗಲಿಲ್ಲ. ಸರ್ಕಾರಿ ವಾಹನವೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ವಿಧಿಯಿಲ್ಲದಿದ್ದಾಗ, ತಂದೆಯೇ ತನ್ನ ಅಣ್ಣನೊಂದಿಗೆ ಬಾಲಕನ ಮೃತ ದೇಹವನ್ನು ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಬೈಕ್‌ನಲ್ಲಿ ಕೊಂಡೊಯ್ದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts