More

    ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!

    ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಸರಣಿ ಜಯ ಸಾಧಿಸುತ್ತಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಅಫ್ಘಾನಿಸ್ತಾನ ಅನಿರೀಕ್ಷಿತ ಆಘಾತ ನೀಡಿದೆ. ನಿನ್ನೆ (ಜೂನ್​ 22) ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ 21 ರನ್​ಗಳ ಜಯ ಸಾಧಿಸಿದೆ. 149 ರನ್​ಗಳ ಗುರಿಯನ್ನು ಮುಟ್ಟಲಾಗದೇ ಕೇವಲ 127 ರನ್​ಗಳಿಗೆ ಕುಸಿಯುವ ಮೂಲಕ ಆಸಿಸ್​ ಪಡೆ ಮುಖಭಂಗ ಅನುಭವಿಸಿತು.

    ಇದುವರೆಗೂ ಆಸೀಸ್ ವಿರುದ್ಧ ಅಫ್ಘಾನಿಸ್ತಾನ ಗೆಲುವು ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅಫ್ಘಾನ್​ ಪಡೆ ಭರ್ಜರಿ ಜಯ ದಾಖಲಿಸಿದ್ದು, ಸಮೀಸ್​ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಇದಕ್ಕೂ ಮುಂಚೆ ಆಫ್ಘಾನ್​ ಭಾರತದ ವಿರುದ್ಧ ಹೀನಾಯವಾಗಿ ಸೋತಿತ್ತು. ಆಫ್ಘಾನ್​ ವಿರುದ್ಧ ಆಸಿಸ್​ ಪಡೆ ಹೀನಾಯವಾಗಿ ಸೋತರೂ ಭಾರತವನ್ನು ಗುರಿಯಾಗಿಸಿಕೊಂಡು ನಾಯಕ ಮಿಚೆಲ್ ಮಾರ್ಷ್ ಚೀಪ್ ಕಾಮೆಂಟ್ಸ್ ಮಾಡಿದ್ದಾರೆ.

    ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಮಹತ್ವದ ಕದನಕ್ಕೆ ವೇದಿಕೆ ಸಜ್ಜಾಗಿದೆ. ಸೂಪರ್ 8 ಭಾಗವಾಗಿ ಜೂನ್ 24 ರಂದು ಗ್ರೂಪ್ 1 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ತಾನ ಆಸೀಸ್​ಗೆ ಭಾರಿ ಶಾಕ್ ನೀಡಿದೆ. ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನದ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದರು. ಸೋಲಿನ ನಂತರ ಆಸೀಸ್ ನಾಯಕ ಮಿಚೆಲ್ ಮಾರ್ಷ್ ಭಾರತವನ್ನು ಗುರಿಯಾಗಿಸಿಕೊಂಡು ಕಳಪೆ ಕಾಮೆಂಟ್​ಗಳನ್ನು ಮಾಡಿದ್ದಾರೆ.

    ನಮಗೆ ನಮ್ಮ ತಂಡದ ಮೇಲೆ ನಂಬಿಕೆ ಇದೆ. ಆದರೆ, ಈ ಸೋಲು ತುಂಬಾ ನೋವು ತಂದಿದೆ. ನಾವು ಇದರಿಂದ ಬೇಗ ಹೊರಬರಬೇಕು. ನಾವು ಬಿದ್ದರೂ ಕೂಡ, ಇನ್ನೂ 36 ಗಂಟೆಗಳಲ್ಲಿ ನಾವು ಪವಾಡವನ್ನು ಸೃಷ್ಟಿಸಲಿದ್ದೇವೆ. ನಾವು ಭಾರತವನ್ನು ಸುಲಭವಾಗಿ ಸೋಲಿಸುತ್ತೇವೆ. ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ ಮತ್ತು ಇತಿಹಾಸವು ಕೂಡ ನಮ್ಮ ಪರವಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಭಾರತವನ್ನು ಸೋಲಿಸುತ್ತೇವೆ ಎಂದು ಮಾರ್ಷ್​ ಹೇಳಿದ್ದಾರೆ.

    2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಮಾರ್ಷ್ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವಿಶ್ವಕಪ್​ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್​ಗೆ ಎಂಟ್ರಿಯಾಗಿದ್ದ ಭಾರತವನ್ನು ಆಸಿಸ್​ ಪಡೆ ಸೋಲಿಸಿ ಟ್ರೋಫಿ ಜಯಿಸಿತ್ತು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಮಾರ್ಷ್​ ಕಾಮೆಂಟ್​ ಮಾಡಿದ್ದಾರೆ. ಆದರೆ, ಎಲ್ಲ ದಿನ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ಮಾರ್ಷ್​ ಮರೆತಿರುವಂತೆ ಕಾಣುತ್ತದೆ.

    ಮಾರ್ಷ್​ ಹೇಳಿಕೆ ಬೆನ್ನಲ್ಲೇ ಟೀಮ್​ ಇಂಡಿಯಾ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಆಸಿಸ್​ ಪಡೆ ಕಾಲೆಳೆಯುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧವೇ ಸೋತಿರುವಾಗ ನೀವು ಭಾರತವನ್ನು ಹೇಗೆ ಸೋಲಿಸುತ್ತೀರಿ ಎಂದು ಮಾರ್ಷ್​ ಹೇಳಿಕೆಯನ್ನು ಅಣಕಿಸುತ್ತಿದ್ದಾರೆ. (ಏಜೆನ್ಸೀಸ್​)

    ಆಕೆ 150 ರೂಪಾಯಿಗೆ ಸಿಗ್ತಾಳೆ! ವಿದೇಶಿ ಮಹಿಳೆಯರಿಗೆ ಯುವಕನ ಕಿರುಕುಳ, ಕ್ರಮಕ್ಕೆ ಆಗ್ರಹ

    ಡಿಎಸ್​ಪಿ ಆಗಿದ್ದವರು ಈಗ ಕಾನ್ಸ್​ಟೆಬಲ್!​ ಮಹಿಳಾ ಪೇದೆ ಜತೆ ಬೆತ್ತಲಾಗಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಹಿಂಬಡ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts