More

    ಅಕ್ರಮ ಎಸಗಿದವರ ಬಂಧನವಾಗಲಿ

    ಕೊಪ್ಪಳ: ರಾಷ್ಟ್ರೀಯ ಅರ್ಹತಾ ಪರೀೆ (ಎನ್​ಇಟಿ)ಯಲ್ಲಿ ಅಕ್ರಮ ನಡೆಸಿದವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಎಐಡಿವೈಒ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

    ಕಳೆದ ಜೂ.18ರಂದು ಯುಜಿಸಿಯಿಂದ ಎನ್​ಇಟಿ ಪರೀೆ ನಡೆಸಲಾಗಿದೆ. ಪರೀೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಪರೀೆ ರದ್ದುಪಡಿಸಲಾಗಿದೆ. ಸಿಬಿಐ ತನಿಖೆಗೆ ವಹಿಸಲಾಗಿದೆ. ದೇಶಾದ್ಯಂತ 9 ಲಕ್ಷ ಅಭ್ಯರ್ಥಿಗಳು ಪರೀೆ ಬರೆದಿದ್ದಾರೆ. ಅಕ್ರಮದಿಂದ ಅವರೆಲ್ಲ ಕಂಗಾಲಾಗಿದ್ದಾರೆ. ಪಿಎಚ್​ಡಿ ಪ್ರವೇಶ ಬಯಸುವವರಿಗೂ ನಿರಾಸೆಯಾಗಿದೆ. ಅಕ್ರಮದಿಂದ ಎಲ್ಲ ಪರೀೆಗಳನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಪ್ರತಿಭಟನಾಕರರು ಆರೋಪಿಸಿದರು.

    ಅತ್ತ ನೀಟ್​ ಪರೀೆಯಲ್ಲೂ ಅಕ್ರಮ ನಡೆದಿದೆ. ಇದೀಗ ಎನ್​ಇಟಿಯಲ್ಲೂ ಅಕ್ರಮ ನಡೆದಿದೆ. ಕಳೆದ 8 ವರ್ಷದಲ್ಲಿ 48 ಬಾರಿ ಪರೀಾ ಅಕ್ರಮಗಳು ನಡೆದಿವೆ. ದುಡ್ಡಿದ್ದವರಿಗೆ ಮಾತ್ರ ಉದ್ಯೋಗ ಎಂಬಂತಾಗಿದೆ. ಇದನ್ನು ತಡೆಯಬೇಕು. ಪರೀಾ ಅಕ್ರಮ ಎಸಗಿದವರನ್ನು ಬಂಧಿಸಬೇಕು. ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೂ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಎಐಡಿವೈಒ ಪದಾಧಿಕಾರಿಗಳಾದ ದೇವರಾಜ, ಶರಣು ಗಡ್ಡಿ, ಶರಣು ಪಾಟೀಲ್​, ಮಲ್ಲಪ್ಪ,ಹನುಮಂತರಾಯ, ಮಹೇಶ, ಇಮಾಮ್​ ಸಾಬ್​, ಮೌನೇಶ, ಪರೀಕ್ಷಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts