More

    ಹೊಸ ಕಾನೂನುಗಳ ಅರಿವು ಅವಶ್ಯ, ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ್​ ಹೇಳಿಕೆ

    ಕೊಪ್ಪಳ : ಜನರಿಗೆ ರಕ್ಷಣೆ ಒದಗಿಸಲು ಹಲವು ಮಾರ್ಪಾಡುಗಳೊಂದಿಗೆ ಹೊಸ ಅಪರಾಧಿಕ ಕಾನೂನುಗಳನ್ನು ಜಾರಿಗೆ ತರುತ್ತಿದ್ದು, ಅವುಗಳ ಬಗ್ಗೆ ನಾವೆಲ್ಲ ತಿಳಿದುಕೊಳ್ಳುವ ಅವಶ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ್​ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ರಾಜ್ಯ ವಕೀಲರ ಪರಿಷತ್ತು, ಜಿಲ್ಲಾ ವಕೀಲರ ಸಂದಿಂದ ಹಮ್ಮಿಕೊಂಡಿರುವ 5 ದಿನಗಳ ಕಾನೂನು ಕಾರ್ಯಾಗಾರ ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-&2023, ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023 ದೇಶಾದ್ಯಂತ ಜುಲೈ 1ರಿಂದ ಜಾರಿಗೆಯಾಗಲಿವೆ. ಹೊಸ ಕಾನೂನುಗಳ ಬಗ್ಗೆ ತಿಳಿಯಲು ವಕೀಲರು, ಕಾನೂನು ವಿದ್ಯಾಥಿಗಳು ಟ್ಯಾಕ್ಸ್​ಮನ್​ ಆ್ಯಪ್​ ಬಳಸಿ. ಅದರಲ್ಲಿ ಹೊಸ ಕಾನೂನುಗಳ ಸರಳ ಹಾಗೂ ಸಂಕ್ಷಿಪ್ತ ಮಾಹಿತಿ ಸಿಗಲಿದೆ. ಕಾರ್ಯಾಗಾರದಲ್ಲೂ ಮಾಹಿತಿ ದೊರೆಯಲಿದ್ದು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

    ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ನೂತನ ಆವಿಷ್ಕಾರಗಳಿಗೆ ಹೊಸ ಕಾನೂನುಗಳು ಸಮರ್ಪಕವಾಗಿವೆ. ಈ ಉದ್ದೇಶದಿಂದ ಹೊಸ ಅಪರಾಧಿಕ ಕಾನೂನುಗಳು ಜಾರಿಯಾಗುತ್ತಿವೆ. ಜುಲೈ 1ರಿಂದ ಅಸ್ತಿತ್ವಕ್ಕೆ ಬರಲಿವೆ. ಹೊಸ ಕಾನೂನುಗಳ ಕುರಿತು ಜಾಗೃತಿ ಅವಶ್ಯ. ಜಿಲ್ಲೆಯ ವಕೀಲರು, ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಾಗಲದೆಂದು ಜು.3ವರೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಿತ್ಯವೂ ಗೋಷ್ಠಿಗಳ ಮೂಲಕ ಹೊಸ ಕಾನೂನುಗಳ ಬಗ್ಗೆ ನ್ಯಾಯಾಧೀಶರು, ಅನುಭವಿ ವಕೀಲರು, ಕಾನೂನು ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

    ರಾಜ್ಯ ವಕೀಲರ ಪರಿಷತ್​ ಸದಸ್ಯರಾದ ಎಸ್​.ಎಸ್​.ಮಿಠ್ಠಲಕೋಡ, ಎಸ್​. ಆಸ್​ೀ ಅಲಿ, ರಾಜ್ಯ ಮಹಿಳಾ ವಕೀಲರ ಒಕ್ಕೂಟದ ಅಧ್ಯೆ ಸಂಧ್ಯಾ ಮಾದಿನೂರು, ನ್ಯಾಯಾಧೀಶರಾದ ಸರಸ್ವತಿದೇವಿ, ಕುಮಾರ ಡಿ.ಕೆ., ಮಹಾಂತೇಶ ಸಂಗಪ್ಪ ದರಗದ, ಭಾಗ್ಯಲಕ್ಷಿ$್ಮ, ಆದಿತ್ಯಕುಮಾರ್​ ಎಚ್​.ಆರ್​., ಜಿಲ್ಲಾ ಸರ್ಕಾರಿ ವಕೀಲ ಆಸೀಫ್​ ಸರ್ದಾರ್​, ಅಪರ ಜಿಲ್ಲಾ ಸರ್ಕಾರಿ ವಕೀಲ ಬೆಳ್ಳೆಪ್ಪ ಸಿ.ಗಬ್ಬೂರ, ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ,

    ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಎಸ್​.ಬೇಲೇರಿ, ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ ಸಜ್ಜನ್​, ಪ್ರ.ಕಾ. ಪ್ರಕಾಶ ಎಲ್​. ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ. ಕವಲೂರ, ಖಜಾಂಚಿ ರಾಜಾಸಾಬ ಬೆಳಗುರ್ಕಿ ಇತರರಿದ್ದದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts