More

    ಹಿಂದೂಗಳ ವಿರುದ್ಧ ಸೈದ್ಧಾಂತಿಕ ಯುದ್ಧ ಜಯಿಸಲು ನ್ಯಾಯವಾದಿಗಳ ಈಕೋ ಸಿಸ್ಟಮ್ ಅಗತ್ಯ! ಸದ್ಗುರು

    ಬೆಂಗಳೂರು:ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಯವಾದಿಗಳ ಕೊಡುಗೆ ಅನನ್ಯವಾಗಿದೆ. ಲೋಕಮಾನ್ಯ ತಿಲಕ, ಸರದಾರ ವಲ್ಲಭಭಾಯಿ ಪಟೇಲ, ಸ್ವಾತಂತ್ರವೀರ ಸಾವರಕರ, ಲಾಲಾ ಲಜಪತ ರಾಯ, ದೇಶಬಂಧು ಚಿತ್ತರಂಜನ ದಾಸ ಮುಂತಾದ ಅನೇಕ ನ್ಯಾಯವಾದಿಗಳು ಆ ಸಮಯದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಚಾರುದತ್ತ ಪಿಂಗಳೆ ತಿಳಿಸಿದರು.

    ಗೋವಾದ ಪೊಂಡಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಾವೇಶದ 6ನೇ ದಿನದ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ನ್ಯಾಯವಾದಿಗಳ ಕೊಡುಗೆ ಎಂಬ ವಿಷಯದ ಕುರಿತು ಮಾತನಾಡಿದರು.

    ಹಿಂದೂ ವಿರೋಧಿಗಳು ನ್ಯಾಯಾಲಯದ ಮೂಲಕ ಸೈದ್ಧಾಂತಿಕ ಯುದ್ಧವನ್ನು ಪ್ರಾರಂಭಿಸಿದ್ದಾರೆ. ಆದ್ದರಿಂದ ಹಿಂದೂಗಳ ಪರವಾಗಿ ಕಾನೂನು ಬದ್ಧವಾಗಿ ಸುದೃಢವಾಗಿರಲು ಸೈದ್ಧಾಂತಿಕ ಯೋಧರ ಅಗತ್ಯವಿದೆ. ಹಿಂದೂ ನ್ಯಾಯವಾದಿಗಳ ಸಂಘಟನೆ ಸಕ್ರಿಯವಾದರೆ. ಭವಿಷ್ಯದಲ್ಲಿ ಹಿಂದೂ ರಾಷ್ಟ್ರ ಖಂಡಿತವಾಗಿಯೂ ಸ್ಥಾಪನೆಯಾಗುತ್ತದೆ. ಜತೆಗೆ ಹಿಂದೂ ನ್ಯಾಯವಾದಿಗಳು ‘ ಈಕೋ ಸಿಸ್ಟಮ್ ರಚಿಸುವುದು ಅವಶ್ಯಕವಾಗಿದೆಯೆಂದು ಹೇಳಿದರು.

    ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಾಲ ಮಾತನಾಡಿ, ಭಾರತದಲ್ಲಿ ಕ್ರಿಕೆಟ್ ಅನ್ನು ಕ್ರೀಡಾ ಮನೋಭಾವದಿಂದ ಆಡಲಾಗುತ್ತಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಆಟವು ಪಾಕಿಸ್ತಾನಕ್ಕೆ ಮಾತ್ರ ಯುದ್ಧದಂತೆ ಕಾಣುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಕ್ರಿಕೆಟ ಆಡುವುದು ಜಿಹಾದ್ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಪಾಕಿಸ್ತಾನದ ಓರ್ವ ಆಟಗಾರ ತನ್ನ ಶತಕವನ್ನು ’ಪ್ಯಾಲೆಸ್ತೀನ’ಗೆ ಅರ್ಪಿಸಿದ್ದನು. ಆದ್ದರಿಂದ ಈ ಜಿಹಾದ್ ವಿರುದ್ಧ ಹಿಂದೂಗಳೂ ಎಚ್ಚರದಿಂದಿರಬೇಕು ಎಂದು ತಿಳಿಸಿದರು.

    ಲೇಖಕಿ ಪ್ರಾ. ಮಧು ಪೌರ್ಣಿಮಾ ಕಿಶ್ವರ ಮಾತನಾಡಿ ಪ್ರಸ್ತುತ ಕಾನೂನುಗಳು ಕುಟುಂಬ ವ್ಯವಸ್ಥೆಯನ್ನು ನಾಶಪಡಿಸುತ್ತಿವೆ. ಅದಕ್ಕಾಗಿಯೇ ಹಿಂದೂಗಳು ಕೌಟುಂಬಿಕ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ನಿವಾರಿಸಿಕೊಳ್ಳಬೇಕು.ಭಾರತದ ಹಿಂದೂ ಸಮಾಜ ಹಾಗೂ ಕುಟುಂಬ ವ್ಯವಸ್ಥೆಯನ್ನು ಮುರಿಯಲು ಆಂಗ್ಲರ ಕಾಲದಲ್ಲಿ ಮತ್ತು ಸ್ವಾತಂತ್ರ್ಯಾ ನಂತರವೂ ವಿವಿಧ ರೀತಿಯ ಕಾನೂನುಗಳನ್ನು ತರಲಾಗಿತ್ತು ಎಂದು ಹೇಳಿದರು.
    ಭಾರತದ ಮೇಲಾದ ಇಸ್ಲಾಮಿಕ್ ಆಕ್ರಮಣದ ನಂತರ ಹಿಂದೂ ಮಹಿಳೆಯ ಸಂರಕ್ಷಣೆಗಾಗಿ, ಹಿಂದೂಗಳಲ್ಲಿ ಬಾಲ್ಯವಿವಾಹ, ಪರದೆ ಮುಂತಾದ ರೂಢಿಗಳು ಬಂದವು. ಕ್ರೈಸ್ತ ಧರ್ಮಪ್ರಚಾರಕರು ಮತ್ತು ಕಥಿತ ಸಮಾಜ ಸುಧಾರಕರು ಈ ರೂಢಿಗಳನ್ನು ಘಾತಕವೆಂದು ನಿರ್ಧರಿಸಿ ಅದನ್ನು ನಿಲ್ಲಿಸಲು ಅದರ ವಿರುದ್ಧ ಕಾನೂನುಗಳನ್ನು ಮಾಡಿದರು. ಬಲ್ತ್ಕಾರ, ಕೌಟುಂಬಿಕ ದೌರ್ಜನ್ಯ, ಇವುಗಳ ಕುರಿತಾದ ನಕಲೀ ಖಟ್ಲೆಗಳಿಂದ ಅನೇಕ ಕುಟುಂಬಗಳು ನಾಶವಾಗುತ್ತಿವೆ ಮತ್ತು ಅನೇಕ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಮಾಜ ಸೇವೆಯ ಬುರ್ಖಾ ಹೊಂದಿರುವ ಸ್ವಯಂಸೇವಾ ಸಂಸ್ಥೆಗಳು ಈ ವ್ಯವಸ್ಥೆಯನ್ನು ಮುರಿಯಲು ಪ್ರುಯತ್ನಿಸುತ್ತಿವೆ. ಹಿಂದೂಗಳು ಕುಟುಂಬ ವ್ಯವಸ್ಥೆಯ ಸಂರಕ್ಷಣೆಗಾಗಿ ತಮ್ಮ ಸಮಸ್ಯೆಗಳನ್ನು ಕೌಟುಂಬಿಕ ಸ್ತರದಲ್ಲಿಯೇ ಸಮಾಲೋಚನೆಯಿಂದ ಪರಿಹರಿಸಲು ಪ್ರಯತ್ನಿಸಿದರೆ ಕುಟುಂಬ ಮತ್ತು ಸಮಾಜ ಒಗ್ಗಟ್ಟಿನಿಂದ ಉಳಿಯುತ್ತದೆ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts