More

    ಐಐಎಸ್‌ಇಆರ್ : ಎಕ್ಸ್‌ಪರ್ಟ್‌ನ ಮಿಹಿರ್ ಗಿರೀಶ್ ಕಾಮತ್‌ಗೆ 16ನೇ ರ‌್ಯಾಂಕ್



    ಮಂಗಳೂರು : ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (ಐಐಎಸ್‌ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಹಿರ್ ಗಿರೀಶ್ ಕಾಮತ್ ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ 16ನೇ ರ‌್ಯಾಂಕ್ ಪಡೆದಿದ್ದಾರೆ.
    ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರವು ಬೆಹಾರ್ಂಪುರ,
    ಭೋಪಾಲ್, ಕೊಲ್ಕತ್ತಾ, ಮೊಹಾಲಿ, ಪೂನಾ, ತಿರುವನಂತಪುರಂ ಮತ್ತು ತಿರುಪತಿಗಳಲ್ಲಿ ಐಐಎಸ್‌ಇಆರ್‌ಗಳನ್ನು ಸ್ಥಾಪಿಸಿದೆ. ವಿಜ್ಞಾನ
    ವಿಷಯದ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಗಳಪ್ರವೇಶಕ್ಕೆ ಮಿಹಿರ್ ಗಿರೀಶ್ ಕಾಮತ್ ಆಯ್ಕೆಯಾಗಿದ್ದಾರೆ.
    ವಿಜ್ಞಾನದಲ್ಲಿ ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಆವಿಷ್ಕರಿಸುವ ಮತ್ತು
    ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದು ಐಐಎಸ್‌ಇಆರ್‌ನ ಒಂದು
    ಪ್ರಮುಖ ಗುರಿಯಾಗಿದೆ. ಅಲ್ಪಾವಧಿಯಲ್ಲಿಯೇ ಐಐಎಸ್‌ಇಆರ್‌ನ ಹಲವು ಸಂಶೋಧನೆಗಳು ಪ್ರಕಟಗೊಂಡಿದ್ದು, ಪೇಟೆಂಟ್‌ಗಳ ರೂಪದಲ್ಲಿ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸಿವೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts