More

    ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ:ಸಿ.ವಿ.ಚಂದ್ರಶೇಖರ

    ಕೊಪ್ಪಳ: ಒಂದೆಡೆ ಬೆಲೆ ಏರಿಕೆ ಮಾಡಿ ಜನರಿಗೆ ಮೋಸ ಮಾಡಲಾಗಿದೆ. ಮತ್ತೊಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಡವರಿಗೆ ಸೇರಬೇಕಾದ ಹಣದಲ್ಲಿ ಅವ್ಯವಹಾರ ನಡೆದಿದ್ದನ್ನು ಖಂಡಿಸಿ ಜೆಡಿಎಸ್​ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ 14 ತಿಂಗಳಲ್ಲಿ ಜನರ ಜೀವನ ದುಸ್ಥರ ಮಾಡಿದೆ. ಬೆಲೆ ಎರಿಕೆ ಮೂಲಕ ಬಡವರ ಜೇಬಿಗೆ ಕೈ ಹಾಕಿ ಲೂಟಿ ಹೊಡೆಯುತ್ತಿದೆ. ಈ ಮೂಲಕ ಸರ್ಕಾರ ನೈತಿಕತೆ ಕಳೆದುಕೊಂಡಿದೆ. ವಿದ್ಯುತ್​ ಬಿಲ್​, ಹಾಲಿನ ದರ, ತೈಲ ಬೆಲೆ ಗಗನಕ್ಕೇರಿಸಿ ಜನರ ಕೈಗೆ ಚಂಬು ನೀಡಿದ್ದಾರೆ. ದಲಿತರ ಕಲ್ಯಾಣ ಹೆಸರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಇದ್ದರೂ ಸಿಎಂ, ಡಿಸಿಎಂ ಮೌನವಹಿಸಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ. ಮೆಲ್ನೋಟಕ್ಕೆ ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕಿದರೆ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ. ಎಲ್ಲದರ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ವಾಗ್ದಾಳಿ ನಡೆಸಿದರು.

    ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ರಾಜ್ಯದ ಅಭಿವೃದ್ಧಿ ಮಾಡುವ ಬದಲು ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಸಿಎಂಗೆ ಡಜನ್​ನಷ್ಟು ಸಲಹೆಗಾರರು. ಅವರಿಗೆ ಜನರ ತೆರಿಗೆ ಹಣದಲ್ಲಿ ಕ್ಯಾಬಿನೆಟ್​ ದರ್ಜೆ ಸೌಲಭ್ಯಗಳು. ಇದು ಉತ್ತಮ ಆಡಳಿತಕ್ಕೆ ಮಾದರಿಯೇ ಎಂದು ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಬೇಕು ಎಂದು ಪ್ರಶ್ನಿಸಿದರು.

    ಯುವ ಟಕ ಕಾರ್ಯಾಧ್ಯಕ್ಷ ರಾಜು ನಾಯಕ ಮಾತನಾಡಿ, ಕ್ಯಾಂಪಸ್​ಗಳಲ್ಲಿ ಹಾಡು ಹಗಲೇ ಕೊಲೆಗಳಾದವು. ಹೆಣ್ಣು ಮಕ್ಕಳ ಮಾನ ಹರಾಜಾಯಿತು. ವೈಯಕ್ತಿಕ ದ್ವೇಷ ಾಧನೆಗೆ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳಲಾಯಿತು. ಇದು ಸ್ವಯಂ ಘೋಷಿತ ಸಂವಿಧಾನ ರಕ್ಷಕರಿಗೆ ಶೋಭೆಯೇ ಎಂದು ಕಿಡಿಕಾರಿದರು.

    ಜೆಡಿಎಸ್​ ಜಿಲ್ಲಾ ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಪ್ರಮುಖರಾದ ಈಶಪ್ಪ ಮಾದಿನೂರು, ಶರಣಪ್ಪ ಕುಂಬಾರ್​, ಯಮನಪ್ಪ ಕಟಗಿ, ಬಸವರಾಜ್​ ಗುರುಗುಳಿ, ಕೆಂಚಪ್ಪ ಹಳ್ಳಿ, ಕೃಷ್ಣ ನಾಯಕ್​, ವಸಂತ ಕರಿಗಾರ್​, ಭೀಮರೆಡ್ಡಿ ಗದ್ದಿಕೇರಿ, ಜಗನ್ನಾಥ್​ ರೆಡ್ಡಿ, ಚಿಕ್ಕ ವೀರಣ್ಣ, ಮೂರ್ತೆಪ್ಪ ಹಿಟ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts