More

    ಬೆಲೆ ಏರಿಕೆಯಿಂದ ಬದುಕು ದುಸ್ಥರ

    ಕೊಪ್ಪಳ: ರಾಜ್ಯ ಸರ್ಕಾರ ಪೆಟ್ರೋಲ್​, ಡಿಸೇಲ್​ ಬೆಲೆ ಏರಿಸಿದ ಬೆನ್ನಲ್ಲೇ ಹಾಲಿನ ದರ ಏರಿಕೆ ಮಾಡುವ ಮೂಲಕ ಬಡವರ ಬದುಕನ್ನು ದುಸ್ಥರಗೊಳಿಸಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಮುಂಭಾಗದಲ್ಲಿ ಹಸುಗಳನ್ನು ತಂದು ಹಾಲು ಕರೆದು ಪ್ರತಿಭಟನೆ ನಡೆಸಿದರು.

    ರಾಜ್ಯ ಸರ್ಕಾರ ಬಡವರ ಮೇಲೆ ದರ ಏರಿಕೆ ಸವಾರಿ ಮಾಡುತ್ತಿದೆ. ರೈತಪರ ಎಂದು ಹೇಳಿಕೊಂಡು ರೈತರಿಗೆ ಅಗತ್ಯ ಇರುವ ಸೇವೆ, ವಸ್ತುಗಳ ದರ ಹೆಚ್ಚಿಸುತ್ತಿದೆ. ಬಿತ್ತನೆ ಬೀಜ, ಹಾಲಿನ ದರ, ಮುದ್ರಾಂಕ ಶುಲ್ಕ, ಇಂಧನ ದರ ಹೆಚ್ಚಳ ಮಾಡಿದೆ. ರೈತ ಸಿರಿ, ಸಿಎಂ ರೈತ ವಿದ್ಯಾನಿಧಿ, ಪಿಎಂ ಕಿಸಾನ್​ಗೆ ನೀಡುವ ಹೆಚ್ಚುವರಿ 4 ಸಾವಿರ ರೂ. ಹಣ ನಿಲ್ಲಿಸಿದೆ. ಹಾಲಿನ ಪ್ರೋತ್ಸಾಹಧನ ಬಿಡುಗಡೆಗೊಳಿಸಿಲ್ಲ. ಕಳೆದ ವರ್ಷದ ಪ್ರೋತ್ಸಾಹಧನವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ. ಈವರೆಗೂ ಬಾಕಿ ಮೊತ್ತ ಬಿಡುಗಡೆ ಮಾಡಿಲ್ಲ. ರೈತರ ಆತ್ಮಹತ್ಯೆ ತಡೆಯುತ್ತಿಲ್ಲ. ಗ್ಯಾರಂಟಿ ನೀಡಿ ಹಿಂದಿನಿಂದ ಅನೇಕ ದರ ಹೆಚ್ಚಿಸುವ ಮೂಲಕ ಬಡವರ, ರೈತ ಬೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಸರ್ಕಾರ ಅಧಿಕಾರ, ಪರ್ಸಂಟೇಜ್​ ವ್ಯವಹಾರದಲ್ಲಿ ತೊಡಗಿದೆ. ಬಡವರ ಹಣ ಲೂಟಿ ಆಗುತ್ತಿದೆ. ಪಶು ಆಹಾರ ದರ ಏರಿಕೆಯಾಗಿದೆ. ತಕ್ಷಣ ಎಲ್ಲ ಬೆಲೆಗಳನ್ನು ಇಳಿಕೆ ಮಾಡಬೇಕು. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಕೃಷಿ ಸಂಬಂಧಿತ ವಸ್ತುಗಳು, ಸೇವೆಗಳ ಬೆಲೆ ಹೆಚ್ಚಳ ವಾಪಸ್​ ಪಡೆಯಬೇಕು. ಅಭಿವೃದ್ಧಿ ಕಾರ್ಯ ಮಾಡದೆ ವಿಲವಾಗಿದ್ದಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

    ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್​, ಗಣೇಶ ಹೊರತಟ್ನಾಳ, ಅಶೋಕ ಗುಳದಳ್ಳಿ, ಮಂಜುನಾಥ ವಗರನಾಳ, ಬಸವನಗೌ ಡ, ಸುನಿಲ್​ ಹೆಸರೂರು, ಮಹೇಶ ಅಂಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts