More

    ಪದೇಪದೆ ಎನರ್ಜಿ ಡ್ರಿಂಕ್ಸ್​ ಕುಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಆಘಾತಕಾರಿ ಮಾಹಿತಿ…

    ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಬಿಡುವಿಲ್ಲದ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಇದರಿಂದ ಆಹಾರ, ಆರೋಗ್ಯದ ಮೇಲೆ ಸರಿಯಾದ ಗಮನ ಇಲ್ಲದಂತಾಗಿದೆ. ಕೆಲಸದ ಒತ್ತಡದಿಂದ ಬಳಲುವುದು ಇಂದು ಸಾಮಾನ್ಯ. ಈ ಸಮಯದಲ್ಲಿ ಅನೇಕ ಜನರು ಉಲ್ಲಾಸಕ್ಕಾಗಿ ಎನರ್ಜಿ ಡ್ರಿಂಕ್ಸ್​ ಕುಡಿಯುತ್ತಾರೆ. ಅದರಲ್ಲೂ ಯುವ ಜನಾಂಗ ಇದಕ್ಕೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದಾರೆ.

    ಎನರ್ಜಿ ಡ್ರಿಂಕ್ಸ್ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದಾರೆ. ಕೆಫೀನ್, ಸಕ್ಕರೆ ಮತ್ತು ಇನ್ನಿತರ ಅಂಶಗಳನ್ನು ಎನರ್ಜಿ ಡ್ರಿಂಕ್ಸ್​ ಹೊಂದಿರುತ್ತದೆ. ಇವು ದೇಹವನ್ನು ರಿಫ್ರೆಶ್ ಮಾಡುತ್ತದೆ ನಿಜ. ಆದರೆ ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತವೆ. ಅತಿಯಾಗಿ ಕುಡಿಯುವುದರಿಂದ ಹೃದಯದ ಸಮಸ್ಯೆಗಳೂ ಬರಬಹುದು. ಹೃದಯ ವೈಫಲ್ಯದಂತಹ ಮಾರಣಾಂತಿಕ ತೊಡಕುಗಳು ಸಹ ಎದುರಾಗಬಹುದು.

    ನಾರ್ವೇಜಿಯನ್ ಅಧ್ಯಯನ ಪ್ರಕಾರ ಎನರ್ಜಿ ಡ್ರಿಂಕ್ಸ್​ ಸೇವನೆಯಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಕಳಪೆ ನಿದ್ರೆ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ. ಇವುಗಳನ್ನು ಹೆಚ್ಚಾಗಿ ಕುಡಿದಷ್ಟೂ ನಿಮ್ಮ ರಾತ್ರಿಯ ನಿದ್ದೆ ಕೆಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ತಿಂಗಳಿಗೆ 1 ರಿಂದ 3 ಬಾರಿ ಕುಡಿದರು ಸಹ ನಿದ್ರಾಹೀನತೆಯ ಅಪಾಯವು ಹೆಚ್ಚು ಎಂದಿದೆ.

    ಎನರ್ಜಿ ಡ್ರಿಂಕ್‌ಗಳಲ್ಲಿ ಸಕ್ಕರೆ, ವಿಟಮಿನ್‌ಗಳು ಮತ್ತು ಖನಿಜಾಂಶಗಳ ಜೊತೆಗೆ ಕೆಫೀನ್ ಇರುತ್ತದೆ. ಪ್ರತಿ ಲೀಟರ್‌ಗೆ ಸರಾಸರಿ 150 ಮಿ.ಗ್ರಾಂ. ಕೆಫೀನ್ ಸೇರಿಸಲಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುತ್ತವೆ ಎಂದು ಪ್ರಚಾರ ಮಾಡಿರುವುದರಿಂದ ವಿದ್ಯಾರ್ಥಿಗಳು ಮತ್ತು ಯುವಕರು ಇವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ, ಕೆಫೀನ್ ನಿದ್ರೆಯನ್ನು ಕೆಡಿಸುತ್ತದೆ. ಎನರ್ಜಿ ಡ್ರಿಂಕ್ಸ್​ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆಯಾದರೂ, ಪರಿಣಾಮದ ಪ್ರಮಾಣದ ಬಗ್ಗೆ ತಿಳಿದಿಲ್ಲ.

    18-35 ವರ್ಷ ವಯಸ್ಸಿನ 53,266 ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಎಷ್ಟು ಬಾರಿ ಎನರ್ಜಿ ಡ್ರಿಂಕ್ಸ್​ ಕುಡಿಯುತ್ತೀರಿ? ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಿದ್ದೀರಿ? ಎಂಬುದರ ಆಧಾರದ ಮೇಲೆ ಪರೀಕ್ಷಿಸಲಾಯಿತು. ಈ ಡ್ರಿಂಕ್​ಗಳನ್ನು ಕುಡಿಯದೇ ಇರುವವರು ಚೆನ್ನಾಗಿ ನಿದ್ರೆ ಮಾಡುವುದು ಕಂಡುಬಂದಿದೆ. ಆಗೊಮ್ಮೆ ಈಗೊಮ್ಮೆ ಕುಡಿಯುವರು ಅರ್ಧ ಗಂಟೆ ಕಡಿಮೆ ನಿದ್ದೆ ಮಾಡುವುದು ಕಂಡು ಬಂದಿದೆ. ಈ ಡ್ರಿಂಕ್​ ಕುಡಿಯುವವರು ನಿದ್ರೆಗೆ ಜಾರಿದ ನಂತರ ಮತ್ತೆ ಎಚ್ಚರಗೊಳ್ಳುತ್ತಾರೆ ಮತ್ತು ಬಹಳ ಸಮಯದವರೆಗೆ ಮತ್ತೆ ನಿದ್ದೆ ಮಾಡುವುದಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಕೊಲೆ ಪ್ರಕರಣದಲ್ಲಿ ದರ್ಶನ್​ ಬಂಧನ: ನಟ ಶಿವರಾಜ್​ಕುಮಾರ್​ ವಿರುದ್ಧ ಪ್ರಶಾಂತ್​ ಸಂಬರಗಿ ಆಕ್ರೋಶ

    ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದ ಟೀಮ್​ ಇಂಡಿಯಾ: ಭರ್ಜರಿ ಗೆಲುವಿಗೆ 3 ಪ್ರಮುಖ ಕಾರಣಗಳು ಹೀಗಿವೆ…

    ಹುಡುಗರನ್ನು ಕುರುಡಾಗಿ ಪ್ರೀತಿಸುವ ಹುಡುಗಿಯರಿಗೆ ಈಕೆಯ ದುರಂತ ಕತೆಯೇ ಒಂದು ಪಾಠ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts