More

    ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಆಯ್ಕೆಗೆ ಜೂ. 30ರಂದು ಚುನಾವಣೆ ನಡೆಯಲಿದೆ. ಚುನಾವಣಾಽಕಾರಿ ಡಾ. ಸಂತೋಷಕುಮಾರ ಬಿರಾದಾರ ಸಮ್ಮುಖದಲ್ಲಿ ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
    9 ನಿರ್ದೇಶಕ ಸ್ಥಾನಗಳಲ್ಲಿ ಗದಗ ಜಿಲ್ಲೆಯ ಗದಗ- ನರಗುಂದ ತಾಲೂಕು ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದಗೌಡ ಹಿರೇಗೌಡರ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 8 ಸ್ಥಾನಗಳಿಗೆ 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
    ಧಾರವಾಡ ಜಿಲ್ಲೆಯ ಧಾರವಾಡ, ಅಳ್ನಾವರ, ನವಲಗುಂದ, ಅಣ್ಣಿಗೇರಿ ತಾಲೂಕು ಕ್ಷೇತ್ರಕ್ಕೆ ಶಂಕರಪ್ಪ ಮುಗದ ಮತ್ತು ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿ ಸ್ಪಽðಸಿದ್ದಾರೆ. ಕಲಘಟಗಿ ತಾಲೂಕು ಸ್ಥಾನಕ್ಕೆ ಗೀತಾ ಮರಲಿಂಗಣ್ಣವರ ಮತ್ತು ಹನಮಂತಪ್ಪ ಕೊರವರ ಸ್ಪಽðಸಿದ್ದಾರೆ. ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲೂಕು ಕ್ಷೇತ್ರದಲ್ಲಿ ಗಂಗಪ್ಪ ಮೊರಬದ ಮತ್ತು ಸುರೇಶ ಬಣವಿ ಕಣದಲ್ಲಿದ್ದಾರೆ.
    ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಕ್ಷೇತ್ರದಲ್ಲಿ ಗದಿಗೆಪ್ಪ ಕಿರೇಸೂರ ಮತ್ತು ನೀಲಕಂಠಪ್ಪ ಅಸೂಟಿ, ಮುಂಡರಗಿ, ಶಿರಹಟ್ಟಿ, ಲಕ್ಷೆ÷್ಮÃಶ್ವರ ತಾಲೂಕು ಕ್ಷೇತ್ರದಲ್ಲಿ ಲಿಂಗರಾಜಗೌಡ ಪಾಟೀಲ, ಶೇಖಣ್ಣ ಕಾಳೆ ಸ್ಪಽðಸಿದ್ದಾರೆ.
    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಕ್ಷೇತ್ರಕ್ಕೆ ಉಮಾಮಹೇಶ್ವರ ಹೆಗಡೆ, ಸುರೇಶ್ಚಂದ್ರ ಹೆಗಡೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಕ್ಷೇತ್ರಕ್ಕೆ ಪರಶುರಾಮ ನಾಯ್ಕ, ಮಂಜುನಾಥ ಹೆಗಡೆ ಮತ್ತು ಸಾಧನಾ ರಾಜೇಶ ಭಟ್ಟ, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಕ್ಷೇತ್ರಕ್ಕೆ ಪ್ರಶಾಂತ ಸಭಾಹಿತ, ಶಂಕರ ಹೆಗಡೆ ಸ್ಪಽðಸಿದ್ದಾರೆ.

    613 ಮತದಾರರು: ಧಾರವಾಡ ಜಿಲ್ಲೆಯಲ್ಲಿ 188 ಮತದಾರರು, ಗದಗ ಜಿಲ್ಲೆಯಲ್ಲಿ 171, ಉತ್ತ ಕನ್ನಡ ಜಿಲ್ಲೆಯಲ್ಲಿ 254 ಸೇರಿ 613 ಮತದಾರರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಬಹುತೇಕ ಹಳಬರೇ ಸ್ಪಽðಸಿದ್ದು, ಜಿದ್ದಾಜಿದ್ದಿ ಜೋರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts