ಆ ಒಂದು ಕಾರಣಕ್ಕೆ ಚಾಲಕನನ್ನು ಹುಡುಕಿಕೊಂಡು ಬಂದು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದ ಮಹಿಳೆ | Driver

Untitled design - 2025-09-18T133443.769
Published on: 

Driver: ಮಹಿಳೆಯೊಬ್ಬರ ಟಿಕೆಟ್ ಬುಕಿಂಗ್ ದಾಖಲೆಯಿಂದ ತೆಗೆದ ಸಂಪರ್ಕ ವಿವರಗಳನ್ನು ಬಳಸಿಕೊಂಡು ತನ್ನ ಫೋನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂಬ ಆರೋಪದ ಮೇಲೆ ಖಾಸಗಿ ಬಸ್ ಚಾಲಕನನ್ನು ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಆತನಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಕೆಲ ತಿಂಗಳಿಂದೆ ಆ ಮಹಿಳೆ ಕಂಕವಲ್ಲಿಯಲ್ಲಿರುವ ಖಾಸಗಿ ಪ್ರಯಾಣ ಕಂಪನಿಯ ಕಚೇರಿಯ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಕಂಕವ್ಲಿ ಮತ್ತು ಮುಂಬೈ ನಡುವಿನ ಪ್ರಯಾಣಕ್ಕಾಗಿ ಅವರು ಅದೇ ಕಂಪನಿಯ ಬಸ್ ಸೇವೆಯನ್ನು ಆಗಾಗ್ಗೆ ಬಳಕೆ ಮಾಡುತ್ತಿದ್ದರು. ಇದೇ ದಾಖಲಾತಿಗಳ ಮೂಲಕ ಆರೋಪಿ ಚಾಲಕ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಮೆಸೇಜಿಂಗ್ ಆಪ್‌ಗಳ ಮೂಲಕ ಅಶ್ಲೀಲ ವೀಡಿಯೊಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕಚೇರಿ ಬಂದು ಚಾಲಕನಿಗೆ ಕಪಾಳಮೋಕ್ಷ

ಆತ ವಿಡಿಯೋ ಕಳುಹಿಸಿದ್ದ ನಂಬರ್​ ಪತ್ತೆ ಹಚ್ಚಿದ ಮಹಿಳೆ, ಕಂಕವ್ಲಿ ಬಸ್ ನಿಲ್ದಾಣದ ಬಳಿಯ ಕಂಪನಿಯ ಬುಕಿಂಗ್ ಕಚೇರಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಬಂದಳು. ಅವಳು ತನ್ನ ಫೋನ್‌ನೊಂದಿಗೆ ಅವನಿಗೆ ಸಂದೇಶಗಳನ್ನು ತೋರಿಸಿ ಹಲವಾರು ಬಾರಿ ಕಪಾಳಮೋಕ್ಷ ಮಾಡಿದಳು. ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆಯ ನಂತರ ಪ್ರಸ್ತುತ ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)