More

    ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಡಿಕೆ! 2025ಕ್ಕೆ ಕಪ್ ನಮ್ದೆ ಎಂದ ಆರ್​ಸಿಬಿ ಫ್ಯಾನ್ಸ್

    ನವದೆಹಲಿ: ಬಾರ್ಬಡೋಸ್​ನಲ್ಲಿ ಐಸಿಸಿ ಟಿ20 ವಿಶ್ವಕಪ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ ಭಾರತ, ಫೈನಲ್​ನಲ್ಲಿ 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ವಿಶ್ವಕಪ್​ ಟ್ರೋಫಿ ಎತ್ತಿಹಿಡಿಯಿತು. ಈ ಸಂಭ್ರಮದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೇಳಿಬಂದಿದ್ದು, ಐಪಿಎಲ್​ನ ಹೆಸರಾಂತ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಇದೀಗ ನೂತನ ಬ್ಯಾಟಿಂಗ್​ ಕೋಚ್​ ಹಾಗೂ ಮೆಂಟರ್ ಆಗಿ ಟೀಮ್ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್​ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ: ತಣ್ಣೀರು, ಬಿಸಿ ನೀರು..ಎರಡನ್ನೂ ಒಟ್ಟಿಗೆ ಏಕೆ ಕುಡಿಯಬಾರದು?

    ಮುಂಬರುವ 2025ರ ಐಪಿಎಲ್​ ಆವೃತ್ತಿಯ ಹಿನ್ನೆಲೆ ಇದೀಗ ಆರ್​ಸಿಬಿ ಮ್ಯಾನೇಜ್​ಮೆಂಟ್​ ದಿನೇಶ್ ಕಾರ್ತಿಕ್​​ ಅವರನ್ನು ತಮ್ಮ ತಂಡದ ಹೊಸ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್​ ಆಗಿ ಆಯ್ಕೆ ಮಾಡಿಕೊಂಡಿದೆ. ಈ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಭಾರೀ ಕುತೂಹಲ ವ್ಯಕ್ತಪಡಿಸಿರುವ ಆರ್​ಸಿಬಿ ಅಭಿಮಾನಿಗಳು, ಈ ಬಾರಿಯ ಸೀಸನ್​ನಲ್ಲಿ ಪ್ಲೇಆಫ್​ ಹಂತ ತಲುಪಿದ್ದೆವು. ಆಲ್ಲಿಂದ ಮುಂದೆ ಹೋಗಿ, ನಮ್ಮ ಕಪ್ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ರೆ, ಈಗ ನಮಗೆ ಆನೆಬಲ ಬಂದಿದೆ ಎಂದಿದ್ದಾರೆ.

    ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪರ ಅದ್ಭುತ ಆಲ್​ರೌಂಡ್​ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್​, ಅನೇಕ ಬಾರಿ ತಂಡ ಸೋಲಿನ ಅಂಚಿನಲ್ಲಿದ್ದಾಗ ಕ್ರೀಸ್​ಗೆ ಬಂದು ಗೆಲುವಿನ ಭರವಸೆ ಕೊಡುತ್ತಿದ್ದರು. ಆದರೆ, ಇದೇ ನನ್ನ ಕಡೆಯ ಲೀಗ್ ಎಂದು ನಿವೃತ್ತಿ ಘೋಷಿಸಿದ ಡಿಕೆ, ಇನ್ಮುಂದೆ ಆರ್​ಸಿಬಿ ಪರ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಭಾವುಕ ಮಾತುಗಳನ್ನು ಆಡಿದ್ದರು. ಈಗ 2025ರಲ್ಲಿ ಇದೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಗೆ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್​ ಆಗಿ ಮತ್ತೆ ಡಿಕೆ ಎಂಟ್ರಿ ಕೊಟ್ಟಿದ್ದಾರೆ.

    ‘ರಾಯಲ್’ ಆಗಿ ‘ಚಾಲೆಂಜರ್ಸ್’​ ತಂಡಕ್ಕೆ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್​ಗೆ ಇದೀಗ ಅಭಿಮಾನಿಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ಕುರಿತು ಆರ್​ಸಿಬಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ‘ವೆಲ್​ಕಮ್​ ಬ್ಯಾಕ್ ಡಿಕೆ’​ ಎಂದು ಖುಷಿ ಹಂಚಿಕೊಂಡಿದ್ದಾರೆ.

    ಆತನ ಮುಂದೆ ವಿಶ್ವಕಪ್ ಗೆದ್ದಿದ್ದಕ್ಕಿಂತ​ ದೊಡ್ಡ ಸಂತೋಷ ಮತ್ತೊಂದಿಲ್ಲ: ಪತ್ನಿ ಎದುರೇ ಬುಮ್ರಾ ಭಾವುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts