More

    ಅಂದು ಈ ವ್ಯಕ್ತಿ ಬಗ್ಗೆ ರೋಹಿತ್​, ದ್ರಾವಿಡ್​​ ಆಡಿದ ಮಾತು ಇಂದು ನಿಜವಾಯ್ತು! ಟೀಕಾಕಾರಿಗೆ ಭಾರೀ ಮುಖಭಂಗ

    ನವದೆಹಲಿ: ನಿನ್ನೆ (ಜೂ.29) ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿ, ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಗೆಲುವಿನ ಸಂಭ್ರಮದಲ್ಲಿದ್ದ ತಂಡವನ್ನು ನೋಡಿ ಭಾವುಕರಾದ ರೋಹಿತ್, ತಮ್ಮ ಸಹ ಆಟಗಾರರನ್ನು ತಬ್ಬಿ, ಪರಸ್ಪರ ಖುಷಿ ಹಂಚಿಕೊಂಡರು.

    ಇದನ್ನೂ ಓದಿ: ಜಪ್ತಿಯಾದ ಟ್ರ್ಯಾಕ್ಟರ್‌ಗಳಿಗೂ ಹೊಸ ನೋಂದಣಿ!

    ಇನ್ನು ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ವಿರಾಟ್​ ಕೊಹ್ಲಿ ಅವರ ಹೃದಯಸ್ಪರ್ಶಿ ಮಾತುಗಳನ್ನು ಕಂಡು ಅಭಿಮಾನಿಗಳು ಕಣ್ಣೀರಿಟ್ಟರು. ಕೊಹ್ಲಿ ಬೆನ್ನಲ್ಲೇ ರೋಹಿತ್ ಕೂಡ ನಿವೃತ್ತಿ ಘೋಷಿಸಿದರು. ಈ ಹಿಂದೆಯೇ ಭಾರತದ ಹೆಡ್ ಕೋಚ್ ಆಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದ ರಾಹುಲ್ ದ್ರಾವಿಡ್​, ಈ ಟೂರ್ನಿ ಮುಗಿಯುತ್ತಿದ್ದಂತೆ ತಮ್ಮ ಕೋಚ್ ಹುದ್ದೆಯಿಂದ ಹೊರನಡೆಯಲಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿ ತಿಳಿದಿತ್ತು. ಅದರಂತೆಯೇ ಪಂದ್ಯ ಮುಗಿದ ಬಳಿಕ ದ್ರಾವಿಡ್​ ವಿದಾಯ ಹೇಳಿದರು.

    ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಟ್ರೋಫಿ ಗೆದ್ದ ಭಾರತ, ಈ ಗೆಲುವನ್ನು ರಾಹುಲ್ ದ್ರಾವಿಡ್​ ಅವರಿಗೆ ಅರ್ಪಿಸಿತು. ಇನ್ನು ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸತತ ಕಳಪೆ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಫೈನಲ್​ ಮ್ಯಾಚ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿ, ತಂಡಕ್ಕೆ ಅದ್ಭುತ ಕೊಡುಗೆ​ ನೀಡಿದರು. ಈ ಹಿಂದೆ ವಿರಾಟ್​ ಕಳಪೆ ಫಾರ್ಮ್​ಗೆ ವ್ಯಾಪಕವಾಗಿ ಕಿಡಿಕಾರಿದ್ದ ನೆಟ್ಟಿಗರು, ಎಲ್ಲಿಹೋಯಿತು ‘ರನ್​ ಮಷಿನ್’​
    ಅಬ್ಬರ? ಆರಂಭಿಕ ಬ್ಯಾಟ್ಸ್​ಮನ್ ಆಗಿ ವಿರಾಟ್​ರನ್ನು ಕಳಿಸಬೇಡಿ ಎಂದೆಲ್ಲಾ ಟೀಕಿಸಿದ್ದರು.

    ಇದನ್ನೂ ಓದಿ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ವಿದ್ಯಾರ್ಥಿಗಳು: ದಕ್ಷಿಣ ಭಾರತ ವಲಯ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆ

    ಈ ಟೀಕೆಗಳನ್ನು ಗಮನಿಸಿದ್ದ ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್​, ಕೊಹ್ಲಿ ಪರ ನಿಂತು ಟೀಕಾಕಾರಿಗೆ ಉತ್ತರಿಸಿದ್ದರು. ಯಾವ ವಿಷಯಕ್ಕೆ ಇಷ್ಟೊಂದು ಟೀಕೆ ವ್ಯಕ್ತವಾಗುತ್ತಿದೆಯೋ, ಅದು ಫೈನಲ್ ಪಂದ್ಯದಲ್ಲಿ ಬದಲಾಗಲಿದೆ. ವಿರಾಟ್​ರಿಂದ ನೀವು ಬೇರೇನೋ ನೋಡುತ್ತೀರಿ ಎಂದು ಶರ್ಮ ಹೇಳಿದ್ದರು. ಅವರ ಬೆನ್ನಲ್ಲೇ ಮಾತನಾಡಿದ ದ್ರಾವಿಡ್​, ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ, ಫೈನಲ್​ನಲ್ಲಿ ದೊಡ್ಡದೇನೋ ಒಂದು ನಡೆಯಲಿದೆ. ಅದನ್ನು ನೀವೆಲ್ಲಾ ನೋಡುತ್ತೀರಿ. ವಿರಾಟ್​ ಅದಕ್ಕೆ ಸಾಕ್ಷಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅಂದು ರಾಹುಲ್, ರೋಹಿತ್​ ನುಡಿದ ಭವಿಷ್ಯ ಇಂದು ನಿಜವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts