More

    ನಕಲಿ ಬಾಬಾ ಬಳಿ ಹೋದ ನವ ವಧುವಿಗೆ ಕಾದಿತ್ತು ಶಾಕ್​..!

    ಹೈದರಾಬಾದ್: ನಕಲಿ ಬಾಬಾವೊಬ್ಬ ನವ ವಧುವಿನ ಮೇಲೆ ಅತ್ಯಾಚಾರವೆಸಗಿರುವ ಅಮಾನುಷ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

    ಇದನ್ನೂ ಓದಿ: ಅಂಚೆ ಕಛೇರಿಗೆ ಬಂದಿದ್ದ ಪಾರ್ಸೆಲ್‌ ಸ್ಫೋಟ: ನೌಕರರು ಕಂಗಾಲು..!

    ಹುಸೇನಿ ಆಲಂ ಪ್ರದೇಶದ ಯುವತಿಯೊಬ್ಬಳು ಮೂರು ತಿಂಗಳ ಹಿಂದೆ ವಿವಾಹವಾಗಿದ್ದಳು. ಇತ್ತೀಚೆಗಷ್ಟೇ ಆರೋಗ್ಯ ಸರಿಯಿಲ್ಲದ ಕಾರಣ ಆಕೆಯ ಅತ್ತೆ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಂಡ್ಲಗುಡ ಪ್ರದೇಶದಲ್ಲಿ ನೆಲೆಸಿದ್ದ ಬಜಾರ್ ಬಾಬಾ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆತ ಕೆಲವು ಪೂಜೆ ಮಾಡಿ ಕಪ್ಪುದಾರಗಳನ್ನು ಕಟ್ಟಿ, ನವ ವಧುವಿಗೆ ಮತ್ತೊಮ್ಮೆ ಬರುವಂತೆ ಸಲಹೆ ನೀಡಿದ್ದಾನೆ.

    ಅದರಂತೆಯೇ ಯುವತಿಯು ನಕಲಿ ಬಾಬಾನ ಕೆಲ ದಿನಗಳ ನಂತರ ಹೋಗಿದ್ದು, ಆತ ಚಿಕಿತ್ಸೆ ನೆಪದಲ್ಲಿ ಅವಳ ಕಣ್ಣಿಗೆ ಬಟ್ಟೆ ಕಟ್ಟಿ ನಂತರ ಆಕೆಯನ್ನು ಕೊಠಡಿಗೆ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಸಂತ್ರಸ್ತೆ ತನ್ನ ಅತ್ತೆಗೆ ತಿಳಿಸಿದ್ದು ಅವರು ಆಕೆಗೆ ದೆವ್ವ ಹಿಡಿದಿದೆ ಎಂದು ರೂಮಿನಲ್ಲಿಟ್ಟು ಬೀಗ ಹಾಕಿದ್ದಾರೆ.

    ಇದನ್ನೂ ಓದಿ: ಮಲಗಿದ್ದ ವೇಳೆ ರಾತ್ರೋ ರಾತ್ರಿ ಚಿಕ್ಕಪ್ಪನ ಮನೆಗೆ ಬೆಂಕಿ ಹಚ್ಚಿದ ಮಗ..

    ಆ ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಂತ್ರಸ್ತೆ ಪೋಷಕರ ಸಹಾಯದಿಂದ ಪೂಜೆಯ ಹೆಸರಲ್ಲಿ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರ ಬಳಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಈ ವಿಷಯ ತಿಳಿದ ನಕಲಿ ಬಾಬಾ ಅಲ್ಲಿಂದ ಪರಾರಿಯಾಗಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts