More

    ಸಹೋದರನಿಗಾಗಿ ತಂದೆಯ ವಿರುದ್ಧವೇ ದೂರು ನೀಡಿದ ಸಹೋದರಿ: ಅಷ್ಟಕ್ಕೂ ನಡೆದಿದ್ದೇನು..?

    ಬರೇಲಿ: 12 ವರ್ಷದ ಮಗನನ್ನು ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಮರಕ್ಕೆ ಕಟ್ಟಿ ರಾತ್ರೋ ರಾತ್ರಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಇದನ್ನೂ ಓದಿ: ತ್ರಿವಳಿ ತಲಾಖ್ ನೀಡಿದ ಪತಿ: ಠಾಣೆಯಲ್ಲಿ ದೂರು ದಾಖಲಿಸಿದ ಪತ್ನಿ..

    ಅಬ್ದುಲ್ ಹಮೀದ್ ಎಂಬಾತನೇ ಆರೋಪಿಯಾಗಿದ್ದು, ಈ ಘಟನೆಯು ಕ್ಯಾಂಟ್‌ನ ಬಾರ್ಕಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಿರುದ್ಧ ಮಗಳು ಶಹನಾಜ್ ತಂದೆಯ ದೌರ್ಜನ್ಯದಿಂದ ಬೇಸತ್ತು ದೂರು ದಾಖಲಿಸಿದ್ದಾಳೆ. ಉಲೈತಾಪುರ್ ಗ್ರಾಮದ ನಿವಾಸಿಯಾಗಿರುವ ಅಬ್ದುಲ್​ ಕುಡಿತದ ಚಟ ಹೊಂದಿದ್ದು, ಈತನ ಮಗನಾಗಿರುವ ಮುನ್ನಾ ಎಂಬಾತನಿಗೆ ಓದುವುದನ್ನು ಬಿಡಿಸಿ ಕೂಲಿಗೆ ಕಳುಹಿಸಿದ್ದ. ಆತ ಪ್ರತಿದಿನ ಕೂಲಿಯಿಂದ ಬಂದೊಡನೆ ಆರೋಪಿಯು ಈತನ ಹಣ ಕಿತ್ತುಕೊಂಡು ಮದ್ಯ ಸೇವಿಸುತ್ತಿದ್ದನು.

    ಇದರಿಂದ ಬೇಸತ್ತಿದ್ದ ಮುನ್ನಾ ತನ್ನ ತಂದೆಗೆ ತಾನು, ಕೂಲಿ ಮಾಡುವುದಿಲ್ಲ ಬದಲಾಗಿ ಓದಲು ಬಯಸುತ್ತೇನೆ ಎಂದು ಹೇಳದ್ದಾನೆ. ಇದನ್ನು ಕೇಳಿದ ಆರೋಪಿಯು ಮಗನನ್ನು ಮರಕ್ಕೆ ಕಟ್ಟಿ ರಾತ್ರೋರಾತ್ರಿ ಥಳಿಸಿದ್ದಾನೆ. ಕೊನೆಗೆ ಬಾಲಕ ಹಗ್ಗದಿಂದ ಬಿಡಿಸಿಕೊಂಡು ತನ್ನ ಸಹೋದರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ್ದಾನೆ. ಈ ಬಗ್ಗೆ ಆಕೆ ತಂದೆಯನ್ನು ಕೇಳಿದಾಗ ಆತ ಈಕೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಸ್ವಲ್ಪ ಸಮಯದ ಬಳಿಕ ಆಕೆ ಮತ್ತು ಆಕೆಯ ಸಹೋದರ ಸೇರಿಕೊಂಡು ತಂದೆಯ ವಿರುದ್ಧ ದೂರು ನೀಡಿದ್ದಾಳೆ.

    ಇದನ್ನೂ ಓದಿ: ಪ್ರೀತಿಗೆ ಅಡ್ಡಿ, ಪ್ರಿಯಕರನ ನೆರವಿನಿಂದ 4 ವರ್ಷದ ಮಗನ ಪ್ರಾಣ ತೆಗೆದ ತಾಯಿ..

    ತನ್ನ ತಂದೆಯ ಹೊಡೆತದಿಂದ ನೊಂದ ಶಹನಾಜ್‌ನ ಮತ್ತೊಬ್ಬ ಸಹೋದರ ಕೆಲವು ವರ್ಷಗಳ ಹಿಂದೆ ತನ್ನ ಪ್ರಾಣವನ್ನು ಬಿಟ್ಟಿದ್ದಾನೆ. ಈಗ ತನ್ನ ತಂದೆ ಬದುಕಿರುವ ಈ ಸಹೋದರನಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದು, ಆಕೆಯ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣೆಯ ಪ್ರಭಾರಿ ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts