More

    ಸಮಾನತೆ, ಸಾಮರಸ್ಯ ಸೃಷ್ಟಿಗೆ ಶಿಕ್ಷಣ ಸಾಧನ:ಥಾವರ್​ ಚಂದ್​ ಗೆಹಲೋತ್​ ಪ್ರತಿಪಾದನೆ

    ಬೆಂಗಳೂರು: ದೇಶದ ಸಾಂಸತಿಕ ಸಂಪ್ರದಾಯವನ್ನು ಇನ್ನಷ್ಟು ಬಲಪಡಿಸಲು, ಸಮಾನತೆ ಮತ್ತು ಸಾಮರಸ್ಯದ ವಾತಾವರಣ ಸೃಷ್ಟಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸಲಿದ್ದು, ಇದರಿಂದ ಏಕತೆ, ಸಮಗ್ರತೆ ಬಲಗೊಳ್ಳುತ್ತದೆ ಎಂದು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಹೇಳಿದ್ದಾರೆ.

    ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ 3ನೇ ಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ನಮ್ಮ ಸಂಸತಿ ಯಾವಾಗಲೂ ಭ್ರಾತ್ವತ್ವ, ಶಾಂತಿ, ಸಮಾನತೆ, ಸಾಮರಸ್ಯಗಳನ್ನು ಪ್ರೇರೇಪಿಸುತ್ತದೆ. ಪ್ರಾಚಿನ ಕಾಲದಲ್ಲಿ ನಮ್ಮ ದೇಶವನ್ನು “ವಿಶ್ವಗುರು’ ಎಂದು ಕರೆಯಲಾಗುತ್ತಿತ್ತು. ನಳಂದ, ತಶಿಲಾ, ವಿಕ್ರಮಶಿಲಾ ಮುಂತಾದ ವಿಶ್ವದರ್ಜೆಯ ಶಿಣ ಸಂಸ್ಥೆಗಳಿದ್ದವು. ನಳಂದ ವಿವಿ ಭಾರತದ ಶ್ರೀಮಂತ ಶೈಣಿಕ ಪರಂಪರೆಯ ಸಂಕೇತವಾಗಿದ್ದು, ಜಾಗತಿಕ ಜ್ಷಾನ ಮತ್ತು ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡಿದೆ.ಈ ವಿವಿಯನ್ನು ಕೇಂದ್ರ ಸರ್ಕಾರ ಪುನರುಜ್ಜೀವನಗೊಳಿಸಿದೆ. ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಉದ್ಘಾಟಿಸಿದ್ದಾರೆ ಎಂದರು.

    ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಇದಕ್ಕೆ ಅಗತ್ಯ ಸಹಕಾರ ನೀಡಬೇಕು. ಸ್ವಾತಂತ್ರ ಗಳಿಸಿ 75 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪ್ರಸ್ತುತ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುತ್ತಿದೆ. ದೇಶ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಿದೆ. ಇದಕ್ಕೆ ಇಂದಿನ ಯುವಪೀಳಿಗೆ ಸಹಕಾರ ಅತ್ಯಗತ್ಯ. ಶಿಕ್ಷಣ ಸಂಸ್ಥೆಗಳು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆಗಾಗಿ ಆದ್ಯತೆ ನೀಡಬೇಕು. ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸುವುದನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು. ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್​, ಸಚಿವ ಎಂ.ಸಿ. ಸುಧಾಕರ್​, ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮತ್ತಿತರರು ಭಾಗಿಯಾಗಿದ್ದರು.

    ಅನುವಾದಿನಿ ತಂತ್ರಾಂಶ: ಇಂಗ್ಲಿಷ್​ನಲ್ಲಿ ಪ್ರಾವಿಣ್ಯತೆ ಹೊಂದಿರದ ಯುವ ಪದವೀಧರರು ತಮ್ಮ ಸ್ಥಳಿಯ ಭಾಷೆಗಳಲ್ಲಿ ಶೈಕ್ಷಣಿಕ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡುವುದಕ್ಕಾಗಿ ನಮ್ಮ ಸಂಸ್ಥೆ “ಎಐಸಿಟಿಇ ಅನುವಾದಿನಿ’ ಎಂಬ ತಂತ್ರಾಂಶ ರೂಪಿಸಲಾಗಿದೆ. ಇದು ಕಲಿಕೆಯನ್ನು ಹೆಚ್ಚು ಸುಲಭವಾಗಿಸುವ ಮೂಲಕ ಅಂತರ್ಗತ ಶಿಕ್ಷಣವನ್ನು ಬೆಂಬಲಿಸುತ್ತದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್​ನ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್​ ತಿಳಿಸಿದರು. ತಾಂತ್ರಿಕ ಶಿಕ್ಷಣದಲ್ಲಿ ಭಾಷಾ ಅಡೆತಡೆಗಳನ್ನು ನಿವಾರಿಸಲು “ಅನುದಾದಿನಿ’ ಉತ್ತಮ ಸಾಧನವಾಗಿದೆ. ಇದರಿಂದಾಗಿ ಶೈಕ್ಷಣಿಕ ಕಾರ್ಯಕ್ಷಮತೆಯು ಸುಧಾರಿಸುತ್ತದೆ ಎಂದರು.

    ರಾಜ್ಯಾದ್ಯಂತ ಜೂನ್​ನಲ್ಲಿ ವಾಡಿಕೆಯಷ್ಟೇ ಸುರಿದ ಮಳೆ: 22 ಜಿಲ್ಲೆಗಳಲ್ಲಿ ಅಧಿಕ

    35,912 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಈ ಬಾರಿಯ ಟಿಕೋತ್ಸವದಲ್ಲಿ 53 ಚಿನ್ನದ ಪದಕ, 4 ಪಿಎಚ್​.ಡಿ. ಸೇರಿ 35,912 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 3,983 ಪದವಿ,16,271 ಸ್ನಾತಕೋತ್ತರ ಪದವಿ, 4 ಪಿಎಚ್​.ಡಿ. ಪದವಿ ನೀಡಲಾಯಿತು. 63 ಪ್ರಥಮ ರ್ಯಾಂಕ್​ ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಮತ್ತು 32 ವಿದ್ಯಾರ್ಥಿನಿಯರು ಬೆಂ. ನಗರ ವಿವಿ ಸ್ಥಾಪಿತ ಚಿನ್ನದ ಪದಕ ಸ್ವೀಕರಿಸಿದರು. ಉಳಿದವರು ದಾನಿಗಳು ಸ್ಥಾಪಿಸಿರುವ 15 ಚಿನ್ನದ ಪದಕವನ್ನು ಪಡೆದರು. ಬಿಕಾಂನಲ್ಲಿ ಶ್ರೀಕೃಷ್ಣ ಪದವಿ ಕಾಲೇಜಿನ ಆರ್​. ರುತ್​ 3 ಚಿನ್ನದ ಪದಕ ಪಡೆದರೆ, ಎಂಬಿಎನಲ್ಲಿ ಆದರ್ಶ ಇನ್​ಸ್ಟಿಟ್ಯೂಟ್​ ಆ್​ ಮ್ಯಾನೇಜ್​ಮೆಂಟ್​ನ ಬಿ. ಸಹನಾ 2 ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಬೆಂ. ನಗರ ವಿವಿ ರಸಾಯನಶಾಸ್ತ್ರ ವಿಭಾಗದ ಎಂ. ಯಶಸ್​ 4 ಚಿನ್ನದ ಪದಕ, ಆರ್​ಜೆಎಸ್​ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಎಸ್​.ಎಸ್​. ಧನ್ಯತಾ, ಬೆಂ. ನಗರ ವಿವಿ ವಿದೇಶಿ ಭಾಷಾ ವಿಭಾಗದ ಮಿನಲ್​ ತಿವಾರಿ, ಬೆಂಗಳೂರು ದೃಶ್ಯ ಕಲೆಗಳ ಶಾಲೆ ಬಿ.ಹರ್ಷಿತಾ, ಎಂ.ಎಸ್​.ರಾಮಯ್ಯ ಕಾಲೇಜಿನ ಎಂ.ಎಸ್ಸಿ.ಯಲ್ಲಿ ಎಚ್​.ಪಿ. ಗಗನಶ್ರೀ ಹಾಗೂ ಬಿ. ಪ್ರಕೃತಿ ತಲಾ 2 ಚಿನ್ನದ ಪದಕಗಳಿಗೆ ಭಾಜನರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts