More

    56 ಲಕ್ಷ ರೂಪಾಯಿ ಬೆಲೆ ಬಾಳುವ ನಕಲಿ ಸ್ಯಾನಿಟೈಸರ್, ಹ್ಯಾಂಡ್ ರಬ್​ ಬೆಂಗಳೂರು ಸಿಸಿಬಿ ವಶ: ಕರೊನಾ ಸೋಂಕಿನ ಲಾಭಕ್ಕೆತ್ನಿಸಿ ಕೆಮಿಕಲ್ ವ್ಯಾಪಾರಿಗಳು ಅಂದರ್

    ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುತ್ತಿದ್ದು, ಜನಜಾಗೃತಿ ಮೂಡಿಸುತ್ತಿರುವ ವೇಳೆಯೇ ಪರಿಸ್ಥಿತಿಯ ಲಾಭ ಪಡೆದು ಹಣ ಮಾಡಲು ಹವಣಸಿದ ಕೆಮಿಕಲ್ ವ್ಯಾಪಾರಿಗಳಿಬ್ಬರು ಈಗ ಬೆಂಗಳೂರು ಸಿಸಿಬಿ ಪೊಲೀಸರ ಅತಿಥಿಗಳು! ಬರೋಬ್ಬರಿ 56 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಯಾನಿಟೈಸರ್, ಹ್ಯಾಂಡ್​ರಬ್​ ಬೆಂಗಳೂರು ಪೊಲೀಸರ ವಶಕ್ಕೆ ಸಿಕ್ಕಿದೆ.

    ಬಂಧಿತ ಕೆಮಿಕಲ್ ವ್ಯಾಪಾರಿಗಳನ್ನು ಬೆಂಗಳೂರಿನ ಕಸ್ತೂರ್ಬಾ ನಗರದ ರಾಜು (43) ಮತ್ತು ಚಾಮರಾಜ ಪೇಟೆಯ ಚಂದನ್​(64) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಾಗರಿಕರು ಸೋಂಕು ಹರಡದಂತೆ ಕಾಳಜಿ ವಹಿಸುತ್ತಿದ್ದರೆ ಪರಿಸ್ಥಿತಿಯ ಲಾಭ ಪಡೆಯಲು ಆರೋಪಿಗಳು ಪ್ರಯತ್ನಿಸಿದ್ದರು. ಆರೋಪಿಗಳು ಬೆಂಗಳೂರಿನ ತರಗುಪೇಟೆಯ ಜ್ಯೋತಿ ಕೆಮಿಕಲ್ಸ್​, ಕಸ್ತೂರ್ಬಾ ನಗರದ ಸ್ವಾತಿ ಆ್ಯಂಡ್ ಕಂಪನಿಗೆ ಸೇರಿದ ಗೋಡೌನ್​ಗಳಲ್ಲಿ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್​ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.

    ದಾಳಿ ನಡೆಸಿದ ವೇಳೆ ಗೋಡೌನ್​ನಲ್ಲಿ ಮಾರಾಟಕ್ಕೆ ಸಿದ್ಧಪಡಿಸಿ ಇರಿಸಿದ್ದ 100 ಎಂಎಲ್​, 120 ಎಂಎಲ್​, 200 ಎಂಎಲ್​, 500 ಎಂಎಲ್​ಗಳ ಒಟ್ಟು 8,500 ಬಾಟಲಿಗಳು, 4,500 ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಮತ್ತು 35 ಲೀಟರ್​ ಇಸೋಪ್ರೊಪೈಲ್​ ಆಲ್ಕೋಹಾಲ್​ನ 8 ಕ್ಯಾನ್​ಗಳು, 4,500 ಸ್ಟಿಕ್ಕರ್​ಗಳು ಇದ್ದವು. ಇವುಗಳ ಬೆಲೆ 56 ಲಕ್ಷ ರೂಪಾಯಿ ಅಂದಾಜಿಸಲಾಗಿದ್ದು ಪೊಲೀಸರು ವಶಪಡಿಸಿದ್ದಾರೆ.

    ನಕಲಿ ಉತ್ಪನ್ನವನ್ನು ಇವರು ತಯಾರಿಸಿದ ಬಳಿಕ 100 ಎಂಎಲ್​ಗೆ 170 ರೂಪಾಯಿ, 200 ಎಂಎಲ್​ಗೆ 325 ರೂಪಾಯಿ, 500 ಎಂಎಲ್​ಗೆ 620 ರೂಪಾಯಿ ದರದ ಸ್ಟಿಕ್ಕರ್ ಅಂಟಿಸಿ ಮಾರಾಟಕ್ಕೆ ಮಾರುಕಟ್ಟೆ ರವಾನಿಸುತ್ತಿದ್ದರು. ಉತ್ಪನ್ನ ತಯಾರಿಗೆ ತಗುಲುವ ವೆಚ್ಚಕ್ಕಿಂತ 10 ಪಟ್ಟು ಲಾಭಾಂಶ ಇಟ್ಟುಕೊಂಡು ಎಂಆರ್​ಪಿ ಹಾಕಿ ದುಬಾರಿ ಲಾಭಾಂಶ ದೋಚುತ್ತಿದ್ದರು. ಇವರ ವಿರುದ್ಧ ಐಪಿಸಿ ಮತ್ತು ಡ್ರಗ್ಸ್​ ಆ್ಯಂಡ್ ಕಾಸ್ಮೆಟಿಕ್ಸ್​ ಕಾಯ್ದೆಯ ವಿವಿಧ ಅಂಶಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

    ನಿರ್ಭಯಾ ಕೇಸ್​ನ ಅಪರಾಧಿಗಳನ್ನು ನೇಣಿಗೇರಿಸಲು ಕೈದಿಗಳೇ ತಯಾರಿಸಿದ್ರಾ ಹಗ್ಗ?, ಪೂರ್ವಸಿದ್ಧತೆ ಹೇಗಿತ್ತು- ಇಲ್ಲಿದೆ ಮಾಹಿತಿ..

    ನಿರ್ಭಯಾ ಕೇಸ್ ಅಪರಾಧಿಗಳಿಗೆ ಶಿಕ್ಷೆ ಜಾರಿ- ಗಮನಸೆಳೆಯಿತು ಪ್ರಧಾನಿ ಟ್ವೀಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts