More

    ಭೂತಾಯಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

    ಹುಮನಾಬಾದ್: ಪ್ರತಿಯೊಬ್ಬರೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಸಕಲ ಜೀವಜಂತುಗಳ ಸಲಹುವ ಭೂಮಿ ತಾಯಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

    ಪಟ್ಟಣದ ಹಿರೇಮಠ ಬಡಾವಣೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ `ಏಕ್ ಪೇಡ ಮಾ ಕೆ ನಾಮ್’ ಎಂಬ ಕರೆಯ ಮೇರೆಗೆ ಪಕ್ಷದ ಮುಖಂಡರೊಂದಿಗೆ ಸಸಿ ನೆಟ್ಟು ಮಾತನಾಡಿದ ಅವರು, ಪ್ರಧಾನಿ ಮೋದಿಜೀ ಅವರ ಕರೆಯಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ, ಹೊಲದಲ್ಲಿ ತಾಯಿ ಹೆಸರಿನಲ್ಲಿ ಸಸಿ ನೆಡೆವುದು ಸೇರಿ ಒಟ್ಟಿನಲ್ಲಿ ಪರಿಸರ ಸಂರಕ್ಷಿಸಬೇಕು. ಇಲ್ಲದಿದ್ದಲ್ಲಿ ಪರಿಸರ ಅಸಮತೋಲನದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಮನುಷ್ಯ ಸೇರಿ ಎಲ್ಲ ಜೀವಜಂತುಗಳು ಬಲಿಯಾಗುವ ದಿನಗಳು ದೂರವಿಲ್ಲ. ಇದನ್ನು ಎಚ್ಚತ್ತು ಎಲ್ಲರೂ ಸಸಿಗಳನ್ನು ನೆಡೆಸಿ ಬೆಳೆಸಿ ಪರಿಸರ ಉಳಿಸಲು ಮುಂದಾಗಬೇಕೆಂದು ಹೇಳಿದರು.

    ನಂತರ ಬಡಾವಣೆಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು. ಮಂಡಲದ ಬಿಜೆಪಿ ಅಧ್ಯಕ್ಷ ಪ್ರಭಾಕರ ನಾಗರಳೆ, ಅಂಬೇಡ್ಕರ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ನಗರ ಘಟಕ ಅಧ್ಯಕ್ಷದ ಗಿರೀಶ ಪಾಟೀಲ್, ಮುಖಂಡರಾದ ಗಿರೀಶ ತುಂಬಾ, ಸಂತೋಷ ನಾವದಗಿ, ಅನಿಲ ಪಸರ್ಗಿ, ಜೆ.ಧುಮಾಳೆ, ಗೋಪಾಲಕೃಷ್ಣ ಮೋಹಾಳೆ, ಶಿವರಾಜ ರಾಜೋಳೆ, ರಾಮಣ್ಣ ದುಬಲಗುಂಡಿ, ಸಂಜು ವಾಡೇಕರ, ಸಂತೋಷ ಯಾದವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts