More

    ಮೂವರು ಪೊಲೀಸರಿಗೆ ಕಚ್ಚಿದ ಸಾಕು ನಾಯಿ! ಹಿಡಿಯುವುದರೊಳಗೆ ಪ್ರಾಣಬಿಟ್ಟ ಶ್ವಾನ

    ಚಾಮರಾಜನಗರ: ಗುಂಡ್ಲುಪೇಟೆ ಠಾಣೆಯ ಇನ್ಸ್​ಪೆಕ್ಟರ್, ಶಿಕ್ಷಕ ಹಾಗೂ ಮತ್ತೊಬ್ಬರಿಗೆ ತಾವೇ ಸಾಕಿದ್ದ ಬೀದಿನಾಯಿ ಕಡಿದು ಗಾಯಗೊಳಿಸಿದ್ದು, ಠಾಣೆಯ ಸಿಬ್ಬಂದಿಯೇ ಆಹಾರ ನೀಡುತ್ತ ಸಾಕಿದ್ದ ಬೀದಿ ನಾಯಿ ಇದಾಗಿತ್ತು ಎಂದು ವರದಿಯಾಗಿದೆ.

    ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕರೊಬ್ಬರು ದೂರು ಕೊಡಲು ಠಾಣೆಗೆ ಬಂದಿದ್ದು, ಪೊಲೀಸ್ ಪೇದೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಕಚ್ಚಿದೆ. ತಕ್ಷಣವೇ ದೂರು ನೀಡುವುದನ್ನು ಕೈಬಿಟ್ಟು ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ಬಳಿಕ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ಬರನ್ನು ನಾಯಿ ಕಚ್ಚಿದೆ.

    ಶ್ವಾನವನ್ನು ತಡೆಯಲು ಮುಂದಾಗುತ್ತಿದ್ದಂತೆ ಠಾಣೆಗೆ ಬಂದ ಪೊಲೀಸ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿ ಮೇಲೆಯೂ ದಾಳಿ ಮಾಡಿದ ಬೀದಿ ನಾಯಿ, ಕಚ್ಚಿ ಗಾಯಗೊಳಿಸಿದೆ. ಇವರು ಕೂಡ ತಕ್ಷಣವೇ ಚಿಕಿತ್ಸೆ ಪಡೆದಿದ್ದಾರೆ. ಠಾಣೆ ಬಳಿಯೇ ವಾಸವಿದ್ದ ಶ್ವಾನ, ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನೆಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೇ ನಾಯಿ ಠಾಣೆಯ ಸುತ್ತಮುತ್ತವೇ ಇರುತ್ತಿತ್ತು. ಆದರೆ ಸೋಮವಾರ (ಜು.01) ಇದ್ದಕ್ಕಿದ್ದಂತೆ ಅಧಿಕಾರಿಗಳು ಸೇರಿ ಮೂವರನ್ನು ಕಡಿದು ಗಾಯಗೊಳಿಸಿತು. ನಂತರದಲ್ಲಿ ನಾಯಿಯನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾಗುವಷ್ಟರೊಳಗೆ ಶ್ವಾನ ತಾನಾಗಿಯೇ ಮೃತಪಟ್ಟಿದೆ.

    ಆ ಒಂದೊಂದು ಮಾತುಗಳು… ಅಂದು ತನ್ನೊಂದಿಗೆ ರೋಹಿತ್ ಹಂಚಿಕೊಂಡ ವಿಷಯ ಬಿಚ್ಚಿಟ್ಟ ಸೂರ್ಯ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts