More

    ಪ್ರತಿಯೊಬ್ಬರಿಗೂ ಇರಲಿ ಹಕ್ಕುಗಳ ಅರಿವು

    ಭದ್ರಾವತಿ: ಮೂಲಭೂತವಾಗಿ ಸಿಗಬೇಕಾದ ಹಕ್ಕುಗಳಿಂದ ನಾವು ವಂಚಿತರಾದಾಗ ಅವುಗಳನ್ನು ಅರಿತುಕೊಳ್ಳುವ ಮತ್ತು ಪುನಃ ಪಡೆದುಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಈ ದಿಸೆಯಲ್ಲೇ ಹೋರಾಟಗಳು ರೂಪುಗೊಳ್ಳುತ್ತವೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಹೇಳಿದರು.

    ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಕಾಮ್ರೇಡ್ ಡಿ.ಸಿ.ಮಾಯಣ್ಣ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಡಿ.ಸಿ ಮಾಯಣ್ಣ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿಗೂ ಬೆಲೆ ಇದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮುಂಚೂಣಿ ನಾಯಕರು ಹೋರಾಟವನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ತಮ್ಮ ಗುರಿ ತಲುಪಬೇಕು. ಡಿ.ಸಿ.ಮಾಯಣ್ಣ ಅವರ ಹೋರಾಟಗಳು ಈ ದಾರಿಯಲ್ಲೇ ಸಾಗಿ ಬಂದಿವೆ. ಸ್ವಾರ್ಥರಹಿತ ಹೋರಾಟಗಾರರ ಹೋರಾಟಗಳಿಗೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮಾತನಾಡಿ, ಅನ್ಯಾಯದ ವಿರುದ್ಧ ಡಿ.ಸಿ.ಮಾಯಣ್ಣ ನಡೆಸುತ್ತಿದ್ದ ಹೋರಾಟಗಳು ಸಾಕಷ್ಟು ಜನರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಸಾಕಷ್ಟು ವಿಚಾರ ಜ್ಞಾನಿಗಳಾದ ಅವರು ಮೇಲಧಿಕಾರಿಗಳಿಗೆ ಕೊಡುತ್ತಿದ್ದ ಉತ್ತರಗಳು ಬಹಳ ಹರಿತವಾಗಿರುತ್ತಿದ್ದವು. ಪರಿಸ್ಥಿತಿಯ ಅರಿವಿಲ್ಲದೆ ಯಾವ ಹೋರಾಟಗಳನ್ನೂ ಅವರು ಕೈಗೊಳ್ಳುತ್ತಿರಲಿಲ್ಲ. ಅವರ ಹೋರಾದ ರೂಪುರೇಷೆಗಳು ಯುವ ಹೋರಾಟಗಾರರಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.
    ಗಾಯಕ ಹರೋನಹಳ್ಳಿ ಸ್ವಾಮಿ ಅವರಿಂದ ಗೀತಾ ಗಾಯನ ಹಾಗೂ ಕಲಾವಿದ ಅಪೇಕ್ಷ ಮಂಜುನಾಥ್ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. ಇದಕ್ಕೂ ಮೊದಲು ನಗರದ ಬಿ.ಎಚ್.ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪತ್ರಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಉದ್ಯಮಿಗಳಾದ ಬಿ.ಕೆ.ಜಗನ್ನಾಥ, ಬಿ.ಕೆ.ಶಿವಕುಮಾರ್, ಎಂಪಿಎಂ ಕಾರ್ಮಿಕ ಮುಖಂಡ ಟಿ.ಜಿ.ಬಸವರಾಜಯ್ಯ, ವಿಐಎಸ್‌ಎಲ್ ಕಾರ್ಮಿಕ ಮುಖಂಡ ಕಾಳೇಗೌಡ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ಎಸ್.ಜಿ.ರಾಜು, ಕಲಾವಿದ ಆಂಜನೇಯ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಮಾಯಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಸೀತಾರಾಮ್, ಪ್ರಧಾನ ಸಂಚಾಲಕ ಬಿ.ಎನ್.ರಾಜು, ಟಿ.ವೆಂಕಟೇಶ್, ನರಸಿಂಹಾಚಾರ್, ಕೃಷ್ಣೇಗೌಡ, ಜಾನ್‌ಬೆನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts