More

    ಒಂದು ಕಾಲದಲ್ಲಿ ಕನ್ನಡಿಗರ ಮನಗೆದ್ದ ನಟಿ ರೂಪಿಣಿ ಈಗ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ವೈರಲ್​ ಫೋಟೋ…

    ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

    ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ದಿವಂಗತ ನಟ ಡಾ. ವಿಷ್ಣುವರ್ಧನ್ ಜತೆ ಐದಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದ ನಟಿ ರೂಪಿಣಿ ಕೂಡ ಒಬ್ಬರು.

    ರೂಪಿಣಿ ಅವರು 1980 ಮತ್ತು 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ತಮ್ಮ ಸೌಂದರ್ಯದಿಂದಲೇ ಮನೆ ಮಾತಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 10 ಸಿನಿಮಾಗಳಲ್ಲಿ ರೂಪಿಣಿ ನಟನೆ ಮಾಡಿದ್ದಾರೆ. ಅದರಲ್ಲೂ ಡಾ. ವಿಷ್ಣುವರ್ಧನ್​ ಜತೆ ಹೆಚ್ಚು ತೆರೆಹಂಚಿಕೊಂಡಿದ್ದಾರೆ. 10 ಸಿನಿಮಾಗಳಲ್ಲಿ 6 ಸಿನಿಮಾಗಳಲ್ಲಿ ವಿಷ್ಣುವರ್ಧನ್​ ಜತೆ ನಟಿಸಿದರು. ಅವುಗಳೆಂದರೆ, ಒಲವಿನ ಆಸರೆ, ದೇವ, ಮತ್ತೆ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ, ರಾಜಧಿರಾಜ ಮತ್ತು ರವಿವರ್ಮ.

    ಉಳಿದಂತೆ ಭೈರವಿ, ಅಂಬರೀಷ್​ ನಟನೆಯ ಸಪ್ತಪದಿ ಹಾಗೂ ಮಲ್ಲಿಗೆ ಹೂವೆ ಮತ್ತು ರವಿಚಂದ್ರನ್​ ನಟನೆಯ ಗೋಪಿಕೃಷ್ಣ ಸಿನಿಮಾದಲ್ಲಿಯೂ ರೂಪಿಣಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಕೇವಲ 10 ಸಿನಿಮಾಗಳಾದರೂ ಸ್ಟಾರ್​ ನಟರ ಚಿತ್ರದಲ್ಲಿ ನಟಿಸಿದ್ದರಿಂದ ರೂಪಿಣಿಗೆ ಒಳ್ಳೆಯ ಖ್ಯಾತಿ ಸಿಕ್ಕಿತು. ಇಂದಿಗೂ ರೂಪಿಣಿ ಅವರ ನಟನೆ ಮತ್ತು ಸೌಂದರ್ಯ ಜನರ ಮನಸ್ಸಿನಲ್ಲಿ ಉಳಿದಿದೆ.

    ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗಲೇ ರೂಪಿಣಿ ಅವರು ಮೋಹನ್​ ಕುಮಾರ್​ ಎಂಬುವರನ್ನು 1995ರಲ್ಲಿ ಮದುವೆಯಾದರು. ದಂಪತಿಗೆ ಅನುಷಾ ರಾಯನ ಎಂಬ ಮಗಳಿದ್ದಾಳೆ. ಆಶ್ಚರ್ಯಕರ ನಡೆಯಲ್ಲಿ ರೂಪಿಣಿ ಅವರು 2020 ರಲ್ಲಿ 26 ವರ್ಷಗಳ ವಿರಾಮದ ನಂತರ ಚಿತಿ-2 ಎಂಬ ತಮಿಳು ಕಾರ್ಯಕ್ರಮದೊಂದಿಗೆ ತೆರೆಗೆ ಮರಳಿದರು. ಸುಂದರ್ ಕೆ ವಿಜಯನ್ ನಿರ್ದೇಶನದ ಈ ಶೋನಲ್ಲಿ ಪ್ರೀತಿ ಶರ್ಮಾ ಮತ್ತು ನಂದನ್ ಲೋಗನಾಥನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಸದ್ಯ ರೂಪಿಣಿ ಅವರು ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಫೋಟೋ ನೋಡಿದವರು ಇವರೇನಾ ರೂಪಿಣಿ ಎನ್ನುತ್ತಿದ್ದಾರೆ. ಈಗಲೂ ಕೂಡ ರೂಪಿಣಿ ಅವರ ಮುಖದಲ್ಲಿ ಅದೇ ಚಾರ್ಮ್​ ಇದೆ. ರೂಪಿಣಿ ಅವರು ಒಂದು ಕಾಲದಲ್ಲಿ ಅನೇಕ ಕನ್ನಡ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ಅವರನ್ನು ಮತ್ತೆ ನೋಡಿ ಅನೇಕರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸುಂದರ ದಾಂಪತ್ಯ ಜೀವನ ನಡೆಸುತ್ತಿರುವ ರೂಪಿಣಿ ಅವರಿಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದಾರೆ. (ಏಜೆನ್ಸೀಸ್​)

    Rupini 1

    ಅಂದು ರೋಹಿತ್ ಮಾಡಿದ ಪ್ಲಾನ್​ ಯಾರಿಗೂ ಅರ್ಥವಾಗಲಿಲ್ಲ ಇಂದು ಅದೇ ಪ್ಲಾನ್​ ಫೈನಲ್​​ ಎಂಟ್ರಿಗೆ ಕಾರಣವಾಯ್ತು!

    ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ವೈರಲ್​

    ರೇಣುಕಾಸ್ವಾಮಿ ವಿಕೃತ ಮನಸ್ಸಿನ ವ್ಯಕ್ತಿ ಆದ್ರೆ ನಟ ದರ್ಶನ್​​… ದಚ್ಚು ಪರ ಧ್ವನಿ ಎತ್ತಿದವರಿಗೆ ಖಡಕ್​ ತಿರುಗೇಟು

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts