More

    ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ

    ಅಳವಂಡಿ: ಶಿಕ್ಷಣವೇ ಮಕ್ಕಳ ಜೀವನದ ದಾರಿದೀಪ ಎಂದು ಮುಖ್ಯ ಶಿಕ್ಷಕ ಶಂಭುಲಿಂಗನಗೌಡ ಪಾಟೀಲ್ ಹೇಳಿದರು.

    ಇದನ್ನೂ ಓದಿ: ಮೌಲ್ಯಾಧಾರಿತ ಶಿಕ್ಷಣ ಕೊಡುವುದು ಮುಖ್ಯ; ರುದ್ರಪ್ಪ ಲಮಾಣಿ

    ಸಮೀಪದ ಮೈನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಾಟಾ ಕಲಿಕಾ ಟ್ರಸ್ಟ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಎಲ್ಲ ಮಕ್ಕಳಿಗೆ ಶಿಕ್ಷಣ ಒದಗಿಸಲು ಪಾಲಕರು ಹಾಗೂ ಗ್ರಾಮಸ್ಥರು ಕೈಜೋಡಿಸಬೇಕು ಎಂದರು.

    ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಹಾಗಾಗಿ 6 ರಿಂದ 14 ವರ್ಷದ ಮಕ್ಕಳನ್ನು ಶಾಲೆಗೆ ದಾಖಲಿಸಿ. ಶಿಕ್ಷಣದಿಂದ ಉತ್ತಮ ಜೀವನ ನಡೆಸಲು ಸಾಧ್ಯ. ಸರ್ಕಾರ ಹಲವು ಉಚಿತ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ ಅವುಗಳ ಉಪಯೋಗ ಪಡೆದು ವಿದ್ಯಾವಂತರಾಗಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಮಹೇಂದ್ರಗೌಡ ಕುರಡಗಿ ಮಾತನಾಡಿದರು.

    ತಳಿರು, ತೋರಣ, ಹೂಗಳಿಂದ ಅಲಂಕರಿಸಿದ ಎತ್ತಿ ಬಂಡಿಯಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ಮಾಹಿತಿ ಬಿತ್ತಿಪತ್ರಗಳನ್ನು ಅಂಟಿಸಿ ಮಕ್ಕಳು ಡೊಳ್ಳು, ಕೋಲಾಟ, ಬ್ಯಾಂಡ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಣದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು.
    ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕರಾದ ಸುರೇಶ, ಕಲ್ಲಪ್ಪ, ಮುಖ್ಯ ಶಿಕ್ಷಕ ಬಸಯ್ಯ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts