More

    ಆರೋಗ್ಯದಲ್ಲಿ ಏರುಪೇರಾದರು ಸತ್ಯಾಗ್ರಹ ಮುಂದುವರಿಸುವೆ ಎಂದಿದ್ದೇಕೆ ಸಚಿವೆ ಅತಿಶಿ

    ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ತೀವ್ರ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿಯ ಜಲ ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಗೊತ್ತೆ ಇದೆ. ದೆಹಲಿಗೆ ತನ್ನ ಪಾಲಿನ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅತಿಶಿ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೋಮವಾರ (ಜೂನ್​​24) ನಾಲ್ಕನೇ ದಿನವಾಗಿದೆ. ಈ ಕುರಿತು ಅತಿಶಿ ಅವರು ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುವವರೆಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ತಿಳಿಸಿದರು.

    ಇದನ್ನು ಓದಿ: ದೆಹಲಿ ಹೈಕೋರ್ಟ್​​ ಆದೇಶದ ವಿರುದ್ಧ ಸಿಎಂ ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​​

    ಆರೋಗ್ಯದ ದುಷ್ಪರಿಣಾಮಗಳ ಹೊರತಾಗಿಯೂ ಹರಿಯಾಣ ದೆಹಲಿಗೆ ನ್ಯಾಯಯುತವಾದ ನೀರನ್ನು ಬಿಡುಗಡೆ ಮಾಡುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಸಚಿವೆ ಅತಿಶಿ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅದಷ್ಟೇ ಅಲ್ಲದೆ, “ನನ್ನ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವು ಕುಸಿಯುತ್ತಿದೆ. ನನ್ನ ತೂಕವೂ ಕಡಿಮೆಯಾಗಿದೆ. ತುಂಬಾ ಅಧಿಕವಾಗಿರುವ ಕೀಟೋನ್ ಮಟ್ಟಗಳು ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ನನ್ನ ದೇಹ ಎಷ್ಟೇ ನೋವು ಅನುಭವಿಸಿದರೂ ಹರಿಯಾಣ ನೀರು ಬಿಡುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

    ಅವರ ಆರೋಗ್ಯವನ್ನು ಭಾನುವಾರ ವೈದ್ಯರು ಪರೀಕ್ಷಿಸಿದ್ದಾರೆ ಎಂದು ತಿಳಿಸಿದ ಅವರು, ಕಳೆದ ಮೂರು ವಾರಗಳಲ್ಲಿ ಹರಿಯಾಣವು ರಾಷ್ಟ್ರ ರಾಜಧಾನಿಗೆ ಬಿಡುಗಡೆ ಮಾಡಲಾದ ನೀರಿನಲ್ಲಿ ದೆಹಲಿಯ ಪಾಲನ್ನು ದಿನಕ್ಕೆ 100 ಮಿಲಿಯನ್ ಗ್ಯಾಲನ್‌ಗಳಷ್ಟು (MGD) ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ. 100 ಎಂಜಿಡಿ ಕಡಿಮೆ ನೀರಿರುವ ಕಾರಣ ದೆಹಲಿಯಲ್ಲಿ ನೀರಿನ ಕೊರತೆ ಉಂಟಾಗಿದ್ದು ಇಲ್ಲಿನ 28 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದಿದ್ದಾರೆ.

    ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಿಯೋಗದೊಂದಿಗೆ ಭಾನುವಾರ ಸಭೆ ನಡೆಸಿದರು. ಸಭೆಯ ನಂತರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು, ತಮ್ಮ ರಾಜ್ಯವು ನಗರಕ್ಕೆ ಹೆಚ್ಚುವರಿ ನೀರನ್ನು ನೀಡಬಹುದೇ ಎಂದು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು. (ಏಜೆನ್ಸೀಸ್​​)

    ಕಲ್ಕಿ 2898 AD; ಮುಂಗಡ ಟಿಕೆಟ್​ ಬುಕ್ಕಿಂಗ್​​ನ​​ ಮೊದಲ ದಿನವೇ ಗಳಿಸಿದ್ದು ಎಷ್ಟು ಗೊತ್ತಾ?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts