More

    ಜೂ.19ರಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮೊದಲ ಘಟಿಕೋತ್ಸವ: ವಿಶೇಷತೆ ಏನು?

    ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಮೊದಲನೇ ವಾರ್ಷಿಕ ಘಟಿಕೋತ್ಸವವು ಇದೇ 19ರಂದು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

    ಅಂದು ಬೆಳಗ್ಗೆ 11.30ಕ್ಕೆ ಸಮಾರಂಭ ನಡೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ಸಿ. ರಂಗರಾಜನ್ ಘಟಿಕೋತ್ಸವದ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರಲಿದ್ದಾರೆ.

    ಈ ಕುರಿತು ಶನಿವಾರ ಬೇಸ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ. ಎಸ್.ಆರ್. ಭಾನುಮೂರ್ತಿ, 4 ಚಿನ್ನದ ಪದಕ, 8 ರ‌್ಯಾಂಕ್ ವಿದ್ಯಾರ್ಥಿಗಳು ಸೇರಿ ಒಟ್ಟು 180 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 98 ವಿದ್ಯಾರ್ಥಿನಿಯರು ಹಾಗೂ 82 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಕುಲಸಚಿವೆ ವಿದ್ಯಾಶ್ರೀ ಚಂದರಗಿ, ಪರೀಕ್ಷೆಗಳ ನಿಯಂತ್ರಕ ಡಾ. ನಾಗೇಶ್ವರ್ ಬಂಸೋಡೆ ಮತ್ತು ಹಣಕಾಸು ಅಧಿಕಾರಿ ಪ್ರಶಾಂತ್‌ಕುಮಾರ್ ಎಂ.ವಿ. ಉಪಸ್ಥಿತರಿದ್ದರು.

    ಚಿನ್ನ, ರ‌್ಯಾಂಕ್ ಪದವೀಧರರು:
    ಚಿನ್ನದ ಪದವೀಧರರಿಗೆ 40 ಬೆಳ್ಳಿಗೆ 1.2 ಗ್ರಾಂ. ಚಿನ್ನದ ಲೇಪನವುಳ್ಳ ಪದಕವನ್ನು ನೀಡಲಾಗುತ್ತದೆ.
    ಬಿಎಸ್ಸಿ ಹಾನರ್ಸ್ ಅರ್ಥಶಾಸ- ನಿಹಾರಿಕಾ ಚೌಧರಿ, ಧನುಷಾ ಪ್ರಭು, ಮಂಜುಶ್ರೀ ಜಿ. ಹೊಸಮನಿ.
    ಇಂಟಿಗ್ರೇಟೆಡ್ ಎಂಎಸ್ಸಿ- ಮೀರಾ ಮೋಹನ್, ನಮಿತಾ ವಿ., ಅಕ್ಷಿತಾ ಪಿ. ಕರುಣ.
    ಎಂ.ಎಸ್ಸಿ- (2020-22) ಧನುಷಾ ಪ್ರಭು, ಅನಘಾ ವಿನೋದ, ಶಾಂತನು ಶರ್ಮಾ.
    ಎಂ.ಎಸ್ಸಿ- (2021-23)- ಪ್ರಖರ್ ರಾಣಾ, ಸ್ನೇಹಾ ೋಷಲ್, ಆರತಿ ಬನ್ಸಾಲ್.

    ಅಲ್ಪಾವಧಿ ಕೋರ್ಸ್, ಪಿಎಚ್.ಡಿ ಆರಂಭ
    ಸದ್ಯದಲ್ಲಿಯೇ ಸಂಸ್ಥೆಯಲ್ಲಿ ಅರ್ಥಶಾಸ ಪತ್ರಿಕೋದ್ಯಮ ಸೇರಿ ಹಲವು ಅಲ್ಪಾವಧಿ ಕೊರ್ಸ್‌ಗಳು, ಒಂದು ವರ್ಷದ ಡಿಪ್ಲೊಮೊ ಕೋರ್ಸ್ ಹಾಗೂ ಪಿಎಚ್.ಡಿ.ಕೋರ್ಸ್‌ಗಳನ್ನು ಆರಂಭ ಮಾಡಲಾಗುವುದು. ಅರ್ಥಶಾಸ ಪತ್ರಿಕೋದ್ಯಮಕ್ಕೆ ಸಾಕಷ್ಟು ಬೇಡಿಕೆ ಇದೆ ಎಂದು ಕುಲಪತಿ ಡಾ. ಭಾನುಮೂರ್ತಿ ಹೇಳಿದರು.

    ಶೇ.95 ಮಂದಿಗೆ ಪ್ಲೇಸ್‌ಮೆಂಟ್
    2017ರಲ್ಲಿ ಬೇಸ್ ಆರಂಬವಾಗಿದ್ದು, 2020ರಲ್ಲಿ ಮೊದಲ ಬ್ಯಾಚ್ ನಂತರ 2022 ಮತ್ತು 2023ರಲ್ಲಿ ಇಂಟಿಗ್ರೇಟೆಡ್ ಎಂ.ಎಸ್ಸಿ ಬ್ಯಾಚ್ ಸಂಸ್ಥೆಯಿಂದ ಹೊರ ಬಂದಿದೆ. ಇದರಲ್ಲಿ ಶೇ.95 ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ದೊರೆತಿದೆ. ಅಮೆರಿಕ, ಇಂಗ್ಲೆಂಡ್, ಪ್ಯಾರಿಸ್ ಸೇರಿ ಹಲವು ದೇಶಗಳಲ್ಲಿ ಉದ್ಯೋಗ ದೊರೆತಿದೆ ಎಂದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts