More

    ಅಬಕಾರಿ ನೀತಿ ಹಗರಣ: ಕೆ. ಕವಿತಾ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿ ತಿರಸ್ಕೃತ!

    ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆಯ ಎರಡು ಪ್ರಕರಣಗಳಲ್ಲಿ ಬಂಧನದಲ್ಲಿರುವ ಬಿಆರ್​ಎಸ್​ ನಾಯಕಿ ಕೆ. ಕವಿತಾ ಅವರು ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಮೇ 28 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ತೀರ್ಪನ್ನು ಕಾಯ್ದಿರಿಸಿದ್ದರು.

    ಇದನ್ನೂ ಓದಿ: ಮೈಸೂರು ಮುಡಾದಲ್ಲಿ ಹಗರಣ ಆರೋಪ: ಸೈಟುಗಳ ಹಂಚಿಕೆ ರದ್ದು, ಅಧಿಕಾರಿಗಳ ತಲೆದಂಡ

    ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣ ಮತ್ತು ಇಡಿ ವಿಚಾರಣೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿದ್ದವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕವಿತಾ ಅವರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಕವಿತಾ ಜಾಮೀನು ಅರ್ಜಿಗೆ ಸಿಬಿಐ ಮತ್ತ ಇಡಿ ಆಕ್ಷೇಪ ವ್ಯಕ್ತಪಡಿಸಿದ್ದವು.

    ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ 50 ಆರೋಪಿಗಳ ಕವಿತಾ ಒಬ್ಬರೇ ಮಹಿಳೆ. ಇದರಿಂದ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಬೇಕು ಎಂದು ಕವಿತಾ ಪರ ವಕೀಲರು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್​ 15 ರಂದು ಜಾರಿ ನಿರ್ದೇಶನಾಲಯ ಬಿಆರ್​ಎಸ್ ನಾಯಕಿ ಕೆ.ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ಬಂಧಿಸಿತ್ತು.

    ರಾಹುಲ್ ಹಿಂದೂಗಳನ್ನು ಅವಮಾನಿಸಿಲ್ಲ: ಸಹೋದರನ ಬೆನ್ನಿಗೆ ನಿಂತ ಪ್ರಿಯಾಂಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts