More

    ಮಕ್ಕಳ ಕಲಿಕೆಯಲ್ಲಿ ಪಾಲಕರ ಜವಾಬ್ದಾರಿ : ಸಮಾಲೋಚನಾ ಸಭೆಯಲ್ಲಿ ಶರಣ ಕುಮಾರ ಹೇಳಿಕೆ

    ಗಂಗೊಳ್ಳಿ: ವಿದ್ಯಾಸಂಸ್ಥೆ ಮಕ್ಕಳ ಕಲಿಕೆಗೆ ಪೂರಕ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಮಕ್ಕಳ ಕಲಿಕೆಯಲ್ಲಿ ಪಾಲಕರ ಜವಾಬ್ದಾರಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಶರಣಕುಮಾರ ಹೇಳಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುವಾರ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಲಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಐಸಿಎಸ್‌ಇ ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ರೂಪಾ ಜೆ., ಸ್ವಾತಿ ಶೆಟ್ಟಿ, ರೂಪಾಮಣಿ, ರೇಷ್ಮಾ ಎಂ. ಪಾಲಕರಿಗೆ ಮಾಹಿತಿ ನೀಡಿದರು. ಹಳೇ ವಿದ್ಯಾರ್ಥಿಗಳ ಪಾಲಕರಾದ ವಿದ್ವಾನ್ ಸತೀಶ ಭಟ್, ಸದಾನಂದ ನಾವಡ, ಜತೀಂದ್ರ, ಪ್ರದೀಪ್‌ಕುಮಾರ್ ಶೆಟ್ಟಿ, ಉಜ್ವಲಾ ಪ್ರದೀಪ್ ಶೆಟ್ಟಿ, ಪ್ರತಿಮಾ ಭಟ್, ಶ್ರೀಲತಾ, ಉದಯ್ ಕುಮಾರ್ ಹಟ್ಟಿಯಂಗಡಿ, ಹಳೇ ವಿದ್ಯಾರ್ಥಿಗಳ ನೆಲೆಯಲ್ಲಿ ಮಾನ್ಯ ಸಿ. ಪೂಜಾರಿ, ಸನ್ವಿ ಶೆಟ್ಟಿ, ಕೃಪಾ ಶೆಟ್ಟಿ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸುಜಾತಾ ಸದಾರಾಮ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಫರ್ನಾಜ್, ಭಾಗ್ಯಲಕ್ಷ್ಮೀ ಹಾಗೂ ದೀಪಾ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts