More

    ಫ್ರಿಡ್ಜ್, ಕೂಲರ್, ಫ್ಯಾನ್​ ಬಳಿಸಿದ್ದಕ್ಕೆ ಬರೋಬ್ಬರಿ 3.9 ಲಕ್ಷ ರೂ. ವಿದ್ಯುತ್​ ಬಿಲ್​​; ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?

    ಲಖನೌ: ಉತ್ತರಪ್ರದೇಶದ ಕಾನ್ಪುರದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಮೂಲ ಗೃಹೋಪಯೋಗಿ ಉಪಕರಣಗಳ ಬಳಕೆಯಿಂದಾಗಿ 3.9 ಲಕ್ಷ ರೂಪಾಯಿಗಳ ವಿದ್ಯುತ್​ ಬಿಲ್​ ಪಡೆದಿದೆ. ಫ್ರಿಡ್ಜ್, ಕೂಲರ್ ಮತ್ತು ಎರಡು ಫ್ಯಾನ್ ಬಳಸಿದಕ್ಕಾಗಿ ಇಷ್ಟು ದೊಡ್ಡ ಮೊತ್ತದ ಬಿಲ್​ ಬಂದಿರುವುದನ್ನು ಕಂಡು ಕುಟುಂಬವು ಆಘಾತಕ್ಕೊಳಗಾಗಿದೆ.

    ಇದನ್ನು ಓದಿ: ಟೀಂ ಇಂಡಿಯಾ ಕರೆತರಲು ಬಾರ್ಬಡೋಸ್​ ತಲುಪಿದ ಏರ್​ ಇಂಡಿಯಾ ಫ್ಲೈಟ್​​; ಬಿಸಿಸಿಐ ಹೇಳಿದ್ದೇನು?

    ಚಂದ್ರಶೇಖರ್ ಎಂಬುವವರು ತಮ್ಮ ಮನೆಗೆ ನಾಲ್ಕೈದು ತಿಂಗಳಿಂದ ವಿದ್ಯುತ್​ ಬಿಲ್​ ಬಾರದೆ ಇರುವುದನ್ನು ತಿಳಿದು ಸ್ಥಳೀಯ ವಿದ್ಯುತ್​​ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ಸಿಬ್ಬಂದಿ ನಿಮ್ಮ ಬಾಕಿ ಇರುವ ವಿದ್ಯುತ್​ ಬಿಲ್​​​ 3.9 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ಬಿಲ್​ ನೋಡಿದ ತಕ್ಷಣ ಚಂದ್ರಶೇಖರ್​ ಬೆಚ್ಚಿಬಿದ್ದಿದ್ದಾರೆ. ಅಸಲಿಗೆ ಚಂದ್ರಶೇಖರ್​ ಕುಟುಂಬವು ತಗಡಿನ ಶೆಡ್​ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆಯಲ್ಲಿ ಒಂದು ಕೂಲರ್​, ಒಂದು ರೆಫ್ರಿಜರೇಟರ್ ಮತ್ತು ಎರಡು ಫ್ಯಾನ್​ಗಳನ್ನು ಮಾತ್ರ ಬಳಸಲಾಗುತ್ತಿದೆ. ಕಳೆದ ಮೂರು ತಿಂಗಳು ಬೇಸಿಗೆಕಾಲದಲ್ಲಿ ಹೆಚ್ಚು ಬಿಸಿಗಾಳಿ ಇದಿದ್ದರಿಂದ ಕೂಲರ್​ ಮತ್ತು ಫ್ಯಾನ್​ ಬಳಕೆ ಸ್ವಲ್ಪ ಹೆಚ್ಚಾಗಿದ್ದರು ಇಷ್ಟು ಬಿಲ್​​ ಬರಲು ಸಾಧ್ಯವೆ ಎಂದು ಯೋಚಿಸಿ, ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ತಾಂತ್ರಿಕ ದೋಷದಿಂದ ಬಿಲ್ ಹೆಚ್ಚಳವಾಗಿದ್ದು, ಶೀಘ್ರ ಸರಿಪಡಿಸಲಾಗುವುದು ಎಂದು ವಿದ್ಯುತ್ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೆಸ್ಕೋದ (ಕಾನ್ಪುರ ವಿದ್ಯುತ್ ಸರಬರಾಜು ಕಂಪನಿ) ಸರ್ವರ್‌ನಲ್ಲಿ ಮಾಡಿದ ಬದಲಾವಣೆಗಳಿಂದಾಗಿ, ಕೆಲವು ವಿದ್ಯುತ್ ಮೀಟರ್‌ಗಳು ತಾಂತ್ರಿಕ ದೋಷವನ್ನು ಹೊಂದಿವೆ. ಇದರಿಂದಾಗಿ ಸರಿಯಾದ ಡೇಟಾವನ್ನು ನೋಂದಾಯಿಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಕೆಸ್ಕೋ ಮಾಧ್ಯಮ ಪ್ರಭಾರಿ ಶ್ರೀಕಾಂತ್ ರಂಗೀಲಾ ತಿಳಿಸಿದ್ದಾರೆ. ಹಾಗೂ ಈಗ ಚಂದ್ರಶೇಖರ್ ಅವರು ಪಡೆದಿರುವ 3.9 ಲಕ್ಷ ರೂಪಾಯಿ ಬಿಲ್​ ಅನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

    See also  ಪ್ರವಾಸೋದ್ಯಮ ಪೂರಕ ಯೋಜನೆ ರೂಪಿಸಲಿ

    ವಿದ್ಯುತ್​ ಸರಬರಾಜು ಕಂಪನಿಯಿಂದ ಈ ರೀತಿಯ ಎಡವಟ್ಟು ಇದೇ ಮೊದಲೆನಲ್ಲ. ಕಳೆದ ತಿಂಗಳು ದೆಹಲಿಯಲ್ಲಿ ಒಬ್ಬ ವ್ಯಕ್ತಿಗೆ 30,000 ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ಜುಲೈ 9ರೊಗಳಗೆ 30,280 ಪಾವತಿಸಬೇಕು ಎಂದು ಹೇಳಿದ್ದರು. ಆ ವ್ಯಕ್ತಿ ಬಿಎಸ್‌ಇಎಸ್​ ಕಳುಹಿಸಿದ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. (ಏಜೆನ್ಸೀಸ್​)

    ಅಯೋಧ್ಯೆಯ ಮಾನಹಾನಿ ಮಾಡುವ ಪ್ರಯತ್ನ; ಸಿಎಂ ಯೋಗಿ ಆದಿತ್ಯನಾಥ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts