More

    ನಿರೀಕ್ಷೆ ಮಟ್ಟ ಕಾಣದ ಆನ್​ಲೈನ್ ಕ್ಲಾಸ್: ತಂತ್ರಜ್ಞಾನದ ಅರಿವು ಇಲ್ಲದ ಶಿಕ್ಷಕರಿಗೆ ಕಷ್ಟ

    ಬೆಂಗಳೂರು: ರಾಜ್ಯದಲ್ಲಿ ಆನ್​ಲೈನ್ ತರಗತಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದ ಮೇಲೆ ಖಾಸಗಿ ಶಾಲೆಗಳು ವೇಳಾಪಟ್ಟಿ ರಚಿಸಿ ತರಗತಿಗಳನ್ನು ಆರಂಭಿಸಿವೆ. ಆದರೆ, ಬಹುತೇಕ ಶಿಕ್ಷಕರಿಗೆ ತಂತ್ರಜ್ಞಾನದ ಅರಿವು ಕಡಿಮೆ ಇರುವುದರಿಂದ ನಿರೀಕ್ಷಿತ ಮಟ್ಟದ ಬೋಧನೆ ಸಾಧ್ಯವಾಗದೆ ಶಾಲಾ ಆಡಳಿತ ಮಂಡಳಿಗಳು ಸಂಕಷ್ಟ ಎದುರಿಸುತ್ತಿವೆ.

    ನಿಷೇಧ ಮಾಡಿದ ಸಂದರ್ಭದಲ್ಲೂ ತರಗತಿಗಳನ್ನು ನಡೆಸಲಾಗುತ್ತಿತ್ತು. ಕೆಲವು ಶಾಲೆಗಳು ಮಾತ್ರ ಸ್ಥಗಿತಗೊಳಿಸಿದ್ದವು. ಆನ್​ಲೈನ್ ತರಗತಿ ಸಂವಿಧಾನದ ಹಕ್ಕು ಎಂಬ ರೀತಿಯಲ್ಲಿ ಇದೀಗ ಹೈಕೋರ್ಟ್ ತೀರ್ಪು ನೀಡಿದ ನಂತರ ಖಾಸಗಿ ಶಾಲೆಗಳು ಮತ್ತಷ್ಟು ಹುಮ್ಮಸ್ಸಿನಿಂದ ತರಗತಿ ನಡೆಸಲು ಆರಂಭಿಸಿವೆ.

    ಕೆಲವು ಹೆಚ್ಚು ಶುಲ್ಕ ಪಡೆಯುವ ಶಾಲೆಗಳು ಆನ್​ಲೈನ್ ತರಗತಿ ನಡೆಸಲು ಪ್ರತ್ಯೇಕ ಸಾಫ್ಟ್​ವೇರ್ ಹೊಂದಿದ್ದು, ಶಿಕ್ಷಕರು ಮನೆ ಅಥವಾ ಶಾಲೆಗಳಿಂದ ಬೋಧನೆ ಮಾಡುತ್ತಿದ್ದಾರೆ. ಮತ್ತೆ ಕೆಲವು ಬಜೆಟ್ ಶಾಲೆಗಳು ಮನೆಯಿಂದಲೇ ಝುೂಮ್ ಗೂಗಲ್ ಕ್ಲಾಸ್​ನಂತಹ ತಂತ್ರಜ್ಞಾನಗಳ ಮೂಲಕ ಬೋಧನೆ ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಹೋಮ್ರ್ಕ್ ನೀಡುವುದು, ಅದನ್ನು ಸ್ವೀಕರಿಸಿ ಮೌಲ್ಯಮಾಪನ ಮಾಡುವುದು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಲು ಬೇಕಾದ ಪಾಠೋಪಕರಣಗಳು ಮತ್ತು ಸಾಫ್ಟ್ ವೇರ್​ಗಳ ಬಳಸುವ ಜ್ಞಾನ ಕೊರತೆ ಮತ್ತು ಮಾರುಕಟ್ಟೆಗಳಲ್ಲಿ ಉಪಕರಣಗಳ ಬೆಲೆ ದುಬಾರಿ ಯಾಗಿರುವುದು ಶಿಕ್ಷಕರಿಗೆ ಸಂಕಷ್ಟ ತಂದೊಡ್ಡಿದೆ.

    ನೆಟ್​ವರ್ಕ್ ಸಮಸ್ಯೆ!

    ಇತ್ತೀಚಿನ ದಿನಗಳಲ್ಲಿ ಉತ್ತಮ ನೆಟ್​ವರ್ಕ್ ಸಿಗುವುದು ಕಷ್ಟ. ಮನೆಯ ಯಾವುದೋ ಮೂಲೆಯಲ್ಲಿ ಇಂಟರ್​ನೆಟ್ ಸಿಗಲಿದ್ದು, ಅಲ್ಲೇ ಮೊಬೈಲ್ ಇಟ್ಟು ಬೋಧನೆ ಮಾಡಬೇಕಿದೆ. ಪರಿಣಾಮಕಾರಿಯಾಗಿ ಬೋಧನೆ ಮಾಡುವುದು ಶಿಕ್ಷಕರಿಗೆ ಸವಾಲಿನ ಪ್ರಶ್ನೆಯಾಗಿದೆ. ಕೆಲ ಖಾಸಗಿ ಶಾಲೆಗಳು ಶಿಕ್ಷಕರಿಗೆ ವೇತನವನ್ನೇ ಸ್ಥಗಿತಗೊಳಿಸಿವೆ. ಕೆಲ ಶಾಲೆಗಳು ಅರ್ಧ ವೇತನ ನೀಡುತ್ತಿವೆ. ಶಿಕ್ಷಕರು ವೇತನಕ್ಕಾಗಿ ಆನ್​ಲೈನ್ ತರಗತಿ ನಡೆಸುವುದು ಅನಿವಾರ್ಯವಾಗಿದೆ.

    ತಾಂತ್ರಿಕ ಸಮಸ್ಯೆ ಹೆಚ್ಚು

    ಮನೆಯಲ್ಲಿ ಬೋಧನೆ ಮಾಡಲು ಬೇಕಾದ ಕ್ಯಾಮರಾ, ವಿಡಿಯೋ ಎಡಿಟಿಂಗ್, ಟ್ರೖೆಪಾಡ್, 5ಜಿ ಇಂಟರ್​ನೆಟ್ ಲಭ್ಯವಿಲ್ಲದಿರುವುದರಿಂದ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾವ ವೇಗದಲ್ಲಿ ಪಾಠ ಮಾಡಬೇಕು, ಒಂದು ಅಧ್ಯಾಯವನ್ನು ಎಷ್ಟು ನಿಮಿಷದಲ್ಲಿ ಮುಕ್ತಾಯ ಮಾಡಬೇಕು ಎಂಬ ಹಲವು ಪ್ರಶ್ನೆಗಳು ಖಾಸಗಿ ಶಿಕ್ಷಕರಲ್ಲಿವೆ.

    ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts