More

    ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ


    ಕೊಡಗು : ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಪುನಶ್ಚೇತನ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಬೇಬ ಹೇಳಿದರು.

    ನಾಪೋಕ್ಲುವಿನ ಪುನಶ್ಚೇತನ ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಹೆಣ್ಣು ಮಕ್ಕಳಿಗೆ ಆಯೋಜಿಸಿದ್ದ ಉಚಿತ ಟೈಲರಿಂಗ್ ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.


    ಮಕ್ಕಳ,ಮಹಿಳೆಯರ ಅಭಿವೃದ್ಧಿಗಾಗಿ ಸಂಸ್ಥೆ ವಿಶೇಷ ಕಾರ್ಯಕ್ರಮಗಳನ್ನು ಮ್ಮಿಕೊಳ್ಳುತ್ತಿದೆ.ಅವುಗಳ ಪ್ರಯೋಜನವನ್ನು ಹೊಂದಿಕೊಳ್ಳಬೇಕು ಎಂದರು.
    ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ ಮಾತನಾಡಿ ವಿಶೇಷ ಮಕ್ಕಳನ್ನ ಮುಖ್ಯವಾಹಿನಿಗೆ ತರುವುದರ ಜತೆಗೆ ಬಡ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಜೀವನ ನಡೆಸಲು ಟೈಲರಿಂಗ್ ತರಬೇತಿ ಕೊಡುತ್ತಿರುವುದು ಒಳ್ಳೆಯ ಉತ್ತಮ ಬೆಳವಣಿಗೆ ಎಂದರು.


    ಸಂಸ್ಥೆಯ ಮುಖ್ಯಸ್ಥರಾದ ಬೊಪ್ಪಂಡ ಸೂರಜ್ ಗಣಪತಿ, ಬಾಳೆಯಡ ದಿವ್ಯ ಮಂದಪ್ಪ, ತರಬೇತಿ ಶಿಕ್ಷಕಿ ಅಶ್ವಿನಿ, ತರಬೇತಿ ವಿದ್ಯಾರ್ತಿಗಳು, ಸಂಸ್ಥೆಯ ಶಿಕ್ಷಕಿ ಅಸ್ಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts