More

    ಕಣ್ಣಿನ ಆರೈಕೆ ಅತಿ ಮುಖ್ಯ

    ಅಥಣಿ ಗ್ರಾಮೀಣ: ಜಗತ್ತನ್ನು ನೋಡಲು ಕಣ್ಣು ಅತಿ ಮುಖ್ಯ ಅಂಗ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಸಂಕ್ರಟ್ಟಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಾನಂದ ಹಾಡ್ಕರ ಹೇಳಿದರು.

    ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಶನಿವಾರ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸಂಘದ ತಾಲೂಕು ಯೋಜನಾಧಿಕಾರಿ ರಜಬ್‌ಲಿ ಮೇಲಿನಮನಿ ಮಾತನಾಡಿ, ಸಂಘದ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ಸೇರಿ ಹಲವು ಯೋಜನೆ ತರಲಾಗಿದೆ ಎಂದರು.

    210 ಜನರ ನೇತ್ರ ತಪಾಸಣೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ನೇತ್ರಾಧಿಕಾರಿ ಶೋಭಾ ಬಿರ್ಲಾ, ಜ್ಞಾನ ವಿಕಾಸ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಆಶಾ ಬೋಗುರ, ವಲಯ ಮೇಲ್ವಿಚಾರಕಿ ಶಾಂತಾ ಪೂಜಾರಿ, ಗೀತಾ ಕೊಡತೆ, ಮಹಾನಂದಾ ಬಿಸಗುಪ್ಪಿ, ಪುಷ್ಪಾ ಕಾಂಬಳೆ, ಸ್ವಪ್ನಾ ಹವಾಲ್ದಾರ, ಸಂಘದ ಸದಸ್ಯರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts