More

    ಕೃಷಿಕ ಸಮಾಜದಿಂದ ಚಕ್ಕಡಿ ಸಮೇತ ಪ್ರತಿಭಟನೆ

    ಧಾರವಾಡ: ಮಹದಾಯಿ ಜಾರಿ, ರೈತ ಹೊಲಗಳಿಗೆ ಹೋಗಲು ಸುವ್ಯಸ್ಥಿತ ರಸ್ತೆ, ಬರ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕುಂದಗೋಳ ತಾಲೂಕಿನ ದೇವನೂರ ಕೃಷಿಕ ಸಮಾಜದ ವತಿಯಿಂದ ಜಿಲ್ಲಾಽಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ನಗರದ ಕಡಪಾ ಮೈದಾನದಿಂದ ಜಿಲ್ಲಾಽಕಾರಿ ಕಚೇರಿಯವರೆಗೆ ರೈತರು ಎತ್ತು ಚಕ್ಕಡಿ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ಜಮೀನಿಗೆ ಹೋಗಲು ದಾರಿ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಹೊಲಗಳ ರಸ್ತೆ ಸರಿಪಡಿಸುತ್ತಿಲ್ಲ. ರೈತರ ಮನವಿಗೆ ಸ್ಪಂದಿಸದ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಕಳಸಾ- ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ಮಾಡಲು ವನ್ಯಜೀವಿಗಳ ಸಂರಕ್ಷಣಾ ಸಮಿತಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಬೇಕು. ಕಲಘಟಗಿ ತಾಲೂಕಿನ ರೈತರ ಹೊಲಗಳಿಗೆ ಹಾಗೂ ಕುಡಿಯುವ ಸಲುವಾಗಿ ಕಾಳಿ ನದಿ ಯೋಜನೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ಲೋಷದೋಷವಾಗಿದೆ. ಬಾಕಿ ಉಳಿದ ರೈತರ ಖಾತೆಗೆ ಶೀಘ್ರ ಪರಿಹಾರ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
    ಜಿಲ್ಲಾಽಕಾರಿ ದಿವ್ಯ ಪ್ರಭು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
    ಮÁಣಿಕ್ಯ ಚಿಲ್ಲೂರ, ಮಲ್ಲಿಕಾರ್ಜುನ ಗುರನಳ್ಳಿ, ಅಶೋಕ ಸೋಮಾಪುರ, ಪರಮಾನಂದ ಒಡೆಯರ್, ಬಸವರಾಜ ತಿಪ್ಪನ್ನವರ, ಶಂಕರಗೌಡ ಭಾವಿಕಟ್ಟಿ, ವಿಜಯಕುಮÁರ ಪಂಚಗಟ್ಟಿ, ಟಿ.ಡಿ. ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts