More

    ವಚನ ಸಾಹಿತ್ಯ ಸಂರಣೆಗೆ ಜೀವನ ಮುಡಿಪು

    ಇಂಡಿ: ಡಾ..ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಣೆಗೆ ಜೀವನ ಮುಡಿಪಾಗಿಟ್ಟ ಮಹನೀಯರು. ನಾನಾಕಡೆ ಸಂಚರಿಸಿ ಶರಣರ ಸಾವಿರಾರು ವಚನಗಳನ್ನು ಕಷ್ಟಪಟ್ಟು ಸಂಗ್ರಹಿಸಿ ನಮ್ಮೆಲ್ಲರಿಗೆ ಲಭ್ಯವಾಗುವಂತೆ ಮಾಡಿದ ಶ್ರೇಯಸ್ಸು ಡಾ. ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.

    ಡಾ..ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್​, ಕೆಜಿಎಸ್​, ಯುಬಿಎಸ್​ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ವಚನಕಾರರು ವಚನಗಳ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಬಿತ್ತರಿಸಿ, ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟಿದ್ದಾರೆ. ಸಮಾನತೆ, ಸಹಬಾಳ್ವೆ, ಭ್ರಾತೃತ್ವ, ಸಹಾನುಭೂತಿಯಂತಹ ಚಿಂತನೆಗಳನ್ನು ಸಾರಿದ್ದಾರೆ. ಆ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

    ಶಿಕ ಎಸ್​.ಆರ್​.ಚಾಳೇಕರ ಮಾತನಾಡಿ, .ಗು.ಹಳಕಟ್ಟಿ ಅವರು ಚಿಕ್ಕಂದಿನಲ್ಲಿ ಮಂಚಾಲೆ ಅವರ ಮನೆಗೆ ಹೋಗಿದ್ದಾಗ ತಾಳೆ ಗರಿಯ ವಚನಗಳ ಕಟ್ಟು ನೋಡಿ ಆಕರ್ಷಿತರಾಗಿ ಸಂಗ್ರಹದಲ್ಲಿ ತೊಡಗಿಕೊಂಡರು. ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಅವರು ವಕೀಲ ವೃತ್ತಿಯನ್ನು ತ್ಯಜಿಸಿ ವಚನ ಸಾಹಿತ್ಯ ಸಂರಣೆಗೆ ನಿಂತರು ಎಂದರು.

    ವಿಜ್ಞಾನ ಶಿಕಿ ಎ್​.ಎ.ಹೊರ್ತಿ ಮಾತನಾಡಿ, ಮುಂದಿನ ಪೀಳಿಗೆಗೆ ವಚನಗಳನ್ನು ತಲುಪಿಸುವ ನಿಟ್ಟಿನಲ್ಲಿ ವಚನಗಳ ಮುದ್ರಣಕ್ಕೆ ಮುಂದಾದ ಹಳಕಟ್ಟಿ ಅವರು ಮುದ್ರಣಾಲಯವನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ತಲೆದೋರಿದಾಗ ಮನೆಯನ್ನೇ ಮಾರಾಟ ಮಾಡಿ ಮುದ್ರಣಾಲಯ ಮುನ್ನಡೆಸಿದ್ದು ಸ್ಮರಣೀಯ ಎಂದು ಹೇಳಿದರು. ಕೆಬಿಎಸ್​ ಮುಖ್ಯಶಿಕ ಅನಿಲ ಪತಂಗಿ ಅಧ್ಯತೆ ವಹಿಸಿದ್ದರು.

    ಮುಖ್ಯಶಿಕರಾದ ವಿ.ವೈ.ಪತ್ತಾರ, ಎ.ಎಂ.ಬೆದ್ರೇಕರ ಹಾಗೂ ಶಿಕರಾದ ಜೆ.ಎಂ. ಪತಂಗಿ, ಎಸ್​.ಎಂ. ಪಂಚಮುಖಿ, ಎಸ್​.ಡಿ. ಬಿರಾದಾರ, ಎಸ್​.ಬಿ. ಕುಲಕರ್ಣಿ, ಸಾವಿತ್ರಿ ಸಂಗಮದ, ಎನ್​.ಬಿ. ಚೌಧರಿ, ಎಸ್​.ಪಿ. ಪೂಜಾರಿ, ಎಸ್​.ಎನ್​. ಡಂಗಿ, ಜೆ.ಸಿ. ಗುಣಕಿ, ಎಸ್​.ವಿ. ಬೇನೂರ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಇತರರಿದ್ದರು.

    See also  ಆರ್ಯ ಈಡಿಗ ಸಮುದಾಯ ಸಂಘಟಿತವಾಗಬೇಕಿದೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts