More

    ನಿರುದ್ಯೋಗ ತಗ್ಗಿಸಲು ಉದ್ಯೋಗ ಮೇಳ ಅಗತ್ಯ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ನಿರುದ್ಯೋಗ ಪ್ರಮಾಣವನ್ನು ತಹಬದಿಗೆ ತರಲು ಆಗಾಗ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
    ನಗರದ ಕೆ.ಇ. ಬೋರ್ಡ ಕಾಲೇಜು ಆವರಣದಲ್ಲಿ ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ನೇತೃತ್ವದ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರವು ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
    ಸರ್ಕಾರಗಳು ಆಗಾಗ ತನ್ನಲ್ಲಿರುವ ಖಾಲಿ ಹುದ್ದೆಗಳನ್ನು ತುಂಬದಿದ್ದರೆ ನಿರುದ್ಯೋಗ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳ ಮನಮೊಲಿಸಿ ಇಂತಹ ಮೇಳಗಳನ್ನು ನಡೆಸಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎಂದರು.
    ಶಾಸಕ ಎಂ.ಆರ್​. ಪಾಟೀಲ ಮಾತನಾಡಿ, ಸರ್ಕಾರ ನೌಕರಿ ನೆಚ್ಚದೆ ಖಾಸಗಿ ಸಂಸ್ಥೆ, ಕಂಪನಿಗಳಲ್ಲಿ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಬೇಕು. ಪಡೆದ ಉದ್ಯೋಗವನ್ನು ಆಸಕ್ತಿಯಿಂದ ನಿರ್ವಹಿಸಿದರೆ ಉನ್ನತ ಹುದ್ದೆ ಸಿಗಲಿವೆ ಎಂದರು.
    ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಮಾತನಾಡಿ, ನಿರೀಕ್ಷೆ ಮೀರಿ ಪದವೀಧರರು ಮೇಳಕ್ಕೆ ಆಗಮಿಸಿದ್ದಾರೆ. ನಿರುದ್ಯೋಗ ಸಮಸ್ಯೆ ಎಷ್ಟಿದೆ ಎಂಬುದು ಈ ಮೂಲಕ ತಿಳಿಯಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಮಾತ್ರವಲ್ಲದೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಂದ ಅಭ್ಯಥಿರ್ಗಳು ಬಂದಿದ್ದಾರೆ ಎಂದರು.
    ಕೆ.ಇ ಬೋರ್ಡ್​ ಅಧ್ಯಕ್ಷ ಎಸ್​.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಎಸ್​. ರಾಜಪುರೋಹಿತ, ಪ್ರಾಚಾರ್ಯ ಮೋಹನ ಸಿದ್ದಾಂತಿ, ಇತರರು ಇದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಮೇಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಉದ್ಯೋಗ ಮೇಳಕ್ಕೆ ಆಗಮಿಸಿ ನೋಂದಣಿ ಮಾಡಿಸಿದ 4550 ಅಭ್ಯರ್ಥಿಗಳ ಪೈಕಿ 3890 ಅಭ್ಯರ್ಥಿಗಳು ವಿವಿಧ ಉದ್ಯೋಗಗಳಿಗೆ ಅರ್ಹತೆ ಪಡೆದರೆ, ವಿವಿಧ ಕಂಪನಿಗಳಿಗೆ 1248 ಜನರು ಆಯ್ಕೆಯಾಗಿದ್ದಾರೆ. ಮೇಳದಲ್ಲಿ 69 ಕಂಪನಿಗಳು ಪಾಲ್ಗೊಂಡಿದ್ದವು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts