More

    ಗರ್ಭಿಣಿ ನಾಯಿಯನ್ನು ಅಮಾನುಷವಾಗಿ ಥಳಿಸಿದ ವಿದ್ಯಾರ್ಥಿಗಳು; ನರಳಿ ಪ್ರಾಣಬಿಟ್ಟ ಶ್ವಾನ!

    ನವದೆಹಲಿ: ಗರ್ಭಿಣಿ ನಾಯಿಯನ್ನು ಅಮಾನುಷವಾಗಿ ಥಳಿಸುವ ಮೂಲಕ ನಾಲ್ವರು ವಿದ್ಯಾರ್ಥಿಗಳು ಕ್ರೌರ್ಯ ಮರೆದಿದ್ದಾರೆ. ವಿದ್ಯಾರ್ಥಿಗಳ ಈ ಕೃತ್ಯ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗರ್ಭಿಣಿ ನಾಯಿಗೆ ಚಿತ್ರಹಿಂಸೆ ಕೊಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ವಿದ್ಯಾರ್ಥಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಓಖ್ಲಾದ ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ತೊಡಗಿದ್ದಾರೆ. ಇವರ ಅಮಾನುಷ ಕೃತ್ಯದಿಂದ ಗರ್ಭಿಣಿಯಾಗಿದ್ದ ನಾಯಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಕೋಲು ಹಾಗೂ ಕಬ್ಬಿಣದ ರಾಡ್​​ಗಳ ಸಹಾಯದಿಂದ, ಗರ್ಭಿಣಿಯಾಗಿದ್ದ ನಾಯಿಯನ್ನು ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಚಿತ್ರಹಿಂಸೆ ನೀಡುತ್ತಾ, ಸಂಭ್ರಮಪಟ್ಟಿದ್ದಾರೆ. ಈ ಘಟನೆ ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ.

    ವಿದ್ಯಾರ್ಥಿಗಳು ಗುಂಪಾಗಿ ಸೇರಿಕೊಂಡು ಈ ಕೃತ್ಯ ಮಾಡಿದ್ದಾರೆ. ನಾಯಿ ಬೊಗಳುತ್ತಿತ್ತು. ಇದರಿಂದ ಸಿಟ್ಟಾದ ವಿದ್ಯಾರ್ಥಿಗಳು ನಾಯಿಯನ್ನು ಥಳಿಸಲು ಮುಂದಾಗಿದ್ದಾರೆ ಎಂದು ವಿಚಾರಣೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಇನ್ನೊಬ್ಬ ಯುವಕ ನಾಯಿಯನ್ನು ಹುಲ್ಲು ಹಾಸಿನ ಮೇಲೆ ಎಳೆದುಕೊಂಡು ಹೋಗಿದ್ದಾನೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts