More

    ನೀಲಗಿರಿ ಎಲೆಯನ್ನು ಹುಳಗಳು ಮತ್ತು ಬ್ಯಾಕ್ಟೀರಿಯ ತಿನ್ನಲಾರವು; ಇದರಿಂದಾಗುವ ದುಷ್ಪರಿಣಾಮ ಏನು ಗೊತ್ತಾ?

    ಮುಂದುವರಿದ ಭಾಗ..

    ನೀಲಗಿರಿ ಎಲೆಯನ್ನು ಹುಳಗಳು ಮತ್ತು ಬ್ಯಾಕ್ಟೀರಿಯ ತಿನ್ನಲಾರವು; ಇದರಿಂದಾಗುವ ದುಷ್ಪರಿಣಾಮ ಏನು ಗೊತ್ತಾ?ಭೂಮಿಯ ಮೇಲ್ಪದರದ ಮಣ್ಣು ಫಲವತ್ತಾಗಬೇಕಾದರೆ, ಗಿಡ-ಮರಗಳ ಎಲೆಗಳು ಹುಳ-ಹುಪ್ಪಟೆ ಮತ್ತು ಬ್ಯಾಕ್ಟೀರಿಯಾಗೆ ಆಹಾರವಾಗಿ ಕರಗಬೇಕು ನಂತರ ಆ ಎಲೆಗಳಲ್ಲಿರುವ ಖನಿಜಾಂಶಗಳು ಪುನರ್ಬಳಕೆಯಾಗಲು ಮತ್ತೆ ಬೇರುಗಳ ಮುಖಾಂತರ ಮರಗಿಡಗಳನ್ನು ಸೇರಬೇಕು.

    ಆದರೆ, ನೀಲಗಿರಿ ಮರದ ಎಲೆಗಳಲ್ಲಿ ಎಣ್ಣೆಯ ಅಂಶವಿರುವುದರಿಂದ, ಆ ಎಲೆಗಳನ್ನು ಮಣ್ಣಿನಲ್ಲಿರುವ ಹುಳಗಳು ಮತ್ತು ಬ್ಯಾಕ್ಟೀರಿಯ ತಿನ್ನಲಾಗದ ಕಾರಣ ಅವುಗಳು ಊಟವಿಲ್ಲದೆ ಹಸಿವಿನಿಂದ ಸಾಯಲಾರಂಭಿಸಿದವು, ಅಲ್ಲಿ ಮಣ್ಣು ಫಲವತ್ತತೆಯನ್ನು ಕಳೆದುಕೊಂಡಿತು. ಹಾಗಾಗಿ ನೀಲಗಿರಿ ಮರಗಳ ಅಕ್ಕ ಪಕ್ಕದಲ್ಲಿ ಬೇರೆ ಯಾವುದೇ ಜಾತಿಯ ಗಿಡಮರಗಳು ಮತ್ತು ಹುಲ್ಲು ಬೆಳೆಯಲು ಸಾಧ್ಯವಾಗಲಿಲ್ಲ, ಹಲವಾರು ಗಿಡಮೂಲಿಕೆಗಳು ನಾಶವಾದವು, ಸಸ್ಯಾಹಾರಿ ವನ್ಯಜೀವಿಗಳಿಗೆ ಮೇವು ನಾಶವಾಯಿತು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಅನುಪಾತದಲ್ಲಿ ವ್ಯತ್ಯಾಸವಾಯಿತು. ವನ್ಯಜೀವಿ ಮತ್ತು ಮಾನವನ ಸಂಘರ್ಷ ಹೆಚ್ಚಾಯಿತು. ಕಾಡಿನ ಸಸ್ಯಾಹಾರಿಗಳಿಗೆ ದನ-ಕರುಗಳಿಗೆ ಮತ್ತು ಆಡು-ಕುರಿಗಳಿಗೆ ಔಷಧಯುಕ್ತ ಮೇವು ಇಲ್ಲವಾಯಿತು. ಆಹಾರ ಸರಪಳಿಯ ಕೊಂಡಿ ಮುರಿದು ಬಿತ್ತು. ಇವುಗಳನ್ನು ನಂಬಿ ಜೀವನ ನಡೆಸುತ್ತಿದ್ದ ರೈತ ಕಂಗಾಲಾದ. ಮಾಂಸದ ಸರಬರಾಜು ಏರುಪೇರಾಗಿ, ಮಾಂಸದ ಬೆಲೆ ಹೆಚ್ಚಾಯಿತು.

    ಅಂತರ್ಜಲ ಕುಸಿಯಿತು:
    ನೀಲಗಿರಿ ಬೆಳೆಯುವ ಜಾಗದಲ್ಲಿ ಮಣ್ಣು ತೇವಾಂಶ ಕಳೆದುಕೊಂಡಿತು. ನಂತರ ಆ ಮರಗಳು ಸುತ್ತಮುತ್ತಲಿನ ನೀರನ್ನು ಹೀರತೊಡಗಿದವು. ಈ ಮರದ ಅಡಿಯಲ್ಲಿ ಹುಳ-ಹುಪ್ಪಟೆಗಳೆಲ್ಲ ಸತ್ತು ಮಣ್ಣಿನ ಮೇಲ್ಪದರ ಬರುಡಾಗಿ ಮಳೆನೀರು ಆ ಸ್ಥಳದಲ್ಲಿ ಇಂಗದೆ ಕೊಚ್ಚಿಹೋಗಲಾರಂಭಿಸಿತು. ಫಲವತ್ತಾದ ಮಣ್ಣಿನ ಸವಕಳಿಯಾಯಿತು. ಈ ಮಣ್ಣು ಕೆರೆ ಕಟ್ಟೆಗಳಲ್ಲಿ ಹೂಳಾಗಿ ಪರಿವರ್ತನೆಗೊಂಡಿತು. ನೀರು ಇಂಗದ ಕಾರಣ ಅಂತರ್ಜಲ ಕುಸಿಯುತ್ತ ಹೋಯಿತು. ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲದಾಯಿತು. ರೈತರು ನೀರಿಗಾಗಿ ಹಪತಪಿಸುವಾಗ ಬೋರ್‌ವೆಲ್ ತೆಗೆದರು. ಅಲ್ಲಿ ನೀರು ಖಾಲಿಯಾದಾಗ ಇನ್ನೊಂದು ಬೋರ್‌ವೆಲ್ ತೆಗೆದರು. ಹೀಗೆ ಕರ್ನಾಟಕ ರಾಜ್ಯಾದ್ಯಂತ ಲಕ್ಷಾಂತರ ಬೋರ್‌ವೆಲ್‌ಗಳಾದವು. ಅಂತರ್ಜಲ ಖಾಲಿಯಾಯಿತು.

    ನೀಲಗಿರಿಯಿಂದ ಎಷ್ಟೊಂದು ತೊಂದರೆಯಾಗುತ್ತಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts