More

    ಪ್ರೀತಿಗಾಗಿ ಧರ್ಮ ತೊರೆದು ಯುವಕನ ಜತೆಗೆ ದಾಂಪತ್ಯಕ್ಕೆ ಕಾಲಿಟ್ಟ ಯುವತಿ..

    ಮುಜಾಫರ್‌ಪುರ: ಮುಸ್ಲಿಂ ಯುವತಿಯೊಬ್ಬಳು ಪ್ರೀತಿಗಾಗಿ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನ ಸ್ವೀಕರಿಸಿ ಯವಕನೊಂದಿಗೆ ವಿವಾಹವಾಗಿರುವ ವಿಶಿಷ್ಟ ಪ್ರೇಮ ಪ್ರಕರಣ ಬಿಹಾರದ ಮುಜಾಫರ್‌ಪುರದಲ್ಲಿ ಬೆಳಕಿಗೆ ಬಂದಿದೆ.

    ವಾಸ್ತವವಾಗಿ, ಫಹ್ರೀನಾ ಖಾತೂನ್ ಮುಜಾಫರ್‌ಪುರದ ಪಕೋಹಿ ಗ್ರಾಮದ ನಿವಾಸಿಯಾಗಿದ್ದು ಆಕೆ ಅದೇ ಗ್ರಾಮದ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಳು. ಸುಮಾರು ಒಂದೂವರೆ ವರ್ಷಗಳ ಕಾಲ ಇವರ ಪ್ರೇಮವೂ ಮುಂದುವರೆದಿದ್ದು, ಕೊನೆಗೆ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. ಬಳಿಕ ಯುವತಿಯು ಮೊದಲು ತನ್ನ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಧರ್ಮಕ್ಕೆ ಮತಾಂತರಗೊಂಡು, ಆತನ ಜತೆಗೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ.

    ಇದನ್ನೂ ಓದಿ: ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ: ಗಾಜು ಒಡೆದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು..

    ಸುದ್ದಿ ತಿಳಿದ ಕುಟುಂಬಸ್ಥರು, ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದು, ಫಹ್ರೀನಾ ಅಲಿಯಾಸ್ ಖುಷ್ಬೂ ತನ್ನ ಪತಿಯೊಂದಿಗೆ ಬಂದು ಮೊದಲು ಪೊಲೀಸರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ನ್ಯಾಯಲಯದಲ್ಲಿಯೂ ಫಹ್ರೀನಾ ತನ್ನನ್ನು ಅಪಹರಿಸಲಾಗಿಲ್ಲ ಆದರೆ ತಾನೂ ಮನೆಯಿಂದ ಓಡಿಹೋಗಿ ಕರಣ್ ಜೊತೆಯಲ್ಲಿದ್ದೇನೆ. ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಕರಣ್ ಜತೆಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದೇನೆ. ತಾನು ತನ್ನ ಪತಿ ಹಾಗೂ ಅತ್ತೆ ಕುಟುಂಬಸ್ಥರ ಜತೆಗೆ ಇರುವುದಾಗಿ ತಿಳಿಸಿದ್ದಾಳೆ.

    ಆದರೆ, ಯುವತಿಗೆ ಆಕೆಯ ಕುಟುಂಬ ಸದಸ್ಯರಿಂದ ಕೊಲೆ ಬೆದರಿಕೆಗಳು ಬರುತ್ತಿದ್ದು, ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಆಕೆ ಜೀವ ಮತ್ತು ಆಸ್ತಿ ರಕ್ಷಣೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ಪತಿಯೊಂದಿಗೆ ವಾಸಿಸಲು ನ್ಯಾಯಲಯವು ಅವಕಾಶ ನೀಡಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts