More

    ಮೊದಲ ಸುತ್ತಿನಲ್ಲೇ ಸೋತ ಹಾಲಿ ಚಾಂಪಿಯನ್: ನಗಾಲ್ ಪರಾಭವ

    ಲಂಡನ್: ವರ್ಷದ 3ನೇ ಗ್ರಾಂಡ್ ಸ್ಲಾಂ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಆಘಾತಕಾರಿ ಲಿತಾಂಶ ಹೊರಹೊಮ್ಮಿದ್ದು, ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ 1994ರ ಬಳಿಕ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಸೋತ ಮೊದಲ ಹಾಲಿ ಮಹಿಳಾ ಚಾಂಪಿಯನ್ ಎಂಬ ಅನಪೇಕ್ಷಿತ ದಾಖಲೆಗೆ ಪಾತ್ರರಾಗಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ನಂ.1 ಜನ್ನಿಕ್ ಸಿನ್ನರ್, ಹಬರ್ಟ್ ಹರ್ಕಾಜ್ ಎರಡನೇ ಸುತ್ತಿಗೇರಿದರೆ, ಮಹಿಳೆಯರ ವಿಭಾಗದಲ್ಲಿ 2021ರ ಚಾಂಪಿಯನ್ ಎಲೆನಾ ರೈಬಕಿನಾ, ಅಮೆರಿಕದ ಕೋಕೋ ಗ್ೌ, ಜಪಾನ್‌ನ ಜಪಾನ್ ನವೊಮಿ ಒಸಾಕಾ ಗೆಲುವಿನ ಆರಂಭ ಕಂಡರು.

    ಟೂರ್ನಿಯ ಎರಡನೇ ದಿನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ 4-6, 2-6 ನೇರ ಸೆಟ್‌ಗಳಿಂದ ಸ್ಪೇನ್‌ನ ಜೆಸ್ಸಿಕಾ ಬೌಜೌಸ್ ಎದುರು ಮುಗ್ಗರಿಸಿದರು. ಕಳೆದ ವರ್ಷ ಅಚ್ಚರಿಯ ಪ್ರಶಸ್ತಿ ವಿಜೇತೆ ಎನಿಸಿದ್ದ ವೊಂಡ್ರೊಸೊವಾ ಹಸಿರು ಅಂಕಣದಲ್ಲಿ ಟ್ರೋಫಿ ಗೆದ್ದ ಮೊದಲ ಶ್ರೇಯಾಂಕರಹಿತೆ ಎನಿಸಿದ್ದರು.
    ಈ ಬಾರಿ 6ನೇ ಶ್ರೇಯಾಂಕಿತೆಯಾಗಿ ಕಣಕ್ಕಿಳಿದಿದ್ದ ವೊಂಡ್ರೊಸೊವಾ 2019ರ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 21 ವರ್ಷದ ಜೆಸ್ಸಿಕಾ ಬೌಜೌಸ್ ಅವರಿಗೆ ಇದು ಮೂರನೇ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿ ಇದಾಗಿದೆ.

    ಮೊದಲ ಸುತ್ತಿನಲ್ಲಿ ಸೋತ ನಗಾಲ್​: ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ವಿಂಬಲ್ಡನ್​ ಟೂರ್ನಿಯ ಮೊದಲ ಸುತ್ತಿನಲ್ಲಿ ನಿರಾಸೆ ಕಂಡಿದ್ದಾರೆ. ಪುರುಷರ ಸಿಂಗಲ್ಸ್​ನ ಪ್ರಧಾನ ಸುತ್ತಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಗಾಲ್​, ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ 2&6, 6-3, 3-6, 4-6 ರಿಂದ ಸೋಲು ಅನುಭವಿಸಿದರು. 2 ಗಂಟೆ 38 ನಿಮಿಷ ನಡೆದ ಹೋರಾಟದಲ್ಲಿ ಕಠಿಣ ಹೋರಾಟ ನಡೆಸಿದ ನಗಾಲ್​, ವಿಶ್ವ ನಂ.53 ಸೆರ್ಬಿಯಾದ ಮಿಯೋಮಿರ್​ ಕೆಕ್ಮನೋವಿಕ್​ ಎದುರು ಹಿನ್ನಡೆ ಎದುರಿಸಿದರು. 26 ವರ್ಷದ ನಗಾಲ್​ ಸದ್ಯ ಎಟಿಪಿ ರ್ಯಾಂಕಿಂಗ್​ನಲ್ಲಿ 72ನೇ ಶ್ರೇಯಾಂಕದಲ್ಲಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ನಗಾಲ್​ 2019ರ ಬಳಿಕ ವಿಂಬಲ್ಡನ್​ ಪುರುಷರ ಸಿಂಗಲ್ಸ್​ ಪ್ರಧಾನ ಸುತ್ತಿನಲ್ಲಿ ಆಡಿದ ಮೊದಲ ಭಾರತೀಯ ಎನಿಸಿದರು. ಪ್ರೇಶ್​ ಗುಣೇಶ್ವಶ್ವರ್​ 2019ರಲ್ಲಿ ಮೊದಲ ಸುತ್ತಿನಲ್ಲೆ ನಿರ್ಗಮಿಸಿದ್ದರು.

    See also  ಶೇ.50 ಕೆರೆಗಳ ಸರ್ವೇ ಪೂರ್ಣ ಒತ್ತುವರಿ ತೆರವಿಗೆ ಸರ್ಕಾರ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts