More

    ಡ್ರೈಡೇ ಕಾರ್ಯಕ್ರಮಕ್ಕೆ ಕೈಜೋಡಿಸಿ

    ದೇವದುರ್ಗ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಸ್ವಚ್ಛತೆಯಿಂದ ಸೊಳ್ಳೆಗಳ ನಿರ್ಮೂಲನೆ ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಬನದೇಶ್ವರ ಹೇಳಿದರು.

    ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮನ್ನು ಕಾಡುವ ರೋಗಗಳಿಂದ ದೂರವಿರಲು ಹೀಗೆ ಮಾಡಿ…

    ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆ ಹಾಗೂ ಸೊಳ್ಳೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಡೆಂಘೆಜ್ವರ ನಿಯಂತ್ರಣ ಎಲ್ಲರ ಜವಾಬ್ದಾರಿ.

    ಪ್ರತಿ ಶುಕ್ರವಾರ ಸೊಳ್ಳೆ ಉತ್ಪತ್ತಿ ತಾಣಗಳನ್ನು(ಡ್ರೈಡೇ) ನಾಶ ಮಾಡುವ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಮಾತನಾಡಿ, ಪ್ರತಿವಾರ ಪುರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆ ಇಬ್ಬರು ನೌಕರ ತಂಡ ರಚನೆ ಮಾಡಿ ನಿಗದಿಪಡಿಸಿದ ಏರಿಯಾದಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುವುದು. ಜತೆಗೆ 100ಮನೆಗಳಿಗೆ ಭೇಟಿನೀಡಿ ಲಾರ್ವ ಸಮೀಕ್ಷೆ ನಡೆಸಲಾಗುವುದು.

    ಲಾರ್ವ ಉತ್ಪತ್ತಿ ತಾಣಗಳನ್ನು ಟೆಮಿಪಾಸ್ ರಾಸಾಯನಿಕವನ್ನು ಹಾಕಿ ನಾಶ ಮಾಡಲಾಗುವುದು. ಆರೋಗ್ಯ ಇಲಾಖೆ ಸಮುದಾಯ ಸ್ವಚ್ಛತೆ ಕುರಿತು ಆರೋಗ್ಯ ಕುರಿತು ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

    ಆರೋಗ್ಯ ಇಲಾಖೆ ನೌಕರರಾದ ಚನ್ನಬಸಯ್ಯ ಹಿರೇಮಠ, ಓಂಕಾರ ಜಂತೇಕಾರ್, ಗೀತಮ್ಮ, ಮೈನುದ್ದೀನ್, ರವಿ, ಗೋಪಾಲ್, ರಾಚನಗೌಡ, ಚೇತನ್, ಇಸಾಕ್ ಅಹ್ಮದ್, ರಂಗಪ್ಪ, ಕಲಾವತಿ, ಐಶ್ಚರ್ಯ, ಆಶಾ ಕಾರ್ಯಕರ್ತೆಯರಾದ ರೇಖಾ, ಮಹಮ್ಮದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts