More

    ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ

    ಕೊಪ್ಪಳ: ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ ನಂತರ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತನ್ನಿ ಎಂದು ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ತಹಸೀಲ್ದಾರ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಯೋಜನೆ ತಾಲೂಕು ಮಟ್ಟದ ಸಭೆಯ ಅಧ್ಕಕ್ಷತೆವಹಿಸಿ ಮಾತನಾಡಿದರು.

    ಸಮಿತಿ ಸದಸ್ಯರು ತಿಂಗಳಿಗೆ ಒಮ್ಮೆ ದಾಳಿ ನಡೆಸಬೇಕು. ಹೋಬಳಿವಾರು ತಂಡ ರಚಿಸಿ ಕೆಲಸ ಮಾಡಿ. ಈ ಹಿಂದೆ ಪತ್ತೆಯಾದ ಬಾಲ ಕಾರ್ಮಿಕರ ಮನೆಗೆ ಭೇಟಿ ನೀಡಿ. ಸದ್ಯ ಮಗುವಿನ ಪರಿಸ್ಥಿತಿ ಏನಿದೆ ಎಂದು ತಿಳಿದುಕೊಳ್ಳಿ. ಅನುಮಾನ ಬಂದ ಕಡೆಗಳಲ್ಲಿ ಮಕ್ಕಳ ದಾಖಲೆ ಪರಿಶೀಲಿಸಿ. ಬಾಲ ಕಾರ್ಮಿಕ, ಕಿಶೋರ ಕಾರ್ಮಿಕರಿದ್ದಲ್ಲಿ ಮುಖ್ಯವಾಹಿನಿಗೆ ತನ್ನಿ. ಶಾಲೆಗೆ ದಾಖಲಿಸಿ. ಪುನರ್ವಸತಿ ಅವಶ್ಯ ಇರುವ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ. ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿ ಜನರಿಗೆ ಜಾಗೃತಿ ಮೂಡಿಸಿ ಎಂದರು.

    ಬಾಲಕಾರ್ಮಿಕ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಮಾತನಾಡಿ, 14 ವರ್ಷದೊಳಗಿನ ಮಕ್ಕಳು ಯಾವುದೇ ವೃತ್ತಿಯಲ್ಲಿ ಕೆಲಸ ನಿರ್ವಹಿಸುವುದು ಮತ್ತು 14 ರಿಂದ 18 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಕೆಲಸದಲ್ಲಿ ತೊಡಗುವಂತಿಲ್ಲ. ಎಲ ಅಧಿಕಾರಿಗಳು ನಿರಂತರವಾಗಿ ಬಾಲ ಕಾರ್ಮಿಕ ಪದ್ಧತಿ ಆಚರಣೆ ಆಗದಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ದಾಳಿ ನಡೆಸಿ ವರದಿ ಸಲ್ಲಿಸಬೇಕು ಎಂದರು.

    ತಾಪಂ ಇಒ ದುಂಡಪಪ್​ ತುರಾದಿ, ನಗರಸಭೆ ಪೌರಾಯುಕ್ತ ಗಣಮಪತಿ ಪಾಟೀಲ್​, ಕಾರ್ಮಿಕ ನಿರೀಕ್ಷಕ ಶಿವಶಂಕರ್​ ತಳವಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಬಿಇಒ ಶಂಕ್ರಯ್ಯ, ಟಿಎಚ್​ಒ ಡಾ.ರಾಮಾಂಜನೇಯ ಇತರ ಅಧಿಕಾರಿಗಳಿದ್ದರು.

    ವಿವಿಧೆಡೆ ದಾಳಿ
    ಸಭೆ ನಂತರ ಅಧಿಕಾರಿಗಳ ತಂಡ ಕೊಪ್ಪಳ ನಗರದ ವಿವಿಧ ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ಮಾಡಿತು. ಕಿನ್ನಾಳ ರಸ್ತೆಯ ನ್ಯೂ ಇಂಡಿಯನ್​ ಅಲ್ಯೂಮಿನಿಯಂ ಲರ್ಕ್ಸ್​ ಸಂಸ್ಥೆಯಲ್ಲಿ 5 ಮಕ್ಕಳು ಹಾಗೂ ಕಲ್ಯಾಣ ನಗರದ ್ಲೆವುಡ್​ ಶಾಪ್​ನಲ್ಲಿ ಓರ್ವ ಮಗು ಸೇರಿ 6 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಲಾಯಿತು. ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts