More

    VIDEO| ತುಂಡು ತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆ

    ದೆಹಲಿ: ಕಳೆದ ವರ್ಷ ನಡೆದ ಭೀಕರ ಶ್ರದ್ಧಾ ವಾಕರ್ ಪ್ರಕರಣದಂತೆಯೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ನಡೆದಿದ್ದು, ಮಹಿಳೆಯೊಬ್ಬಳನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆ ಬದಿ ಎಸೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ದೇಹ ತುಂಡಾಗಿರುವ ಕಾರಣ ಈ ಭೀಕರ ಕೃತ್ಯದಲ್ಲಿ ಮೃತ ಹೊಂದಿದ ಮಹಿಳೆಯ ಗುರುತು ಇನ್ನು ಪತ್ತೆಯಾಗಿಲ್ಲ. ಬುಧವಾರ ಬೆಳಿಗ್ಗೆ 9.15ರ ಸುಮಾರಿಗೆ ಈ ಕುರಿತು ಮಾಹಿತಿಯನ್ನು ಸ್ವೀಕರಿಸಿದ ಪೊಲೀಸರು, ನಗರ ಗೀತಾ ಕಾಲೋನಿ ಫ್ಲೈಓವರ್ ಬಳಿ ಆಗಮಿಸಿದ್ದಾರೆ.

    ಈ ವೇಳೆ ಫ್ಲೈಓವರ್ ಬಳಿ ಎರಡು ಕಪ್ಪು ಪಾಲಿಥಿನ್ ಚೀಲಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ತಲೆಯಿದ್ದರೆ, ಇನ್ನೊಂದು ಚೀಲದಲ್ಲಿ ದೇಹದ ಇತರ ಭಾಗಗಳು ಪತ್ತೆಯಾಗಿವೆ. ದೇಹದ ಉಳಿದ ಭಾಗಗಳನ್ನು ಪತ್ತೆ ಮಾಡಲು ಪೊಲೀಸ್ ತಂಡವು ಫ್ಲೈಓವರ್ ಬಳಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ 27 ವರ್ಷದ ಮುಂಬೈ ಮಹಿಳೆ ಶ್ರದ್ಧಾ ವಾಕರ್ ಅವರನ್ನು ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ ನಂತರ ರಾಜಧಾನಿಯಲ್ಲಿ ಈ ಭಯಾನಕ ಅಪರಾಧ ನಡೆದಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts