More

    ಡಿಆರ್​ಡಿಒಗೆ ಮತ್ತೊಂದು ಗರಿ.. ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ ‘ಅಭ್ಯಾಸ್​’ ಪರೀಕ್ಷಾರ್ಥ ಹಾರಾಟ ಯಶಸ್ವಿ!

    ಭುವನೇಶ್ವರ: ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬುವ ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ ‘ಅಭ್ಯಾಸ್’ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಹೇಳಿದೆ.

    ಇದನ್ನೂ ಓದಿ: ‘ಕುಸಿದ ಮೇಲ್ಛಾವಣಿ ಮೋದಿ ಆಡಳಿತದಲ್ಲಿ ನಿರ್ಮಿಸಿದ್ದಲ್ಲ’: ರಾಂ ಮೋಹನ್​ ನಾಯ್ಡು

    ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ‘ಅಭ್ಯಾಸ್’ನ ಒಟ್ಟು 10 ಅಭಿವೃದ್ಧಿ ಪ್ರಯೋಗಗಳನ್ನು ನಡೆಸಲಾಯಿತು. ವಿಮಾನದಲ್ಲಿ ಕಣ್ಗಾವಲು ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸೆನ್ಸರ್‌ಗಳನ್ನು ಪರೀಕ್ಷಿಸಲಾಯಿತು.

    ಡಿಆರ್ ಡಿಒ ನೀಡಿರುವ ಮಾಹಿತಿಯಂತೆ ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ. ಅದರಲ್ಲೂ, ಕೇವಲ 30 ನಿಮಿಷದಲ್ಲಿ ಸತತ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದ್ದು ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್‌ ಕ್ಲಿಯರೆನ್ಸ್‌ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು ಎನ್ನಲಾಗಿದೆ.

    ಆಟೋ ಪೈಲಟ್‌ ಮೂಲಕ ಹಾರಾಡುವ, ಲ್ಯಾಪ್‌ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರಾಡಾರ್‌ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಇವು ಹೊಂದಿವೆ ಎನ್ನಲಾಗಿದೆ.

    ಬೂಸ್ಟರ್ ಅನ್ನು ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿ ಮತ್ತು ನ್ಯಾವಿಗೇಷನ್ ಸಿಸ್ಟಮ್ ಅನ್ನು ಸಂಶೋಧನಾ ಕೇಂದ್ರ ಇಮಾರತ್ ವಿನ್ಯಾಸಗೊಳಿಸಿದೆ. ಮಾನ್ಯತೆ ಪಡೆದ ಏಜೆನ್ಸಿಗಳೊಂದಿಗೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಅಭ್ಯಸ್’ ಪ್ರಯೋಗಗಳ ಯಶಸ್ಸಿಗೆ ಡಿಆರ್​ಡಿಒ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.

    ಓವೈಸಿ ಮನೆ ಮೇಲೆ ದಾಳಿ.. ಇದಕ್ಕೆಲ್ಲ ಹೆದರೋಲ್ಲ ಎಂದ ಎಐಎಂಐಎಂ ಸಂಸದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts